ಅಪಘಾತದಿಂದ ವಿದ್ಯಾರ್ಥಿಗಳಿಬ್ಬರು ಗಂಭೀರ

Published on

ಕಾಸರಗೋಡು: ಬಾಯಾರು ಪೆಟ್ರೋಲ್ ಬಂಕ್ ಸನಿಹ ಶಾಲಾ ವಾಹನ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರರಾದ ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬಾಯಿಕಟ್ಟೆ ಕಳಾಯಿ ನಿವಾಸಿ ಮಹಮ್ಮದ್ ಸಾದಿಕ್ ಹಾಗೂ ಮಹಮ್ಮದ್ ಮೊದೀನ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರರಿಬ್ಬರೂ ಬಾಯಿಕಟ್ಟೆಯಲ್ಲಿರುವ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳಾಗಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net