More

    ವೋಟ್​ ಬ್ಯಾಂಕ್​ಗಾಗಿ ಹೋರಾಡಿದ ಪಕ್ಷದವರು ಕೇಂದ್ರಕ್ಕೆ ರಾಜಧರ್ಮ ಹೇಳಿಕೊಡುವುದು ಬೇಡ: ಕಾಂಗ್ರೆಸ್​ ಬಾಯಿ ಮುಚ್ಚಿಸಿದ ಬಿಜೆಪಿ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ, ಗೃಹ ಮಂತ್ರಿ ಅಮಿತ್​ ಷಾ ರಾಜೀನಾಮೆ ನೀಡಬೇಕು. ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್​ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಬಂದಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಹಿಂಸಾಚಾರ ನಡೆಸಿರುವ ಇತಿಹಾಸ ಹೊಂದಿರುವ ವಿರೋಧ ಪಕ್ಷದಿಂದ ಕೇಂದ್ರ ಸರ್ಕಾರ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಕಲಿಯುವ ಅವಶ್ಯಕತೆ ನಮಗೆ ಬಂದಿಲ್ಲ ಎಂದು ಹೇಳಿದೆ.

    ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿರುವ ಬಿಜೆಪಿಯ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್​​, “ಶ್ರೀಮತಿ ಸೋನಿಯಾ ಗಾಂಧಿಯವರೇ, ದಯಮಾಡಿ ನಮಗೆ ರಾಜಧರ್ಮದ ಬಗ್ಗೆ ಹೇಳಿಕೊಡಲು ಬರಬೇಡಿ. ವೋಟ್​ ಬ್ಯಾಂಕ್​ಗಾಗಿ ಶ್ರಮಿಸಿದ ನಿಮ್ಮ ಸರ್ಕಾರದ ದಾಖಲೆಯು ಹಿಂಸಾಚಾರ, ಕಾನೂನು ಉಲ್ಲಂಘನೆಯಿಂದ ತುಂಬಿದೆ. ” ಎಂದು ಹೇಳಿದ್ದಾರೆ.

    ನಿನ್ನೆ (ಫೆ.27) ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಕಾಂಗ್ರೆಸ್​ ನಿಯೋಗದ ಸದಸ್ಯರು, ದೆಹಲಿಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿತ್ತು. ಕೇಂದ್ರ ಸರ್ಕಾರ ಶಾಂತಿ ಪಾಲನೆ ಮಾಡುವಲ್ಲಿ ವಿಫಲವಾಗಿದೆ. ಗೃಹ ಸಚಿವರಾದ ಅಮಿತ್​ ಷಾ ಅವರು ತಮ್ಮ ಕರ್ತವ್ಯವನ್ನು ಮರೆತು ಗಲಭೆಗೆ ಕಾರಣರಾಗಿದ್ದಾರೆ. ರಾಜಧರ್ಮ ಪಾಲಿಸುವಲ್ಲಿ ಸರ್ಕಾರ ವಿಫವಾಗಿದೆ ಎಂದು ಹೇಳಿತ್ತು.

    ರಾಷ್ಟ್ರಪತಿಗಳ ಭೇಟಿಯ ನಂತರ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಮಾತನಾಡಿ, ರಾಜಧರ್ಮವನ್ನು ಉಳಿಸುವ ಸಲುವಾಗಿ ರಾಷ್ಟ್ರಪತಿಗಳು ತಮ್ಮ ಅಧಿಕಾರ ಬಳಸಿಕೊಳ್ಳಬೇಕೆಂದು ಕೇಳಿಕೊಂಡಿರುವುದಾಗಿ ತಿಳಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts