More

    ಅಕ್ಕಮಹಾದೇವಿ ವಿವಿ ವಿಶಿಷ್ಟ ಸಾಧನೆ, ಕೇವಲ 14 ದಿನದಲ್ಲಿ ಮೌಲಮಾಪನ ಪೂರ್ಣ, ಪರೀಕ್ಷಾಂಗದ ಕಾರ್ಯ ಶ್ಲಾಘಿಸಿದ ಕುಲಪತಿ ತುಳಸಿಮಾಲ

    ವಿಜಯಪುರ: ಜುಲೈ ತಿಂಗಳಲ್ಲಿ ಜರುಗಿದ ಬಿಇಡಿ ಪ್ರಥಮ ಸೆಮಿಸ್ಟರ್‌ನ ಮೌಲ್ಯಮಾಪನ ಕಾರ್ಯ ಕೇವಲ 14 ದಿನಗಳಲ್ಲಿ ಪೂರ್ಣಗೊಳಿಸಿ, ಮೌಲ್ಯಮಾಪನ ಪೂರ್ಣಗೊಂಡ ಅರ್ಧ ಗಂಟೆಯಲ್ಲಿಯೇ ಫಲಿತಾಂಶ ಪ್ರಕಟಿಸುವ ಮೂಲಕ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗವು ವಿಶಿಷ್ಟ ಸಾಧನೆಗೈದಿದೆ.

    ರಾಜ್ಯ ಸರ್ಕಾರವು ಹೊಸದಾಗಿ ಸ್ಥಾಪಿಸಿರುವ ಯುಯುಸಿಎಂಎಸ್ ತಂತ್ರಾಂಶ ಬಳಸಿಕೊಂಡು ಈ ಮೌಲ್ಯಮಾಪನ ಕಾರ್ಯ ಮುಗಿಸಿರುವುದಾಗಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

    ಮೌಲ್ಯಮಾಪನ ಕುಲಸಚಿವರು, ಉಪಕುಲಸಚಿವರು, ಸಹಾಯಕ ಕುಲಸಚಿವರು, ಮೌಲ್ಯಮಾಪನ ಕಾರ್ಯದ ಹೊಣೆಗಾರಿಕೆ ನಿರ್ವಹಿಸಿದ ಬಿಒಇ ಅಧ್ಯಕ್ಷ ಡಾ.ಪ್ರಕಾಶ ಸಣ್ಣಕ್ಕನವರ, ಪರೀಕ್ಷಾಂಗದ ಸಿಬ್ಬಂದಿ ಹಾಗೂ ಮೌಲ್ಯಮಾಪಕರ ಕಾರ್ಯವನ್ನು ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts