More

    ಅವಿವಾಹಿತರೇ ಇವಳ ಟಾರ್ಗೆಟ್; ಫೇಸ್ ಬುಕ್ಕೇ ಬಂಡವಾಳ; ಕುಳಿತಲ್ಲಿಂದಲೇ ಕೋಟಿ ಕೋಟಿ ಗಳಿಕೆ!

    ನಲ್ಗೊಂಡ (ತೆಲಂಗಾಣ): ಮದುವೆಯಾಗುವುದಾಗಿ ನಂಬಿಸಿ ಅಮಾಯಕ ಯುವಕರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪದಲ್ಲಿ ತೆಲಂಗಾಣದ ನಲ್ಗೊಂಡ ಪೊಲೀಸರಿಂದ ಬಂಧನವಾಗಿರುವ ಕಿಲಾಡಿ ಲೇಡಿಯ ಕರಾಳ ಮುಖ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಮಹೇಶ್ವರಿ ಅಲಿಯಾಸ್​ ಧರಣಿ ರೆಡ್ಡಿ ಅವಿವಾಹಿತರನ್ನೇ ಗುರಿಯಾಗಿಸಿಕೊಂಡು ಮದುವೆ ಹೆಸರಲ್ಲಿ ಕೋಟ್ಯಂತರ ಹಣ ಪೀಕಿರುವ ಸಂಗತಿ ಪೊಲೀಸ್​ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

    ಖಮ್ಮಮ್​ ಜಿಲ್ಲೆಯ ವೆನ್ಸೂರ್​ ವಯಲದ ಕುಟುಂಬವೊಂದರಕ್ಕ ಕಿಲಾಡಿ ಲೇಡಿ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ವೆನ್ಸೂರ್​ ವಲಯದ ಮರ್ಲಪದಾ ಗ್ರಾಮದ ನಿವಾಸಿಯೊಬ್ಬ ಕಳೆದ ವರ್ಷ ಸೇತುಪಲ್ಲಿಯಲ್ಲಿ ನಡೆದ ಚಾರಿಟಿ ಕಾರ್ಯಕ್ರಮಕ್ಕೆ ಬಂದಿದ್ದ. ಈ ವೇಳೆ ಆತನಿಗೆ ಕಿಲಾಡಿ ಲೇಡಿಯ ಪರಿಚಯವಾಗಿದೆ. ಬಳಿಕ ಇಬ್ಬರು ಮಾತನಾಡುವಾಗ ವ್ಯಕ್ತಿ ತನ್ನ ಎರಡನೇ ಮಗಳಿಗೆ ಮದುವೆ ಮಾಡುವ ಕುರಿತು ಪ್ರಸ್ತಾಪಿಸಿದ್ದಾನೆ. ಅದಕ್ಕೆ ಕಿಲಾಡಿ ಲೇಡಿ ತನಗೆ ಗೊತ್ತಿರುವ ಒಂದು ಒಳ್ಳೆ ಸಂಬಂಧ ಇದೆ ಎಂದು ಹೇಳಿ ನಂಬಿಸಿದ್ದಾಳೆ.

    ಇದಾದ ಬಳಿಕ ಯುವಕನೊಬ್ಬ ಮರ್ಯಾಲಗುಡದವನು ಎಂದು ಹೇಳಿಕೊಂಡು ಮರ್ಲಪದಾ ನಿವಾಸಿಗೆ ಕರೆ ಮಾಡಿದ್ದಾನೆ. ತಾನು ಸರ್ಕಾರಿ ಕೆಲಸದಲ್ಲಿ ಇರುವುದಾಗಿಯೂ ನಂಬಿಸಿದ್ದಾನೆ. ಬಳಿಕ ಇಬ್ಬರ ಪರಸ್ಪರ ಫೋನ್​ ನಂಬರ್ ಪಡೆದುಕೊಂಡಿದ್ದಾರೆ. ಇದಾದ ಕೆಲವೇ ದಿನಗಳ ಬಳಿಕ ಮದುವೆ ಮಾತುಕತೆ ನಡೆಸಿದ್ದಾರೆ. ಇದರ ಹಿಂದಿನ ಸೂತ್ರಧಾರಿ ಮಾತ್ರ ಕಿಲಾಡಿ ಲೇಡಿ. ಯಾವುದೋ ಸುಂದರ ಯುವಕನ ಫೋಟೋ ಕಳುಹಿಸಿ ಯಾಮಾರಿಸಿದ್ದಾಳೆ. ಮದುವೆ ಮಾತುಕತೆ ನಡೆಯುತ್ತಿದ್ದಂತೆ ತನ್ನ ಅಸಲಿ ಮುಖವಾಡವನ್ನು ಕಿಲಾಡಿ ಮಹಿಳೆ ಕಳಚಿ, ಒಂದೊಂದೆ ಕಾರಣ ಹೇಳುತ್ತಾ ಕುಟುಂಬದಿಂದ ಹಣ ಪೀಕಲು ಆರಂಭಿಸಿದ್ದಾಳೆ. ​

    ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥಕ್ಕೆ ಬರುತ್ತೇವೆಂದು ಹೇಳಿ ಒಂದು ಲಕ್ಷ ರೂ. ಪಡೆದುಕೊಂಡಿದ್ದಾಳೆ. ಇದಾದ ಕೆಲವು ದಿನಗಳ ಬಳಿಕ ಯುವಕನ ತಾತ ಮೃತಪಟ್ಟಿದ್ದಾರೆ. ಸದ್ಯ ನಿಶ್ಚಿತಾರ್ಥ ನಡೆಸಲು ಸಾಧ್ಯವಾಗುವುದಿಲ್ಲ. 20 ದಿನಗಳ ನಂತರ ಇಟ್ಟುಕೊಳ್ಳೋಣ ಎಂದು ಹುಡುಗಿಗೆ ಸೀರೆ ಮತ್ತು ಆಭರಣ ತರುವುದಾಗಿ 5 ಲಕ್ಷ ರೂ. ಪಡೆದುಕೊಂಡಿದ್ದಾಳೆ.

    ಹೀಗೆ ಒಂದಲ್ಲ ಒಂದು ಕಾರಣ ಹೇಳಿ ಹುಡುಗಿ ಮನೆಯವರಿಂದ ಸಾಕಷ್ಟು ಹಣ ಪಡೆದುಕೊಂಡಿದ್ದಾಳೆ. ಇದೇ ಸಮಯದಲ್ಲಿ ಕಳೆದ ವರ್ಷ ಆಗಸ್ಟ್​ 7ರಂದು ಹುಡುಗಿ ತಂದೆ ಪಿಟ್ಸ್​ ಬಂದು ಆಸ್ಪತ್ರೆಗೆ ದಾಖಲಾದಾಗ, ಚಿಕಿತ್ಸೆಗೆಂದು ಹಣ ಕೇಳಿದ್ದಾರೆ. ಆದರೆ, ಹಣ ಕೊಡದೇ ಮಹಿಳೆ ಎಲ್ಲವನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದರಿಂದ ಅನುಮಾನ ಮೂಡಿ ಆಕೆಯನ್ನು ತಡೆಯಲು ಯತ್ನಿಸಿದಾಗ ತನ್ನ ಹಿಂದೆ ದೊಡ್ಡ ಗ್ಯಾಂಗ್​ ಒಂದು ಇರುವುದಾಗಿ ಬೆದರಿಸಿ ಹಣ ಪಡೆದು ವಂಚಿಸಿದ್ದಾಳೆ.

    ಕಳೆದ ವರ್ಷ ನವೆಂಬರ್​ 25ರಲ್ಲಿ ಕಿಲಾಡಿ ಲೇಡಿ ವಿರುದ್ಧ ದೂರು ದಾಖಲಾಗಿದೆ. ಮದುವೆ ಹೆಸರಿನಲ್ಲಿ 5 ಲಕ್ಷ ಮತ್ತು ಚಿಕಿತ್ಸೆ ಹೆಸರಿನಲ್ಲಿ 2 ಲಕ್ಷ ರೂ. ಹಣ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇಷ್ಟೇ ಅಲ್ಲದೆ, ಇವಳಿಂದ ಅನೇಕರು ಹಣ ಕಳೆದುಕೊಂಡಿದ್ದಾರೆ. ಫೇಸ್​ಬುಕ್​​ನಲ್ಲಿ ಪರಿಚಯ ಮಾಡಿಕೊಂಡು ತುಂಬಾ ಆಪ್ತರಾದ ಬಳಿಕ ಅವರೊಂದಿಗೆ ಬೆತ್ತಲೆ ವಿಡಿಯೋ ಕಾಲ್​ ಮಾಡಿ, ಅದನ್ನು ರೆಕಾರ್ಡ್​ ಮಾಡಿಕೊಂಡು ಬೆದರಿಕೆ ಹಾಕುವುದೇ ಇವಳ ದುಷ್ಕೃತ್ಯವಾಗಿದೆ. ಇವಳಿಂದ ಅನೇಕರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದು, ಕಿಲಾಡಿ ಲೇಡಿಯ ವಿರುದ್ಧ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಸದ್ಯ ನಲ್ಗೊಂಡ ಪೊಲೀಸರಿಂದ ಈಕೆ ಬಂಧನವಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts