More

    ಇಂದು ರಾತ್ರಿ 7.30ಕ್ಕೆ ಹೊರಡೋ ಮೆಟ್ರೋ ರೈಲೇ ಕೊನೇದು!; ನಾಳೆ-ನಾಡಿದ್ದು ರೈಲು ಬರಲ್ಲ, ಬಿಎಂಟಿಸಿ ಬಸ್ ಕೂಡ ವಿರಳ

    ಬೆಂಗಳೂರು: ವಾರಾಂತ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯೂ ಬಹುತೇಕ ಸ್ತಬ್ಧವಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮೆಟ್ರೋ ರೈಲು ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಬಿಎಂಟಿಸಿ ಬಸ್ ಸೇವೆ ಭಾಗಶಃ ಇರುವುದಿಲ್ಲ.

    ಕರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಾರಾಂತ್ಯ ಲಾಕ್‌ಡೌನ್ ವಿಧಿಸಿದ್ದು, ಇತರ ದಿನಗಳಲ್ಲಿ ರಾತ್ರಿ ಕರ್ಫ್ಯೂ ಹೇರಿದೆ. ಹೀಗಾಗಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಈ ಕುರಿತಂತೆ ಎರಡೂ ಸಂಸ್ಥೆಗಳು ಅಧಿಕೃತ ಆದೇಶ ಹೊರಡಿಸಿವೆ.

    ಶುಕ್ರವಾರ ರಾತ್ರಿ 7.30ಕ್ಕೆ ನಾಯಂಡಹಳ್ಳಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ನಾಯಂಡಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ತೆರಳಲಿದೆ. ಅದಾದ ನಂತರ ಸೋಮವಾರ ಬೆಳಗ್ಗೆ 7ರವರೆಗೆ ಯಾವುದೇ ರೈಲು ಸೇವೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಅದೇ ರೀತಿ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಿಎಂಟಿಸಿ ಬಸ್‌ಗಳು ಸೇವೆ ನೀಡಲಿವೆ. ಶನಿವಾರ ಮತ್ತು ಭಾನುವಾರ 450ರಿಂದ 500 ಬಸ್‌ಗಳಷ್ಟೇ ಸೇವೆ ನೀಡಲಿದ್ದು, ಅದಕ್ಕೆ ತಕ್ಕಂತೆ ಸಿಬ್ಬಂದಿ ನಿಯೋಜಿಸುವುದಾಗಿ ನಿಗಮ ತಿಳಿಸಿದೆ.

    ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದರೆ ಆರೋಗ್ಯ ಇಲಾಖೆ ಅಧಿಕಾರಿ​ ಲಂಚ ಸಂಗ್ರಹಿಸುತ್ತಿದ್ರು; ಕಾರಿನಲ್ಲಿ ಕಂತೆ ಕಂತೆ ಹಣ!

    ಪ್ರಿಯಕರನನ್ನು ಹುಡುಕಿಕೊಂಡು ರಾತ್ರಿಯೇ ಆತನ ಮನೆಗೆ ಹೋದ ಪ್ರೇಯಸಿ; ಆ ನಂತರ ನಡೆದಿದ್ದಂತೂ ಬೆಚ್ಚಿಬೀಳಿಸುವಂಥದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts