More

    ನಿವೇಶನ ಹಂಚಿಕೆ ಗೊಂದಲ, ಸಂತ್ರಸ್ತರ ಪ್ರತಿಭಟನೆ

    ಉಡುಪಿ: ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಗ್ರಾಮಗಳಲ್ಲಿ 15-20 ವರ್ಷದ ಹಿಂದೆ ಕೃಷಿ ಭೂಮಿಗಳನ್ನು ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಲಾಗಿದ್ದು, ಇಲ್ಲಿ ನಿವೇಶನ ಖರೀದಿಸಿದವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಿವೇಶನದ ಸಂತ್ರಸ್ತ ತಾರನಾಥ ಹೆಗ್ಡೆ ಹೇಳಿದರು.

    ಮಂಗಳವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೆೇರಿ ಎದುರು ಮನೆ ನಿವೇಶನ ಹಗರಣದ ಸಂತ್ರಸ್ತರು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಅವರು ಮಾತನಾಡಿದರು. ನಿವೇಶನ ನೋಂದಣಿ ಆಗಿದ್ದರಿಂದ ಮನೆ ಕಟ್ಟಲು ಸಮಸ್ಯೆ ಎದುರಾಗದು ಎಂದು ಖರೀದಿಸಿದವರು ಭಾವಿಸಿದ್ದರು. ಆದರೆ ಮನೆ ಕಟ್ಟಲು ಅನುಮತಿ ಪಡೆಯುವ ಸಂದರ್ಭ ಬಡಾವಣೆ ಕಾನೂನು ಉಲ್ಲಂಘನೆಯಾಗಿರುವುದು ಬೆಳಕಿಗೆ ಬಂದಿದೆ.

    ಈಗ ಆ ನಿವೇಶನದಲ್ಲಿ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಅನೇಕ ಮಂದಿ ಸಂತ್ರಸ್ತರಾಗಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ಅಕ್ರಮ-ಸಕ್ರಮದಲ್ಲಿ ಅರ್ಜಿ ಸ್ವೀಕರಿಸಿದ್ದಾರೆ. ಆದರೂ ಕಾನೂನು ತೊಡಕಿನಿಂದ ನ್ಯಾಯ ಮರೀಚಿಕೆಯಾಗಿದೆ ಎಂದರು. ರಾಬರ್ಟ್ ಡಿಸೋಜ, ದೇವ್ ಹನೆಹಳ್ಳಿ, ವಾಸುದೇವ ಗಡಿಯಾರ್, ಮೆಲ್ವಿನ್ ರೇಗೋ, ಸುಂದರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts