More

    VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!

    ಭೋಪಾಲ್​: ಮಧ್ಯಪ್ರದೇಶದ ಸಿಎಂ ಶಿವರಾಜ್​ ಸಿಂಗ್ ಚೌಹಾನ್​ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ದನಿಗೂಡಿಸಿ, ಸ್ನೇಹದ ಬಗೆಗಿನ ಶೋಲೇ ಚಿತ್ರದ ಹಿಟ್​ ಗೀತೆಯನ್ನು ಹಾಡಿದ ಪ್ರಸಂಗ ನಿನ್ನೆ ನಡೆದಿದೆ. ಭೋಪಾಲ್​ನ ವಿಧಾನಸಭಾ ಕಟ್ಟಡದಲ್ಲಿ ನಡೆದ ‘ಭುಟ್ಟಾ ಪಾರ್ಟಿ’ಯಲ್ಲಿ, “ಯೇ ದೋಸ್ತಿ ಹಂ ನಹೀ ಛೋಡೇಂಗೆ…” ಹಾಡನ್ನು ಪರಸ್ಪರ ಕೈಹಿಡಿದು ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

    ಈ ವಿಡಿಯೋ ತುಣುಕನ್ನು ಸಿಎಂ ಚೌಹಾನ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಈ ಬಾಲಿವುಡ್​ ಗೀತೆಯ ಅಸಲಿ ಜೋಡಿ ಕಲಾವಿದರಾದ ಅಮಿತಾಭ್​ ಬಚ್ಚನ್ ಮತ್ತು ಧರ್ಮೇಂದ್ರ ಅವರನ್ನು ತಮ್ಮ ಟ್ವೀಟ್​​ಗೆ ಟ್ಯಾಗ್​ ಮಾಡಿದ್ದಾರೆ. ವಿಜಯವರ್ಗೀಯ ಅವರೂ ಈ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ತಾವು ಬಿಜೆಪಿ ಯುವ ಮೋರ್ಚಾದಲ್ಲಿದ್ದ ದಿನಗಳಲ್ಲಿ ಈ ಹಾಡನ್ನು ಜೊತೆಯಾಗಿ ಹಾಡುತ್ತಿದ್ದ ನೆನಪುಗಳು ಮರುಕಳಿಸಿದವು ಎಂದು ಬರೆದಿದ್ದಾರೆ.

    ರಾಜ್ಯದ ವಿವಿಧ ಸಚಿವರು, ವಿರೋಧಪಕ್ಷದ ನಾಯಕ ಕಮಲ್​ನಾಥ್​, ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಶಾಸಕರು, ಪತ್ರಕರ್ತರು ಈ ಭುಟ್ಟಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!

    ಸೊಂಟ ಮತ್ತು ಬೆನ್ನು ನೋವು ತಡೆಯಲು ಈ ಯೋಗಾಸನ ಉಪಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts