More

    ನೇಹಾ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ವಿಹಿಂಪ ಆಗ್ರಹ




    ಮಂಗಳೂರು : ಹುಬ್ಬಳ್ಳಿಯಲ್ಲಿ ಜಿಹಾದಿ ಫಯಾಜ್ ಎಂಬಾತ ವಿದ್ಯಾರ್ಥಿನಿ ನೇಹಾಳನ್ನು ಹತ್ಯೆ ನಡೆಸಿದ ಕೃತ್ಯದ ಹಿಂದಿರುವ ಸಂಚನ್ನು
    ಬಯಲುಗೊಳಿಸಲು ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದ್ದು, ಆತ್ಮರಕ್ಷಣೆಗಾಗಿ ಮಹಿಳೆಯರು ಕಿರುಕತ್ತಿ ಹೊಂದಲು ಕಾನೂನು ಜಾರಿಗೆ ತರಬೇಕು ಎಂದು ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.
    ಹಾಡಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಎದುರು ನೇಹಾಳನ್ನು ಅಮಾನುಷವಾಗಿ ಹತ್ಯೆ ನಡೆಸಿದ್ದು ಹಿಂದುಗಳಲ್ಲಿ
    ಭಯ ಹುಟ್ಟಿಸುವ ಕೃತ್ಯವಾಗಿದೆ. ಇಡೀ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೃತ್ಯದ ಹಿಂದೆ ಮುಸ್ಲಿಂ ಜಿಹಾದಿ ಸಂಘಟನೆಗಳ ಕೈವಾಡವಿರಬಹುದು ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನೇಹಾಳ ತಂದೆ ಈ ಕೊಲೆ ಲವ್ ಜಿಹಾದ್‌ನಿಂದ ಆಗಿದೆ ಮತ್ತು ನೇಹಾಳಿಗೆ ನಿರಂತರ ಕಿರುಕುಳ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ.
    ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದುಗಳ ಮೇಲೆ ಇಸ್ಲಾಮಿಕ್ ಆಕ್ರಮಣಗಳು ನಡೆಯುತ್ತಲೇ ಇದೆ. ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ, ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ಹನುಮಾನ್ ಚಾಲೀಸಾ ವಿಚಾರದಲ್ಲಿ ಹಿಂದು
    ಯುವಕನ ಕೊಲೆ ಯತ್ನ, ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಕಾರು ಅಡ್ಡಕಟ್ಟಿ ಹಲ್ಲೆ, ಮಂಗಳೂರಿನಲ್ಲಿ ಮುಸ್ಲಿಂ ಗೂಂಡಾಗಳಿಂದ ಶಾಸಕರನ್ನು ತಡೆದು ಚುನಾವಣಾ ಪ್ರಚಾರಕ್ಕೆ ಅಡ್ಡಿ ..ಹೀಗೆ ರಾಜ್ಯದಲ್ಲಿ ಹಿಂದುಗಳ ಪರಿಸ್ಥಿತಿ ಟಿಪ್ಪು ಆಡಳಿತ ನೆನಪಿಸುವಂತೆ ಮಾಡುತ್ತಿದೆ ಎಂದು ಅವರು ಹೇಳಿದರು.
    ಈ ಎಲ್ಲ ಕೃತ್ಯಕ್ಕೆ ಕಾಂಗ್ರೆಸ್ ಸರ್ಕಾರದ ಮೌನ ಬೆಂಬಲವಿದ್ದಂತೆ ಕಾಣುತ್ತಿದೆ. ಯಾವುದೇ ಮತಾಂಧ ಜಿಹಾದಿಗಳನ್ನು ಬಂಧಿಸದೆ ಅವರಿಗೆ ಸರ್ಕಾರ ಸಹಕಾರ ನೀಡುತ್ತಿದೆ. ಹಿಂದುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
    ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಪ್ರೀತಮ್ ಕಾಟಿಪಳ್ಳ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಶ್ವೇತಾ ಅದ್ಯಪಾಡಿ ಉಪಸ್ಥಿತರಿದ್ದರು.

    *ಆತ್ಮರಕ್ಷಣೆಗೆ ಕಿರುಕತ್ತಿ
    ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಯುವತಿಯರು ಬಲವಂತದ ಪ್ರೀತಿ ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಹಲ್ಲೆ, ಕೊಲೆಗಳು ನಡೆಯುತ್ತಿವೆ. ಹಿಂದು, ಕ್ರೈಸ್ತ ಯುವತಿಯರು ಮತ್ತು ಅವರ ಕುಟುಂಬಗಳು ಲವ್ ಜಿಹಾದಿಗೆ ಬಲಿಯಾಗುತ್ತಿವೆ. ಯುವತಿಯರ ರಕ್ಷಣೆ ಸಮಾಜದ ಕರ್ತವ್ಯವಾಗಿದ್ದು, ಸರ್ಕಾೃ ಗಂಭೀರವಾಗಿ ಪರಿಗಣಿಸಿ ಯುವತಿಯರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ಸಿಖ್ ಮಹಿಳೆಯರು ತಮ್ಮ ರಕ್ಷಣೆಗೆ ಧರಿಸುವ ಕಿರುಕತ್ತಿ (ಕಿರ್ಪಣ್)ಯಂತೆ ಕರ್ನಾಟಕದಲ್ಲೂ ಮಹಿಳೆಯರು ತಮ್ಮ ಆತ್ಮರಕ್ಷಣೆಗೆ ಕಿರುಕತ್ತಿ ಹೊಂದಲು ಕಾನೂನು ತರಬೇಕು .ಯುವತಿಯರ ಆತ್ಮರಕ್ಷಣೆಗೆ ತರಬೇತಿ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳಬೇಕು.

    -ಶರಣ್ ಪಂಪ್‌ವೆಲ್, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts