More

    ಸುದ್ದಿ ನಿರೂಪಕನೇ ಸುದ್ದಿಯಾಗಿದ್ದು ಏಕೆ? ಅದೆಂಥಾ ಅರ್ಜೆಂಟ್​ನಲ್ಲಿದ್ದ ಈ ಮಹಾನುಭಾವ

    ಫ್ಲೋರಿಡಾ: ಸುದ್ದಿ ಜಗತ್ತೀಗ ಕರೊನಾ ಬೆನ್ನತ್ತಿದೆ. ಎಲ್ಲ ಸುದ್ದಿಗಳೀಗ ಕರೊನಾ ಹಾಗೂ ಅದರಿಂದಾಗುತ್ತಿರುವ ಪರಿಣಾಮಗಳನ್ನೇ ಕೇಂದ್ರೀಕರಿಸಿವೆ. ಅಂತೆಯೇ ಫ್ಲೋರಿಡಾದ ಎಬಿಸಿ ಸುದ್ದಿವಾಹಿನಿಯ ವರದಿಗಾರ ವಿಲ್​ ರೀವ್​ ಇಂಥದ್ದೇ ಸುದ್ದಿ ಬೆನ್ನತ್ತಿದ್ದಾಗ ಅಲ್ಲಿನ ವೃದ್ಧರಿರುವ ಊರಿನಲ್ಲಿ (ರಿಟೈರ್​ಮೆಂಟ್​ ವಿಲೇಜ್​) ಔಷಧ ಕಂಪನಿಯೊಂದು ಡ್ರೋನ್​ಗಳನ್ನು ಬಳಸಿ ಔಷಧ ಪೂರೈಸುತ್ತಿರುವ ವಿಷಯ ಗೊತ್ತಾಗಿದೆ.

    ಇದರ ಬಗ್ಗೆ ವರದಿ ತಯಾರು ಮಾಡಿ ವಾಹಿನಿಗೆ ಕಳುಹಿಸಿದ್ದ. ಸರಿ ಬೆಳಗಿನ ‘ಗುಡ್​ ಮಾರ್ನಿಂಗ್​ ಅಮೆರಿಕ’ ಬುಲೆಟಿನ್​ನಲ್ಲಿ ಆ ಸುದ್ದಿ ಪ್ರಸಾರವಾಗಬೇಕಿತ್ತು. ಇದಕ್ಕಾಗಿ ಆತನನ್ನೇ ಲೈವ್ ಬರುವಂತೆ ಸಂಸ್ಥೆ ತಿಳಿಸಿತ್ತು.

    ಕರೊನಾದಿಂದಾಗಿ ಹೆಚ್ಚಿನವರು ಮನೆಯಿಂದ ಕೆಲಸ ಮಾಡುವಂತೆ ಆತ ಕೂಡ ವರ್ಕ್​ ಫ್ರಾಮ್​ ಹೋಮ್​ ನಡೆಸಿದ್ದ. ಲೈವ್​ಗಾಗಿ ಕ್ಯಾಮರಾ ಸಜ್ಜುಗೊಳಿಸಿ, ಚಂದನೆಯ ಶರ್ಟ್,​ ಅದರ ಮೇಲೊಂದು ಗಾಢ ಬಣ್ಣದ ಸೂಟ್​ ಧರಿಸಿ ಕುಳಿತಿದ್ದ. ಲೈವ್​ನಲ್ಲಿ ಸುದ್ದಿಯನ್ನು ನಿರೂಪಿಸಿದ. ಇನ್ನೇನು ಸುದ್ದಿ ಮುಗಿಯಿತು ಎನ್ನುವಾಗ ಆತ ಸಜ್ಜಾಗಿದ್ದರ ಅಸಲಿ ರಹಸ್ಯ ಬಯಲಾಗಿದೆ. ಸುದ್ದಿ ಮುಗಿಯುವ ಹಂತದಲ್ಲಿ ತೆರೆಯ ಮೇಲೆದ್ದ ಗ್ರಾಫಿಕ್ಸ್​ ಮರೆಯಾದಾಗ ಆತ ಪ್ಯಾಂಟ್​ ಧರಿಸದಿರುವುದು ಗೊತ್ತಾಗಿದೆ. ಇದು ಆನ್​ಸ್ಕ್ರೀನ್​ನಲ್ಲೂ ಕಾಣಿಸಿದೆ.

    ಇದರ ಸ್ಕ್ರೀನ್​ಶಾಟ್​ ಬಳಸಿಕೊಂಡ ವೀಕ್ಷಕರು ವಿಲ್ ರೀವ್​ನನ್ನು ಟ್ರೋಲ್​ ಮಾಡುತ್ತಿದ್ದಾರೆ. ಜತೆಗೆ, ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿದೆ.
    ಸುದ್ದಿ ಬಿತ್ತರಿಸುವಾಗ ಹಲವು ಬಾರಿ ಮುಜುಗರಕ್ಕೀಡಾಗುವ ಸನ್ನಿವೇಶಗಳು ನಡೆದಿರುತ್ತವೆ. ಅವುಗಳನ್ನೇ ಸಂಕಲಿಸಿ ಕಾರ್ಯಕ್ರಮವಾಗಿಯೂ ಪ್ರಸಾರ ಮಾಡಲಾಗುತ್ತದೆ.

    ಸಾಮಾನ್ಯವಾಗಿ ಸುದ್ದಿ ಓದುವಾಗ ತೆರೆ ಮೇಲೆ ನಿರೂಪಕರ ಮೇಲ್ಭಾಗವನ್ನಷ್ಟೇ ತೋರಿಸಲಾಗುವ ಕಾರಣ, ‘ಅವರು ಪ್ಯಾಂಟ್​ ಧರಿಸಿರುವುದಿಲ್ಲ’ ಎಂಬ ಮಾತನ್ನು ಎಂದು ತಮಾಷೆಯಾಗಿ ಹೇಳಲಾಗುತ್ತದೆ. ಅದನ್ನು ನಿಜವಾಗಿಸುವ ಯತ್ನವನ್ನು ರೀವ್​ ಮಾಡಬಾರದಿತ್ತು ಅಲ್ಲವೇ?

    https://www.vijayavani.net/all-govt-employees-should-download-aarogya-setu-app-immediately-orders-centre/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts