More

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಮಹಾಭಿಯೋಗ| ವಿಚಾರಣೆ ಮುಂದಿನ ಮಂಗಳವಾರದಿಂದ ಶುರು ಎಂದ ಸೆನೆಟ್​ ಚೀಫ್

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ವಿರುದ್ಧದ ಮಹಾಭಿಯೋಗದ ಸೆನೆಟ್ ವಿಚಾರಣೆ ಮುಂಧಿನ ಮಂಗಳವಾರದಿಂದ ಆರಂಭವಾಗಲಿದೆ ಎಂದು ಸೆನೆಟ್ ಚೀಫ್​ ಹೇಳಿದ್ದಾರೆ.

    ಮಹಾಭಿಯೋಗಕ್ಕೆ ಸಂಬಂಧಿಸಿದ ಪ್ರಮುಖರು ಈ ವಾರದಲ್ಲೇ ಪದಗ್ರಹಣ ಮಾಡಲಿದ್ದು, ಬಹುಶಃ ಮುಂದಿನ ಮಂಗಳವಾರದಿಂದ ಇದರ ಸೆನೆಟ್ ವಿಚಾರಣೆ ಶುರುವಾಗಲಿದೆ ಎಂದು ಛೇಂಬರ್ಸ್​ ಮೆಜಾರಿಟಿ ಲೀಡರ್ ಮಿಚ್ ಮೆಕ್​ಕನೆಲ್​ ಹೇಳಿದ್ದಾರೆ.

    ಈ ವಾರ ಪ್ರಾಥಮಿಕ ಕಾರ್ಯಗಳನ್ನು ನಾವು ಪೂರೈಸುವವರಿದ್ದೇವೆ. ಚೀಫ್ ಜಸ್ಟೀಸ್ ಮತ್ತು ಇತರೆ ಸದಸ್ಯರು ಕೂಡ ಪದಗ್ರಹಣ ಮಾಡಲಿದ್ದಾರೆ ಎಂದು ಮೆಕ್​ಕನೆಲ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ನಮ್ಮ ಸದ್ಯದ ನಿರೀಕ್ಷೆ ಪ್ರಕಾರ, ಸೆನೆಟ್ ವಿಚಾರಣೆ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದರೆ ಮುಂದಿನ ಮಂಗಳವಾರದಿಂದಲೇ ಸರಿಯಾದ ವಿಚಾರಣೆ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts