More

    VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!

    ದಮೋಹ್​: ಕರೊನಾ ಲಾಕ್​ಡೌನ್ ಅವಧಿಯಲ್ಲಿ ಅನೇಕರ ಸೃಜನಶೀಲತೆ ವಿಭಿನ್ನ ಮಾದರಿಯಲ್ಲಿ ಹೊರಹೊಮ್ಮಿತ್ತು. ಪೊಲೀಸರು ಕೂಡಾ ಹಿಂದೆ ಬಿದ್ದಿಲ್ಲ. ಇನ್ನೋವೇಟಿವ್ ಆಗಿ ಶಿಕ್ಷೆ ವಿಧಿಸುವ ಕ್ರಮವನ್ನು ಜಾರಿಗೆ ತಂದರು. ಅಲ್ಲದೆ ಅವುಗಳ ವಿಡಿಯೋ ಮಾಡಿ ಟ್ವಿಟರ್​, ಫೇಸ್​ಬುಕ್​ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಭೇಷ್ ಅನ್ನಿಸಿಕೊಂಡರು. ಇದರ ನಡುವೆ, ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಇಮೇಜ್ ಹೆಚ್ಚಿಸುವ ಕೆಲಸದಲ್ಲೂ ತೊಡಗಿದ್ದರು ಎಂಬುದೂ ವಾಸ್ತವ. ಅಂಥದ್ದೇ ಒಂದು ಪ್ರಯತ್ನ ಮಧ್ಯಪ್ರದೇಶದ ಸಬ್​ ಇನ್​ಸ್ಪೆಕ್ಟರ್ ಒಬ್ಬರು ಮಾಡಿದ್ದರು. ಅವರು ಸಿಂಗಂ ಸ್ಟಂಟ್ ಪ್ರದರ್ಶಿಸಿದ ವಿಡಿಯೋ ವೈರಲ್ ಕೂಡಾ ಆಗಿತ್ತು.

    ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಭಾರತಕ್ಕೆ ಕರೆತರಲು ಸೌದಿಗೆ ತೆರಳಿದ ಲೇಡಿ ಸಿಂಗಂ ಮೆರಿನ್​ ಜೋಸೆಫ್​

    ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ನರಸಿಂಗಗಢ ಪೊಲೀಸ್ ಪೋಸ್ಟ್​ನ ಇನ್​ಚಾರ್ಜ್​ ಸಬ್​ ಇನ್​ಸ್ಪೆಕ್ಟರ್ ಮನೋಜ್ ಯಾದವ್​ ಇಂತಹ ಸ್ಟಂಟ್ ಪ್ರದರ್ಶಿಸಿದ್ದರು. ಸಿಂಗಂ ಸಿನಿಮಾದಲ್ಲಿ ಅಜಯ್ ದೇವಗನ್ ಪ್ರದರ್ಶಿಸಿದ್ದ ಮಾದರಿಯಲ್ಲೇ ಚಲಿಸುತ್ತಿರುವ ಎರಡು ಕಾರುಗಳ ಮೇಲೆ ನಿಂತು ಈ ಸಾಹಸವನ್ನು ಮನೋಜ್ ಪ್ರದರ್ಶಿಸಿದ್ದರು. ಈ ಸಾಹಸದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಹೀರೋ ಎಂದು ಹೊಗಳಿದ್ದೇ ಹೊಗಳಿದ್ದು.. ಆದರೆ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ನಡೆ ಇಷ್ಟವಾಗಿರಲಿಲ್ಲ.

    ಇದನ್ನೂ ಓದಿ:   ಎಸ್​ಪಿ, ಕರ್ನಾಟಕದ ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ?

    ಮನೋಜ್​ಗೆ ಶೋಕಾಸ್ ನೋಟಿಸ್ ನೀಡಿ, ಈ ಸಾಹಸದ ಬಗ್ಗೆ ವಿವರಣೆ ಕೇಳಿದ್ದರು. ಮನೋಜ್ ಅವರಿಂದ ವಿವರಣೆ ಬಂದ ಬಳಿಕ ಇಲಾಖಾ ತನಿಖೆ ನಡೆಸಿ ಬಳಿಕ ಸೋಮವಾರ 5,000 ರೂಪಾಯಿ ದಂಡವನ್ನೂ ವಿಧಿಸಿದ್ದು ಈಗ ಸುದ್ದಿ. ಪೊಲೀಸ್ ಸಮವಸ್ತ್ರದಲ್ಲಿ ನಾಟಕೀಯ ನಡೆಯನ್ನು ವಿಡಿಯೋ ಶೂಟ್ ಮಾಡಿ ಪ್ರಸಾರ ಮಾಡಿದ್ದು ಇಲಾಖಾ ಶಿಸ್ತು ಉಲ್ಲಂಘನೆ ಎಂಬ ಕಾರಣವನ್ನೂ ಇಲಾಖೆ ನೀಡಿದೆ. (ಏಜೆನ್ಸೀಸ್​)

    VIDEO| ಲೇಡಿ ಸಿಂಗಂ ಹವಾ: ಲಾಕ್​ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರಿಗೆ ಖಡಕ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts