More

    ವರ್ಷದೊಳಗೆ ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದೇಕೆ..?

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ಮಾನಕರ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದರು.
    ಜಿಲ್ಲೆಯ 58 ನೇ ಜಿಲ್ಲಾಽಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗಂಗುಬಾಯಿ ಅವರು, "ನಾನು ಜಿಲ್ಲೆಗೆ ಹೊಸಬಳಲ್ಲ. 2009 ರಲ್ಲಿ ಕುಮಟಾ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ.

    ಈಗಲೂ ಒಳ್ಳೆಯ ಕೆಲಸ ಮಾಡುವ ಇಚ್ಛೆ ಹೊಂದಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ಜನ ಬಹಳ ಒಳ್ಳೆಯ ಮನಸ್ಸಿನವರು. ನಾನು ಈ ಹಿಂದೆ ಕೆಲಸ ಮಾಡಿದಾಗ ಬಹಳ ಪ್ರೀತಿ ತೋರಿದ್ದಾರೆ. ಈಗಲೂ ನಾನು ಸಹಕಾರ ಕೋರುತ್ತೇನೆ ಎಂದರು.

    ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗುತ್ತಿರುವುದನ್ನು ಗಮನಿಸಿದ್ದೇನೆ. ಮಾನವ, ಪ್ರಾಣಿ, ಹಾನಿಯಾಗದಂತೆ ಸೂಕ್ತ ಕ್ರಮ ವಹಿಸುವೆ ಎಂದರು. ಎಡಿಸಿ ರಾಜು ಮೊಗವೀರ ಇದ್ದರು.

    ಡಿಸಿ ವರ್ಗಾವಣೆ ಬಗ್ಗೆ ಚರ್ಚೆ:

    ಅಧಿಕಾರ ವಹಿಸಿಕೊಂಡ 9 ತಿಂಗಳಲ್ಲೇ ಮೃದು ಮನಸ್ಸಿನ ಪ್ರಭುಲಿಂಗ ಕವಳಿಕಟ್ಟಿ ಅವರು ವರ್ಗಾವಣೆಯಾಗಿರುವುದೇಕೆ ಎಂಬ ಬಗ್ಗೆ ಜನರಲ್ಲಿ ಚರ್ಚೆ ಪ್ರಾರಂಭವಾಗಿದೆ.

    ಜಿಲ್ಲಾಧಿಕಾರಿಗಳನ್ನು ಕನಿಷ್ಠ 1 ವರ್ಷವಾದರೂ ಒಂದು ಜಿಲ್ಲೆಯಲ್ಲಿ ಇರಿಸಬೇಕು ಎಂಬ ಕಟ್ಟುಪಾಡಿದೆ. ಆದರೆ, ಅವಧಿಗೂ ಮೊದಲೇ ಬೇರೆ ಯಾವುದೇ ಸ್ಥಾನ ತೋರಿಸದೇ ವರ್ಗಾಯಿಸಿದ್ದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರವಿರುವ ಅನುಮಾನ ಮೂಡಿದೆ.

    ಇದನ್ನೂ ಓದಿ:ಹೆದ್ದಾರಿ ಮೇಲೆ ಉರುಳಿದ ಮರ

    ಭಟ್ಕಳದಲ್ಲಿ ಉಂಟಾದ ನೆರೆ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್‌ ಶುಲ್ಕ ವಸೂಲಿ ನಿಲ್ಲಿಸಿ ಎಂದು ಮಂಕಾಳ ವೈದ್ಯ ಜಿಲ್ಲಾಧಿಕಾರಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಅವರು ಅದು ತಮ್ಮ ವ್ಯಾಪ್ತಿಗೆ ಬಾರದು ಎಂದಿದ್ದರು.

    ಅದೂ ಸೇರಿದಂತೆ ಇನ್ನೂ ಹಲವು ವಿಚಾರಗಳಿಗೆ ಡಿಸಿ ವಿರುದ್ಧ ಸಚಿವರು ಗರಂ ಆಗಿರುವ ಸುದ್ದಿ ಅಧಿಕಾರಿ ವಲಯದಲ್ಲಿತ್ತು. ಅದೇ ಅವರ ದಿಢೀರ್ ವರ್ಗಾವಣೆಗೆ ಕಾರಣವಾಯಿತೇ ಎಂಬ ಪ್ರಶ್ನೆ ಮೂಡಿದೆ.

    ನಿರ್ಗಮಿತ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ತಮ್ಮ ವರ್ಗಾವಣೆಯಿಂದ ಬೇಸರಗೊಂಡಿದ್ದು, ಬುಧವಾರ ನಿರ್ಗಮಿಸುವ ವೇಳೆ ಸೇರಿದ್ದ ಕಚೇರಿ ಸಿಬ್ಬಂದಿಗಳನ್ನುದ್ದೇಶಿಸಿ,ನನ್ನನ್ನು ಕಳಿಸಿಕೊಡಲು ಇಷ್ಟೆಲ್ಲ ಜನ ಸೇರಿದ್ದೀರಿ’ ಎಂದು ನಗುಮುಖದಲ್ಲೇ ಬೇಸರ ವ್ಯಕ್ತಪಡಿಸಿರುವುದು ಕಂಡುಬಂತು.ಅಲ್ಲದೆ, ಬೀಳ್ಕೊಡುಗೆಗೂ ಒಪ್ಪಲಿಲ್ಲ.



    ಉತ್ತರ ಕನ್ನಡ ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆ ಓಡಾಟ ಮಾಡಿ, ಇಲ್ಲಿನ ಪರಿಸ್ಥಿತಿ ಅರಿತುಕೊಳ್ಳಲು ಒಬ್ಬ ಡಿಸಿಗೆ ಒಂದು ವರ್ಷವೇ ಬೇಕಾಗುತ್ತದೆ. ಹೀಗಿರುವಾಗ ವರ್ಷಕ್ಕೂ ಮೊದಲೇ ಜಿಲ್ಲಾಧಿಕಾರಿ ವರ್ಗಾವಣೆ ನ್ಯಾಯಸಮ್ಮತವಲ್ಲ. ತಾವು ಹೇಳಿದಂತೆ ನಡೆಯದೇ ಇದ್ದಾಗ ಜನರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ.
    ಮಾಧವ ನಾಯ್ಕ
    ಜನಶಿಕ್ತಿ ವೇದಿಯ ಅಧ್ಯಕ್ಷಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts