More

    ವರ್ತೂರು ಪ್ರಕಾಶ್​ ಕಿಡ್ನಾಪ್​ ಕೇಸ್​ಗೆ 4 ದಿಕ್ಕು! ಬಯಲಾಯ್ತು ಮಾಜಿ ಸಚಿವನ ಟೀಚರ್​ ಜತೆಗಿನ ಕಾರುಬಾರು

    ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್​ ಕಿಡ್ನಾಪ್​ ಕೇಸ್​ ಇದೀಗ ರೋಚಕ ತಿರುವನ್ನು ಪಡೆದುಕೊಂಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಆಯಾಮದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದು ಆ ಆಯಾಮಗಳು, ಯಾರ್ಯಾರ ಮೇಲಿದೆ ಅನುಮಾನ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ‘ವಾಟಾಳ್​ ಒಬ್ಬ ಕುರಿ, ಆತನ ಮೇಲೆ ಯಾರು ಅಟ್ಯಾಕ್​ ಮಾಡ್ತಾರೆ?’ ವಾಟಾಳ್​ಗೆ ಹೀಯಾಳಿಸಿ ಸವಾಲೆಸೆದ ಶಾಸಕ

    ಮೊದಲನೇ ಆಯಾಮ:
    ವರ್ತೂರು ಪ್ರಕಾಶ್ ಅವರು ನಾಲ್ಕು ವರ್ಷಗಳ ಹಿಂದೆ 1,650 ಹಸುಗಳನ್ನ ಕೊಂಡು ತಂದಿದ್ದರು. ಇದಕ್ಕೆಂದು 19 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದರು. ಅದರಲ್ಲಿ ಕಳೆದ ನಾಲ್ಕು ವರ್ಷದಲ್ಲಿ 600 ಹಸುಗಳು ಸಾವನ್ನಪ್ಪಿವೆ. ವರ್ತೂರು ಹಸುಗಳಿಗೆ ರೋಗವಿದೆಯಂದು ಕೋಲಾರದಲ್ಲಿ ಪುಕಾರಾಗಿತ್ತು. ಆ ಕಾರಣ ವರ್ತೂರು ಡೈರಿಯಲ್ಲಿ ಹಾಲು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಪ್ರಕಾಶ್​ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. 19 ಕೋಟಿ ರೂಪಾಯಿ ಸಾಲದಲ್ಲಿ ಕೇವಲ 10 ಕೋಟಿ ರೂಪಾಯಿ ಹಿಂದಿರುಗಿಸಿದ್ದು, ಇನ್ನು 9 ಕೋಟಿ ರೂಪಾಯಿ ಬಾಕಿಯುಳಿಸಿಕೊಂಡಿದ್ದಾರೆ.

    ಎರಡನೇ ಆಯಾಮ:
    ವರ್ತೂರು ಪ್ರಕಾಶ್​ ಅವರು ಟೇಕಲ್ ಬಳಿ ಫಾರ್ಮ್ ಹೌಸ್ ಖರೀದಿಸಿದ್ದರು. ಫಾರ್ಮ್ ಹೌಸ್ ನೋಡಿಕೊಳ್ಳಲು ಮಹಿಳೆಯೋರ್ವರ ನೇಮಕ ಮಾಡಿದ್ದಾರೆ. ಆ ಮಹಿಳೆ ಜತೆ ಅವರಿಗೆ ಎರಡನೆ ಮದುವೆ ಆಗಿರುವ ಅನುಮಾನಗಳು ವ್ಯಕ್ತವಾಗಿವೆ. ಆಕೆಗೆ ಪ್ರಕಾಶ್​ ಅವರು ಟೀಚರ್ ಎಂದೇ ಕರೆಯುತ್ತಿದ್ದರು. ಈ ಹಿಂದೆಯೇ ಆ ಟೀಚರ್​ಗೆ ಮದುವೆಯಾಗಿ ಎರಡು ಗಂಡು ಮಕ್ಕಳಿದ್ದಾರೆ. ಆ ಪೈಕಿ ಮೊದಲನೆ ಮಗ ಹಾಗೂ ಪ್ರಕಾಶ್​ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಆತನೇ ಕಿಡ್ನಾಪ್​ ಮಾಡಿರಬಹುದು ಎನ್ನುವ ಅನುಮಾನವೂ ಇದೆ. ಇದನ್ನೂ ಓದಿ: ವರ್ತೂರು ಪ್ರಕಾಶ್ ಅಪಹರಣದ ಹಿಂದೆ ಲೇಡಿ ಕೈವಾಡ? ಕಾರಿನಲ್ಲಿ ಸಿಕ್ಕ ವಸ್ತುವಿನಿಂದ ಹೆಚ್ಚಾದ ಅನುಮಾನ

    ಮೂರನೇ ಆಯಾಮ:
    ವರ್ತೂರು ಅವರು ಚಿಂತಾಮಣಿ ಬಳಿ 85 ಎಕರೆ ಖರೀದಿಸಿದ್ದರು. ಅದರ ಸಾಲವನ್ನು ಇನ್ನು ಪಾವತಿಸಿರಲಿಲ್ಲ. ಅದೇ ಕಾರಣಕ್ಕೆ ಸಾಲಗಾರರು ಅಪಹರಿಸಿರಬಹುದು ಎನ್ನುವ ಅನುಮಾನವೂ ವ್ಯಕ್ತವಾಗಿದೆ.

    ನಾಲ್ಕನೆ ಆಯಾಮ:
    ಕಿಡ್ನ್ಯಾಪರ್ ಬಾಯಲ್ಲಿ ಬೆಂಗಳೂರು ಬಾಸ್ ಅನ್ನೋ ಪದ ಆಗಾಗ್ಗೆ ಕೇಳಿಬಂದಿರುವುದಾಗಿ ಪ್ರಕಾಶ್​ ಅವರು ತಿಳಿಸಿದ್ದಾರೆ. ಪ್ರತಿ ಬಾರಿ ಕರೆ ಬಂದಾಗಲು ಬೆಂಗಳೂರು ಬಾಸ್ ಎಂದೇ ಮಾತಾಡುತ್ತಿದ್ದದ್ದಾಗಿ ಹೇಳಲಾಗಿದೆ. ಈಗ ಯಾರು ಈ ಬೆಂಗಳೂರು ಬಾಸ್? ಬೆಂಗಳೂರು ಬಾಸ್​ಗೂ ಮಾಜಿ ಸಚಿವರಿಗೂ ಸಂಬಂಧವೇನು? ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts