More

    ಬಾವಲಿಗಳು ವಾಸವಿದ್ದ ಕೊಂಬೆಗಳಿಗೆ ಕೊಡಲಿ: ಪರಿಸರ ಪ್ರೇಮಿಗಳು ಆಕ್ರೋಶ

    ಗುಬ್ಬಿ: ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಬಾವಲಿಗಳು ವಾಸವಿದ್ದ ಆಲದ ಮರದ ಕೊಂಬೆಗಳನ್ನು ಕಡಿದ ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.

    ತಾಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಗೇಟ್ ಸಮೀಪದಲ್ಲಿದ್ದ ಬೃಹತ್ ಆಲದಮರ ಹಾಗೂ ಹಿಪ್ಪೆಮರದಲ್ಲಿ ಸಾವಿರಾರು ಬಾವಲಿಗಳು ವಾಸವಿದ್ದವು. ಹೀರೆಹಕ್ಕಿ ಎಂದೇ ಕೆರೆಯುವ ಬಾವಲಿಗಳ ಸಂತತಿ ನಶಿಸುತ್ತಿವೆ. ಈ ಸಂದರ್ಭದಲ್ಲಿ ಶತಮಾನ ಕಂಡ ಮರದ ಒಂದು ಭಾಗವನ್ನು ಶನಿವಾರ ಕಡಿದಿರುವುದು ಆಕ್ರೋಶ ಕಾರಣವಾಗಿದೆ.

    ಹೆದ್ದಾರಿ ವಿಸ್ತರಣೆಯ ಸರ್ವೇ ವೇಳೆ ಮರಗಳನ್ನು ಉಳಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗೂ ತಿಳಿಸಲಾಗಿತ್ತು. ಅಂದು ಮರಗಳನ್ನು ಉಳಿಸುವ ಮಾತು ನೀಡಿದ್ದ ಗುತ್ತಿಗೆದಾರರು ಇಂದು ಆಲದಮರದ ಎರಡು ದೊಡ್ಡಕೊಂಬೆ ಧರೆಗುರುಳಿಸಿಛ್ಛ, ವಾಸಸ್ಥಾನ ಇಲ್ಲದೆ ಬಾವಲಿಗಳು ಪರದಾಡುತ್ತಿವೆ.

    ಸ್ಥಳಕ್ಕೆ ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ವನ್ಯಜೀವಿಗಳ ಸಂರಕ್ಷಣೆ ಹೊಣೆಹೊತ್ತ ಅರಣ್ಯ ಇಲಾಖೆ, ಕೊಂಬೆಗಳನ್ನು ಕಡಿದಿರುವುದರಿಂದ ಆದ ನಷ್ಟಕ್ಕಿಂತ ಬಾವಲಿಗಳು ನಿರಾಶ್ರಿತಗೊಳಿಸಿರುವ ಬಗ್ಗೆ ಕಾನೂನು ಕ್ರಮವಹಿಸಬೇಕೆಂದು ಗ್ರಾಪಂ ಸದಸ್ಯ ಯತೀಶ್‌ಕುಮಾರ್ ಒತ್ತಾಯಿಸಿದರು. ಮುಖಂಡರಾದ ಎಚ್.ಬಿ.ಸಿದ್ದರಾಮಯ್ಯ, ಎಸ್.ವಿಜಯ್‌ಕುಮಾರ್, ನಿಟ್ಟೂರು ಸಂದೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts