More

    ಏರ್​ಪೋರ್ಟ್​ನಿಂದ ಸಬರಮತಿ ಆಶ್ರಮಕ್ಕೆ ಕಾರಿನಲ್ಲಿ ಹೊರಟ ಮೋದಿ-ಟ್ರಂಪ್​; ದಿಗ್ಗಜರನ್ನು ನೋಡಲು ರಸ್ತೆ ಇಕ್ಕೆಲಗಳಲ್ಲಿ ಜನಸಾಗರ

    ಅಹಮದಾಬಾದ್: ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

    ಏರ್​ಪೋರ್ಟ್​ನಲ್ಲಿ ಸಾಂಪ್ರದಾಯಿಕ ಸ್ವಾಗತಕ್ಕೆ ಭಾಜನರಾದ ಟ್ರಂಪ್​ ಮತ್ತು ಅವರ ಕುಟುಂಬದವರು ಈಗ ಸಬರಮತಿ ಆಶ್ರಮದತ್ತ ಪ್ರಯಾಣ ಬೆಳೆಸಿದ್ದಾರೆ.

    ಸುಮಾರು 22 ಕಿ.ಮೀ.ಗಳಷ್ಟು ದೂರ ಒಟ್ಟಾಗಿ ರೋಡ್​ ಶೋ ನಡೆಸಲಿರುವ ಎರಡೂ ದೇಶಗಳ ನಾಯಕರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಭರ್ಜರಿ ಜನರು ನೆರೆದಿದ್ದಾರೆ. ಬಿಗಿ ಭದ್ರತೆಯೊಂದಿಗೆ ರೋಡ್​ ಶೋ ಪ್ರಾರಂಭವಾಗಿದೆ. ಜನರು ನಾಯಕರತ್ತ ಕೈ ಬೀಸುತ್ತಿದ್ದಾರೆ. ಫೋಟೋ ತೆಗೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts