More

    ವೇತನ ಪರಿಷ್ಕರಣೆ ಮಾತುಕತೆ ವಿಫಲ: ಜ.31 ರಿಂದ 2 ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರ

    ನವದೆಹಲಿ: ಬ್ಯಾಂಕ್​ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡುವ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಜ.31ರಿಂದ 2 ದಿನ ರಾಷ್ಟ್ರ ವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್​ (ಯುಎಫ್‌ಬಿ) ಘೋಷಣೆ ಮಾಡಿದೆ.

    ಜ.31 ಹಾಗೂ ಫೆ.1ರಂದು 2 ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಮುಷ್ಕರದ ದಿನ ಯಾವುದೇ ಬ್ಯಾಂಕ್​ ವಹಿವಾಟು ಇರುವುದಿಲ್ಲ ಎಂದು ಯುಎಫ್​ಬಿಯ ಸಿದ್ದಾರ್ಥ ಖಾನ್​ ತಿಳಿಸಿದ್ದಾರೆ.

    ಒಂಬತ್ತು ಕಾರ್ಮಿಕ ಸಂಘಗಳನ್ನು ಪ್ರತಿನಿಧಿಸುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್, ಭಾರತೀಯ ಬ್ಯಾಂಕುಗಳ ಸಂಘದ ಪದಾಧಿಕಾರಿಗಳ ಜೊತೆ ಕಾರ್ಮಿಕರ ವೇತನ ಪರಿಷ್ಕರಣೆ ಮಾತುಕತೆಗೆ ಮುಂದಾಗಿತ್ತು. ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸುವುದಾಗಿ ಯುಎಫ್​ಬಿ ತಿಳಿಸಿದೆ.

    ಕೇಂದ್ರ ಬಜೆಟ್​ ದಿನವೇ ಮುಷ್ಕರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಫೆ.1ರಂದು ಬಜೆಟ್​ ಮಂಡನೆ ಮಾಡಲಿದ್ದಾರೆ. ಅಂದೆ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮಹತ್ವ ಬಂದಿದೆ.

    ಮುಷ್ಕರದ ದಿನ ಬ್ಯಾಂಕುಗಳ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಯಾವುದೇ ವಹಿವಾಟು ನಡೆಯುವುದಿಲ್ಲ. ಬ್ಯಾಂಕ್​ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಷ್ಕರದಿಂದ ನಮ್ಮ ಬೇಡಿಕೆ ಈಡೇರದಿದ್ದರೆ ಏಪ್ರಿಲ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಯುಎಫ್​ಬಿ ಸಂಘಟನೆಯ ಸಿದ್ದಾರ್ಥ ಖಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts