More

    ಸಂಸ್ಕೃತ ವೈಭವ ಮೇಳೈಸಲಿ: ಪುತ್ತಿಗೆ ಶ್ರೀ

    ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನ ಕ್ಷೇತ್ರದಲ್ಲಿ, ಗೀತಾಚಾರ್ಯರ ಸನ್ನಿಧಿಯಲ್ಲಿ ಹಾಗೂ ನಮ್ಮ ಚತುರ್ಥ ಪರ್ಯಾಯದ ಪರ್ವದಲ್ಲಿ ವಿಶ್ವ ಗೀತಾ ಸಮ್ಮೇಳನ ಉದ್ಘಾಟಿಸಲು ಅತೀವ ಸಂತಸವಾಗುತ್ತಿದೆ. ಲೋಕದಲ್ಲಿ ಮತ್ತೆ ಎಲ್ಲೆಡೆ ಸಂಸತ ವೈಭವ ಮೇಳೈಸಲಿ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.
    ಶುಕ್ರವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮೂರು ದಿನಗಳ ವಿಶ್ವ ಗೀತಾ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು ಭಗವದ್ಗೀತೆ. ಅಂತಹ ಗೀತಾ ಸಮ್ಮೇಳನ ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವುದು ಅರ್ಥಪೂರ್ಣ. ನೇಪಾಳ ಸಹಿತ ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು, ವಿದ್ಯಾರ್ಥಿಗಳು ಆಗಮಿಸಿದ್ದೀರಿ. ತಾವುಗಳು ಸಂಸತ ಸಂಸತಿಯನ್ನು ಪಸರಿಸಬೇಕು ಎಂದರು.
    ಸುಶೀಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಭಗವದ್ಗೀತೆಯ ಆಚರಣೆಯಿಂದ ವಿಶ್ವಕ್ಕೆ ಒಳಿತಾಗಲಿದೆ ಎಂದು ಹಾರೈಸಿದರು.

    ಗೋಷ್ಠಿ:
    ಮೊದಲ ಗೋಷ್ಠಿಯಲ್ಲಿ ವಿದ್ವಾಂಸರಾದ ಹೆರ್ಗ ಹರಿಪ್ರಸಾದ ಭಟ್ಟ, ಆನಂದ ತೀರ್ಥಾಚಾರ್​, ಶಿವರಾಮ್​ ಬಿ., ಶಿವಾನಂದ ಎಲ್​.ಬಿ., ಪ್ರಶಾಂತ್​ ಆರ್​., ಶ್ರೀನಿವಾಸ್​ ಪಿ. ಹಾಗೂ ಮಂಗಳೂರು ವಿವಿಯಲ್ಲಿ ಸಂಸತ ಶೋಧ ಕಾರ್ಯ ಮಾಡುತ್ತಿರುವ ಬೆಂಗಳೂರಿನ ಉಪನ್ಯಾಸಕಿ ಕಮಲಯಾನಿ ಅವರು ತಮ್ಮ ಪ್ರಬಂಧದ ಸಾರ ಮಂಡಿಸಿದರು. ಡಾ. ಸದಾನಂದ ದೀತ ಅಧ್ಯಕ್ಷತೆ ವಹಿಸಿದ್ದರು.
    ದೇಶದ ವಿವಿಧೆಡೆಯಿಂದ ನೂರಾರು ಜನರು ಆನ್​ಲೈನ್​ ಮೂಲಕ ಭಾಗಿಯಾಗಿ ಸಂದೇಶ ರವಾನಿಸಿದರು. ಭಗವದ್ಗೀತೆಯ ವಿವಿಧ ಅಧ್ಯಾಯಗಳ ಕುರಿತು ಪ್ರಬಂಧ ಮಂಡನೆ ಮಾಡಲು ನಿರಂತರ 12 ತಿಂಗಳ ಯೋಜನೆಗೆ ದೇಶದ ಅನೇಕ ಭಾಗಗಳಿಂದ 372 ಜನ ನೋಂದಣಿ ಮಾಡಿದ್ದಾರೆ.
    ಉತ್ತರ ಭಾರತದ ಹಿರಿಯ ವಿದ್ವಾಂಸ ಜಯಶಂಕರ್​ ರ, ಒರಿಸ್ಸಾದ ಸಂಸತ ಪ್ರಾಧ್ಯಾಪಕ ಡಾ.ಬಿಪಿನ್​ ಬಿಹಾರಿ ಶತಪತಿ, ರಾಜಸ್ಥಾನದ ಸಂಸತ ಪ್ರಾಧ್ಯಾಪಕ ಡಾ. ನಿರಂಜನ ಸಾಹು, ಅಸ್ಸಾಮನ ಸಂಸತ ಪ್ರಾಧ್ಯಾಪಕ ಕುಶಲ್​ ಕಲಿತಾ ಉಪಸ್ಥಿತರಿದ್ದರು.
    ಅಂತಾರಾಷ್ಟ್ರೀಯ ಲೋಕಭಾಷಾ ಸಮಿತಿ ಒರಿಸ್ಸಾದ ಅಧ್ಯಕ್ಷ ಡಾ. ಸದಾನಂದ ದೀತ್​ ಸ್ವಾಗತಿಸಿದರು. ಪುತ್ತಿಗೆ ಮಠದ ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts