More

    ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

    ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಏ.26ರಂದು ನಡೆಯಲಿದ್ದು, 1842 ಮತಗಟ್ಟೆಗಳಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

    1842 ಮತಗಟ್ಟೆಗಳಲ್ಲಿ 405 ಸೂಕ್ಷ ಮತಗಟ್ಟೆಗಳಿವೆ. 1270 ಮತಗಟ್ಟೆಗಳಿಗೆ ವೆಬ್​ ಕ್ಯಾಮರಾ ವ್ಯವಸ್ಥೆ ಮಾಡಲಾಗಿದ್ದು, 18 ಮತಗಟ್ಟೆಗಳಿಗೆ ವೀಡಿಯೋಗ್ರಾಫರ್​, 29 ಮತಗಟ್ಟೆಗಳಿಗೆ ಕೇಂದ್ರಿಯ ಭದ್ರತಾ ಪಡೆ ಸಿಬ್ಬಂದಿ ನೇಮಿಸಲಾಗುತ್ತದೆ. 8 ವಿಧಾನ ಸಭಾ ಕ್ಷೇತ್ರಗಳಿಗೆ 2281 ಬ್ಯಾಲೆಟ್​ ಯುನಿಟ್​, 2281 ಕಂಟ್ರೋಲ್​ ಯುನಿಟ್​ ಮತ್ತು 2397 ವಿವಿಪ್ಯಾಟ್ಗಳನ್ನು ಬಳಸಲಾಗುತ್ತದೆ. ಮತದಾನ ಕರ್ತವ್ಯಕ್ಕಾಗಿ 1030 ಅಧ್ಯಕ್ಷಾಧಿಕಾರಿ, 1030 ಸಹಾಯಕ ಅಧ್ಯಕ್ಷಾಧಿಕಾರಿ, 2060 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಪೊಲೀಸ್​ ಭದ್ರತೆ
    ಉಡುಪಿ ಜಿಲ್ಲೆಯ ಚುನಾವಣೆಗೆ ಹೋಗುವ 866 ಬೂತ್​ಗಳಲ್ಲಿ 177 ನಿರ್ಣಾಯಕ ಮತಗಟ್ಟೆಗಳಾಗಿವೆ. ಇವುಗಳಲ್ಲಿ 36 ಬೂತ್​ಗಳು ಈ ಹಿಂದಿನ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿವೆ. ಮಾರ್ಗಸೂಚಿಗಳ ಪ್ರಕಾರ ಎಲ್ಲಾ 36 ಬೂತ್​ಗಳಿಗೆ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಇದಲ್ಲದೆ ಹೆಚ್ಚುವರಿಯಾಗಿ 6 ಸಶಸ್ತ್ರ ಪೊಲೀಸ್​ ಗಸ್ತು ವಾಹನಗಳಿದ್ದು, ಪ್ರತಿಯೊಂದು ವಾಹನ 6 ಬೂತ್​ಗಳನ್ನು ಒಳಗೊಂಡಿದೆ. ಈ 36 ಬೂತ್​ಗಳನ್ನು ಮೇಲ್ವಿಚಾರಣೆ ಮಾಡಲು ಡಿಎಸ್​ಪಿ ಹಂತದ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಸಾಮಾನ್ಯ ಬೂತ್​ಗಳಲ್ಲಿ ಕನಿಷ್ಟ ಒಬ್ಬ ಪೊಲೀಸ್​ ಸಿಬ್ಬಂದಿ ಇರುತ್ತಾರೆ. ಒಟ್ಟು 3 ಎಸ್​ಪಿ ಶ್ರೇಣಿಯ ಅಧಿಕಾರಿಗಳು, 6 ಡಿಎಸ್​ಪಿಗಳು, 15 ಇನ್​ಸ್ಪೆಕ್ಟರ್​ಗಳು, ಇತರ ಶ್ರೇಣಿಯ 1501 ಪೊಲೀಸರು, ಸುಮಾರು 500 ಮೀಸಲು ಪೊಲೀಸರನ್ನು ಬಂದೋಬಸ್ತ್​ಗಾಗಿ ನಿಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts