More

    ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ ಕಾರ್ಮಿಕರು: ಕೊರೆಯುವಿಕೆ ಮುಂದುವರಿಯಲಿದೆ ಇನ್ನೂ 4 ದಿನ…

    ನವದೆಹಲಿ: ಉತ್ತರಕಾಶಿ ಜಿಲ್ಲೆಯ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರುವ ರಕ್ಷಣಾ ಕಾರ್ಯಾಚರಣೆಯು ಭಾನುವಾರ ಹದಿನೈದನೇ ದಿನಕ್ಕೆ ಕಾಲಿರಿಸಿದ್ದು, ಭಾರತೀಯ ಸೇನೆ ಕೂಡ ಕೈಜೋಡಿಸಿದೆ. ಆದರೆ ಕಾರ್ಯಾಚರಣೆಯಲ್ಲಿ ಬಳಸುತ್ತಿದ್ದ ಅಮೆರಿಕದ ದೈತ್ಯ ಆಗರ್​ ಯಂತ್ರ ಕಬ್ಬಿಣದ ಸರಳುಗಳಿಗೆ ಸಿಲುಕಿ ಛಿದ್ರವಾದ ನಂತರ ಯಂತ್ರಗಳಬಳಕೆ ನಿಲ್ಲಿಸಿದ್ದು, ಕೈಯ್ಯಲ್ಲಿ ಡ್ರಿಲ್ಲಿಂಗ್​ ಯಂತ್ರಗಳನ್ನು ಹಿಡಿದು ಮಣ್ಣು, ಕಲ್ಲು ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಇದು ಇನ್ನೂ 4ದಿನ ಮುಂದುವರಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ: ಅಮೆರಿಕಾ ಆಗರ್​ ಯಂತ್ರ ಮುರಿದ ಬಳಿಕ ಭಾರತೀಯ ಸೇನೆ ಎಂಟ್ರಿ…
    ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಅಹ್ಮದ್ ಮಾತನಾಡಿ, ಕಾರ್ಮಿಕರನ್ನು ರಕ್ಷಿಸಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಸುರಂಗಕ್ಕೆ ಲಂಬವಾಗಿ ಕೊರೆಯುವಿಕೆಯನ್ನು ಸೇನಾ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕಾರ್ಮಿಕರು ಕೈಯ್ಯಲ್ಲಿ ಹಿಡಿಯುವ ಡ್ರಿಲ್ಲಿಂಗ್​ ಯಂತ್ರಗಳನ್ನು ಬಳಸಿ ಮಾಡುತ್ತಿದ್ದಾರೆ. ಇದು ಇನ್ನೂ 4 ದಿನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

    ನವೆಂಬರ್ 12 ರಿಂದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ಭೂಕುಸಿತದ ನಂತರ ಕುಸಿದು ಬಿದ್ದಾಗ 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.

    ಇನ್ನು ಕಾರ್ಮಿಕರನ್ನು ಹೊರತರಲು ಉಕ್ಕಿನ ಪೈಪ್ ಅಳವಡಿಸುತ್ತಿದ್ದು, ಶೇ.90ರಷ್ಟು ಪೂರ್ಣಗೊಂಡಿದೆ. ಕೇವಲ ಶೇ.10ರಷ್ಟು ಸುರಂಗ ಕೊರೆಯುವ ಕಾಮಗಾರಿ ಬಾಕಿ ಇದೆ. ಅಂದರೆ 10-12 ಮೀಟರ್ ಕೊರೆಯುವ ಕೆಲಸ ಬಾಕಿಯಿರುವುದರಿಂದ ಸಿಕ್ಕಿಬಿದ್ದಿರುವ ಕಾರ್ಮಿರು ಸಮೀಪಿಸಿರುವುದರಿಂದ ಭಾರಿ ಯಂತ್ರಗಳ ಬಳಕೆ ನಿಲ್ಲಿಸಿ ಕೈಗಳಲ್ಲಿ ಬಳಸುವ ಸಣ್ಣ ಯಂತ್ರಗಳನ್ನು ಬಳಸಿ ಕಲ್ಲು, ಮಣ್ಣು ಮತ್ತಿತರ ಅವಶೇಷಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ತಿಕ ಪೌರ್ಣಮಿಗೆ ಲಕ್ಷಾಂತರ ಹಿಂದು-ಸಿಕ್ಕರು ಮೋಕ್ಷ ಸ್ನಾನ ಮಾಡುತ್ತಾರೆ? ಆ ಪವಿತ್ರ ಸರೋವರ ಇರುವುದಾದರೂ ಎಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts