More

    ಸ್ತನ್ಯಪಾನದ ಮಹತ್ವದ ಅರಿವು ಅಗತ್ಯ

    ತೂಬಗೆರೆ: ಬಾಣಂತಿಯರು ಆರೈಕೆಯ ಮಹತ್ವ ಮತ್ತು ನವಜಾತ ಶಿಶುಗಳಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ತಿಳಿಯಬೇಕು ಎಂದು ಘಾಟಿ ಅಂಗನವಾಡಿ ಮೇಲ್ಚಿಚಾರಕಿ ಲಕ್ಷ್ಮೀ ಹೇಳಿದರು.
    ಹೋಬಳಿಯ ಮೇಲಿನಜೋಗನಹಳ್ಳಿಯಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿದರು. ತಾಯಿಯ ಹಾಲಿನಲ್ಲಿ ಸಾಕಷ್ಟು ಪೌಷ್ಟಿಕಾಂಶ ಇರುವುದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದರು.
    ಕೇಂದ್ರದ ಕೃಷಿ ವಿಜ್ಞಾನಿ ಎಸ್.ವಿ.ಮೇಘನಾ ಮಾತನಾಡಿ, ವಿಶ್ವದಾದ್ಯಂತ ಪ್ರತಿ ವರ್ಷ ಆಗಸ್ಟ್ ಮೊದಲನೇ ವಾರವನ್ನು ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ ಎಂದರು. ನವಜಾತ ಶಿಶುಗಳಿಗೆ ಮೊದಲ 6 ತಿಂಗಳವರೆಗೂ ಯಾವುದೇ ಅಹಾರ ನೀಡದೆ, ತಾಯಿ ಹಾಲು ಮಾತ್ರ ನೀಡಬೇಕು. ಎರಡು ವರ್ಷಗಳವರೆಗೂ ಸ್ತನ್ಯಪಾನ ಮುಂದುವರಿಸಬೇಕು. ಜತೆಗೆ ಕೆಲಸಕ್ಕೆ ಹೋಗುವ ತಾಯಂದಿರು 6 ತಿಂಗಳ ಬಳಿಕ ಮಗುವಿಗೆ ಸ್ತನ್ಯಪಾನದ ಜತೆಗೆ ಇತರ ಪೂರಕ ಅಹಾರವನ್ನು ಕೊಡುವಾಗ ತೆಗೆದುಕೊಳ್ಳಬೇಕಾದ ಸ್ವಚ್ಛತೆಯ ಬಗ್ಗೆ ಅರಿತು, ಮನೆಯ ಇತರ ಸದಸ್ಯರಿಗೂ ತಿಳಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts