More

    ಚುನಾವಣಾ ಕಾರ್ಯಕ್ಕೆ ಬಸ್‌ಗಳ ಬಳಕೆ: ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ತಮ್ಮ ಊರುಗಳತ್ತ ತೆರಳಿದ ಹಿನ್ನೆಲೆಯಲ್ಲಿ ಬಸ್ ಮತ್ತು ರೈಲುಗಳು ಫುಲ್ ರಷ್ ಆಗಿತ್ತು.
    ಮೆಜೆಸ್ಟಿಕ್, ಸ್ಯಾಟಲೆಟ್, ಶಾಂತಿನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.
    ಬೆಂಗಳೂರಿನಲ್ಲಿ ನೆಲೆಸಿರುವವರು ಮತದಾನ ಮಾಡಲು ೧೪ ಲೋಕಸಭಾ ಕ್ಷೇತ್ರದ ಜನರು ಬುಧವಾರ ಮತ್ತು ಗುರುವಾರ ರಾತ್ರಿಯೇ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚುನಾವಣಾ ಕಾರ್ಯಕ್ಕೆ ಸಾರಿಗೆ ಬಸ್‌ಗಳನ್ನು ಬಳಸಿಕೊಳ್ಳಲಾಗಿದ್ದು, ಬಸ್‌ಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಇರುವ ಬಸ್‌ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಬಸ್‌ಗಳಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ವಿರುದ್ಧ ಪ್ರಯಾಣಿಕರು ಕಿಡಿ ಕಾರಿದರು. ಬಿಎಂಟಿಸಿ ವತಿಯಿಂದ ಗುರುವಾರ ೫೭೫ ಮತ್ತು ೪೬೫ ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಿ ಕೆಎಸ್‌ಆರ್‌ಟಿಸಿ ಕಾರ್ಯಾಚರಣೆ ನಡೆಸುವ ಸ್ಥಳಗಳಿಗೆ ಕಳುಹಿಸಿಕೊಡಲಾಗಿ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
    ಮೆಸೂರು, ಮಂಡ್ಯ, ಹಾಸನ, ತುಮಕೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ತಾಲೂಕು ಜಿಲ್ಲೆಗಳಿಗೆ ತೆರಳಲು ರಾತ್ರಿಯೇ ಜನರು ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು. ಕೆಲವರು ಸರ್ಕಾರಿ ಸಾರಿಗೆ ಬಸ್‌ಗಳ ರಷ್ ನೋಡಿ ಖಾಸಗಿ ಬಸ್‌ಗಳತ್ತ ಮುಖ ಮಾಡಿದ್ದರು. ಇನ್ನೂ ಕೆಲವರು ೧೫ ದಿನಗಳ ಹಿಂದೆಯೇ ಮುಂಗಡವಾಗಿ ಟಿಕೆಟ್‌ಳನ್ನು ಬುಕ್ಕಿಂಗ್ ಮಾಡಿಕೊಂಡು ತೆರಳಿದರು. ಕೆಲವರು ಕೆಲಸ ಮುಗಿಸಿಕೊಂಡು ಖಾಸಗಿ ಕಾರು, ಟ್ರಾವೆಲ್ಸ್, ಬೆಕ್‌ಗಳಲ್ಲಿ ತೆರಳಿದ್ದಾರೆ.

    ೨೭೮೦ ಕೆಎಸ್‌ಆರ್‌ಟಿಸಿ, ೧,೭೦೦ ಬಿಎಂಟಿಸಿ:
    ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ಸರ್ಕಾರಿ ಸಾರಿಗೆ, ಖಾಸಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಚುನಾವಣೆ ಕೆಲಸಕ್ಕೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಖಾಸಗಿ ಬಸ್‌ಗಳ ಬಳಕೆ ಮಾಡಲಾಗುತ್ತಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವಾಹನಕ್ಕೂ ಪ್ರತ್ಯೇಕ ದರ ಫಿಕ್ಸ್ ಮಾಡಲಾಗಿದ್ದು, ಮುಂಗಡ ಹಣ ಕೂಡ ಪಾವತಿ ಮಾಡಲಾಗಿದೆ. ೨೭೮೦ ಕೆಎಸ್‌ಆರ್‌ಟಿಸಿ, ೧,೭೦೦ ಬಿಎಂಟಿಸಿ ಬಸ್‌ಗಳನ್ನು ಆಯೋಗ ಬಳಕೆ ಮಾಡಿಕೊಂಡಿದೆ.

    ಬಿಎಂಟಿಸಿ ಬಸ್‌ಗಳ ವಿರಳ:
    ಬೆಂಗಳೂರು ಲೊಕಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಬಸ್‌ಗಳನ್ನು ತೆಗೆದುಕೊಳ್ಳಲಾಗಿದ್ದು, ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಬಸ್‌ಗಳ ಕೊರತೆಯಿಂದ ಕೆಲಸ-ಕಾರ್ಯಗಳಿಗೆ ತೆರಳುವವರಿಗೆ ತೊಂದರೆಯಾಗಿತ್ತು. ಇರುವ ಬಸ್‌ಗಳು ಫುಲ್ ರಷ್ ಇತ್ತು. ಅನಿವಾರ್ಯವಾಗಿ ಜನರು ಪ್ರಯಾಣಿಸಿದರು. ಬಸ್‌ಗಳು ಸರಿಯಾದ ಸಮಯಕ್ಕೆ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸ್ವಲ್ಪ ತಡವಾಗಿ ಹೋಗಿದ್ದು, ೧೫ ರಿಂದ ೨೦ ನಿಮಿಷ ತಡವಾಗಿ ಹೋಗಿದಕ್ಕೆ ಕಾಲೇಜುಗಳಿಂದ ಪಾಲಕರಿಗೆ ನಿಮ್ಮ ಕಾಲೇಜಿಗೆ ಗೈರಾಗಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ. ಇದರಿಂದ ಪಾಲಕರು ತಮ್ಮ ಮಕ್ಕಳಿಗೆ ಕರೆ ಮಾಡಿ ಕಾರಣ ಕೇಳಿ ನಂತರ ಸುಮ್ಮನಾಗಿರುವ ಪ್ರಸಂಗ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts