More

    ಶಬರಿರೂಪದ ಅನ್ನಪೂರ್ಣಗೆ ಗೌರವ

    ಬಾಗಲಕೋಟೆ: ಸಮೀಪದ ಗದ್ದನಕೇರಿಯಲ್ಲಿ ರಾಮ ಮಂದಿರಕ್ಕಾಗಿ ಕಾಯ್ದು ಕುಳಿತಿದ್ದ ಶಬರಿರೂಪದ ಅನ್ನಪೂರ್ಣ ನಿರಂಜನ ಇದ್ದಾರೆ. 35 ವರ್ಷಗಳಿಂದ 16,68,368 ಸಲ ರಾಮನಾಮ ಬರೆದಿದ್ದಾರೆ ಎನ್ನುವ ವಿಷಯ ತಿಳಿದು ಅವರ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಹಿಂದು ಸಂಘಟನೆ ಮುಖಂಡ ಬಸವರಾಜ ಯಂಕಂಚಿ, ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಡಗೆ ಸೇರಿ ಹಲವರು ಭೇಟಿ ನೀಡಿ ಅನ್ನಪೂರ್ಣ ಹಾಗೂ ಯಲ್ಲಪ್ಪ ದಂಪತಿಯನ್ನು ಸನ್ಮಾನಿಸಿದರು. ಅನ್ನಪೂರ್ಣ ಅವರ ರಾಮಭಕ್ತಿಯನ್ನು ಕೊಂಡಾಡಿದರು.

    ಈ ದೇಶದಲ್ಲಿ ಇಂಥ ಕೋಟ್ಯಂತರ ಭಕ್ತರ ನಿತ್ಯ ಪೂಜೆ, ಆರಾಧನೆ, ಸಂಕಲ್ಪಗಳ ಫಲವಾಗಿಯೇ ಇವತ್ತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗುತ್ತಿದೆ. ಇಂಥ ಭಕ್ತರನ್ನು ನೋಡಿ ಮನ ತುಂಬಿದೆ ಎಂದು ಪಿ.ಎಚ್.ಪೂಜಾರ ಹೇಳಿದರು.

    ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಡಗೆ, ಇವರ ಇಡೀ ಕುಟುಂಬ ರಾಮಭಕ್ತ ಕುಟುಂಬ. ಅನ್ನಪೂರ್ಣ ಅವರು ಸಾವಜಿ ಆಗಿದ್ದರೂ ರಾಮನಾಮ ಬರೆಯಲು ಆರಂಭಿಸಿದ ಬಳಿಕ 35 ವರ್ಷಗಳಿಂದ ಮಾಂಸ ಸೇವನೆ ಬಿಟ್ಟಿದ್ದಾರೆ. ಇವರು ಬಾಗಲಕೋಟೆ ಶಬರಿ ಆಗಿದ್ದಾರೆ ಎಂದರು.
    ಸಂಸದ ಪಿ.ಸಿ.ಗದ್ದಿಗೌಡರ ಅವರು ಭಾನುವಾರ ಬೆಳಗ್ಗೆ ಅನ್ನಪೂರ್ಣ ನಿರಂಜನ ಅವರ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts