ಶೃಂಗೇರಿಯಲ್ಲಿ ಶ್ರೀ ಚಂಡಿಕಾಪರಮೇಶ್ವರಿ ತೆಪ್ಪೋತ್ಸವ

blank

ಶೃಂಗೇರಿ: ಶ್ರೀ ಮಠದಲ್ಲಿ ತುಂಗಾ ಪುಷ್ಕರದ ಅಂಗವಾಗಿ ಭಾನುವಾರ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನಡೆಸಿ ತುಂಗಾ ಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ನಂತರ ಶ್ರೀ ಶಾರದಾಂಬ, ಶ್ರೀಶಂಕರ ಭಗವತ್ಪಾದರು ಹಾಗೂ ಶ್ರೀವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ಶ್ರೀ ವಿದ್ಯಾಶಂಕರ ದೇವಾಲಯದಲ್ಲಿ ಮಹಾರುದ್ರ ಪುರಶ್ಚರಣೆ ಧಾರ್ವಿುಕ ಕಾರ್ಯಗಳ ನಂತರ ಶ್ರೀಮಠದ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಶ್ರೀಮಠದ ಉಭಯ ಶ್ರೀಗಳು ತುಂಗಾ ದಡದಲ್ಲಿರುವ ತುಂಗೆ, ಶ್ರೀ ವರಾಹಮೂರ್ತಿ, ಶ್ರೀ ಶಾರದಾ ವಿಗ್ರಹಕ್ಕೆ ಹಾಗೂ ಶ್ರೀ ಚಂಡಿಕಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಶ್ರೀ ಚಂಡಿಕಾಪರಮೇಶ್ವರಿಗೆ ತೆಪ್ಪೋತ್ಸವ ನೆರವೇರಿತು. ಶ್ರೀಮಠದ ಪುರೋಹಿತರು ತುಂಗಾರತಿ ಬೆಳಗಿದರು. ತಾಲೂಕಿನ ಭಕ್ತರು ಸಂಭ್ರದಿಂದ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ತುಂಗೆಗೆ ದೀಪಗಳ ಬಾಗಿನ ಸಮರ್ಪಿಸಿದರು. ಸೋಮವಾರ ಶ್ರೀ ವಿದ್ಯಾಶಂಕರೇಶ್ವರ ತೆಪ್ಪೋತ್ಸವ ಜರುಗಲಿದೆ.

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…