ನವದೆಹಲಿ: ನಟಿ ದೀಪಿಕಾ ಪಡುಕೋಣೆ ದೇಶ ಒಡೆಯುವವರ ಜತೆ ನಿಂತಿದ್ದಾರೆ. ಹಾಗಾದರೆ ಅವರ ರಾಜಕೀಯ ನಿಲುವೇನು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೀಪಿಕಾ ಅವರ ರಾಜಕೀಯ ಸಂಬಂಧ ಏನು? ಏಕೆಂದರೆ ಜೆಎನ್ಯು ವಿದ್ಯಾರ್ಥಿಗಳ ಜತೆ ಅವರು ಭಾಗವಹಿಸಿದ್ದರ ಸುದ್ದಿ ತಿಳಿದವರಿಗೆ ಸ್ಪಷ್ಟತೆ ಬೇಕಿದೆ. ಭಾರತ ದೇಶ ತುಂಡಾಗಬೇಕು ಎಂದವರ ಜತೆ ನಿಲ್ಲುವ ಸ್ವಾತಂತ್ರ್ಯ ನಟಿ ದೀಪಿಕಾ ಅವರಿಗಿದೆ ಎಂದರು.
ನಾನು ಅವರ ಹಕ್ಕನ್ನು ವಿರೋಧಿಸುವುದಿಲ್ಲ. 2011ರಲ್ಲಿ ಅವರು ಕಾಂಗ್ರೆಸ್ನ್ನು ಬೆಂಬಲಿಸಿದ್ದರು. ಇದು ಯಾರಿಗಾದರೂ ಅಚ್ಚರಿಯಾಗಿದ್ದರೆ. ಕಾಂಗ್ರೆಸ್ಗೆ ಬೆಂಬಲಿಸಿದ್ದ ಸುದ್ದಿ ಅವರಿಗೆ ತಿಳಿದಿರಲಿಕ್ಕಿಲ್ಲ ಎಂದರು.
ಅಸ್ಸಾಂ ರಾಜ್ಯದ ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ, ದೀಪಿಕಾ ಅವರು ತಮ್ಮ ಚಪಾಕ್ ಸಿನಿಮಾದ ಪ್ರಚಾರಕ್ಕಾಗಿ ಹೋಗಿದ್ದರು. ಸಿನಿಮಾ ನಟ-ನಟಿಯರಿಗೆ ಜನರಿದ್ದಲ್ಲಿಗೆ ಹೋಗುವುದು, ಸಮಸ್ಯೆಗಳನ್ನು ಸೃಷ್ಟಿಸುವುದು ಹವ್ಯಾಸವಾಗಿರುತ್ತದೆ ಎಂದು ವ್ಯಂಗ್ಯವಾಡಿದರು.
ಕಳೆದ ಮಂಗಳವಾರ ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿವಿಗೆ ಭೇಟಿ ಕೊಟ್ಟಿದ್ದರು. 15 ನಿಮಿಷಗಳ ಕಾಲ ಅಲ್ಲಿನ ಸಭೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)