More

    ‘ವಾತ್ಸಲ್ಯ’ ಕಾರ್ಯಕ್ರಮ ರಾಜ್ಯಕ್ಕೆ ವಿಸ್ತರಣೆ ಚಿಂತನೆ: ಸಚಿವ ಬೊಮ್ಮಾಯಿ ಮಾಹಿತಿ

    ಕಾರ್ಕಳ: ಮೂರನೇ ಅಲೆ ಬಂದಲ್ಲಿ ಮಕ್ಕಳಿಗೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳ ಆರೋಗ್ಯ ತಪಾಸಣೆ ಮುಖ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಆ.15ರೊಳಗೆ 2.40 ಲಕ್ಷ ಮಕ್ಕಳ, ಕಾರ್ಕಳದಲ್ಲಿ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಕಾರ್ಕಳದ ಪೆರ್ವಾಜೆ ಸುಂದರ ಪುರಾಣಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ 15 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ವಾತ್ಸಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ರಾಜ್ಯಕ್ಕೆ ವಿಸ್ತರಿಸುವ ಚಿಂತನೆಯಿದೆ ಎಂದು ಹೇಳಿದರು.

    ತಂತ್ರಜ್ಞಾನ ಯುಗದ ಕಾಲಘಟ್ಟದಲ್ಲಿ, ಜನಮಾನಸದಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳ ಮಧ್ಯೆ ಅಂತಃಕರುಣೆ ಮರೆತಿರುವ ಹೊತ್ತಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ‘ವಾತ್ಸಲ್ಯ’ ಹೆಸರು ಔಚಿತ್ಯವಾದುದು ಎಂದರು.
    ರಾಜ್ಯದಲ್ಲಿ 24,000 ಆಕ್ಸಿಜನ್ ಬೆಡ್, 5,000 ವೆಂಟಿಲೇಟರ್ ಹಾಗೂ 2000 ಐಸಿಯುಗಳನ್ನು ಕಳೆದ ಐದು ತಿಂಗಳಲ್ಲಿ ನಿರ್ಮಿಸಲಾಗಿದೆ. 2 ಸಾವಿರಕ್ಕಿಂತ ಹೆಚ್ಚು ವೆಂಟಿಲೇಟರ್‌ಗಳ ವ್ಯವಸ್ಥೆಯನ್ನು ಮೊದಲ ಮತ್ತು ಎರಡನೇ ಅಲೆಯ ಮಧ್ಯೆ ಕಲ್ಪಿಸಿದ್ದೇವೆ.
    ಶಾಸಕ ವಿ.ಸುನೀಲ್ ಕುಮಾರ್ ಪ್ರಸ್ತಾವಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ, ಎಎನ್‌ಎಫ್ ಎಸ್‌ಪಿ ನಿಖಿಲ್, ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು, ತಹಸೀಲ್ದಾರ್ ಪುರಂದರ ಹೆಗ್ಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಬಿಇಒ ಶಶಿಧರ್ ಜಿ.ಎಸ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಮುಖ್ಯ ಶಿಕ್ಷಕಿಯರಾದ ಹರ್ಷಿಣಿ, ಲಕ್ಷ್ಮಿ ಹೆಗ್ಡೆ ಉಪಸ್ಥಿತರಿದ್ದರು.
    ಸುಮಿತ್ ಶೆಟ್ಟಿ ಸ್ವಾಗತಿಸಿ, ಹರೀಶ್ ನಾಯಕ್ ನಿರೂಪಿಸಿದರು.

    ಕೇಂದ್ರದ ನೆರವಿನಿಂದ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯನ್ನು ಸರ್ಕಾರ ನಿಭಾಯಿಸಿದೆ. ಬಹುತೇಕ ರಾಜ್ಯಗಳು ಅಪಾರ ಸಾವು- ನೋವಿಗೆ ಒಳಗಾಗಿವೆ. ರಾಜ್ಯದಲ್ಲಿ ಹೆಚ್ಚಿನ ತೊಂದರೆ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಒಂದು ದಿನದ ಒಂದು ನಿಮಿಷವೂ ಆಕ್ಸಿಜನ್ ಕೊರತೆಯಾಗದಂತೆ ರಾಜ್ಯ, ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದು ಶ್ಲಾಘನೀಯ.
    ಬಸವರಾಜ್ ಬೊಮ್ಮಾಯಿ, ಗೃಹಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts