More

    ಪ್ರತಿನಿತ್ಯ 72 ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ

    • ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳನ್ನು
    • ಶಾಸಕ ಕೆ.ಎಸ್.ಆನಂದ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
      ಈ ಮೊದಲು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಲ್ಲಿ ಕೇವಲ 16 ಜನರಿಗೆ
    • ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಹೊಸದಾಗಿ ಆರು ಯಂತ್ರಗಳನ್ನು ಅಳವಡಿಸಿದ್ದು, ಇದರಿಂದ
    • 72 ಜನರು ಚಿಕಿತ್ಸೆ ಪಡೆಯುವ ಅವಕಾಶ ಲಭ್ಯವಾಗಿದೆ. ವಾರಕ್ಕೆ 30 ಸಾವಿರ ಖರ್ಚು
    • ಮಾಡಬೇಕಾದೆಡೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತದೆ ಎಂದರು.
      ಇದೇ ಆಸ್ಪತ್ರೆಯಲ್ಲಿ 12 ಲಕ್ಷ ವೆಚ್ಚದಲ್ಲಿ ಹೊಸದಾಗಿ ಲಿವರ್, ಕಿಡ್ನಿ ಮುಂತಾದ ಕಾರ್ಯಕ್ಷಮತೆ
    • ಪರೀಕ್ಷಿಸುವ ಯಂತ್ರ ಕಾರ್ಯಾರಂಭ ಮಾಡಿದೆ. ಇಲ್ಲಿ ಏಕಕಾಲಕ್ಕೆ 32 ಜನರ ರಕ್ತ ಪರೀಕ್ಷೆ
    • ಮಾಡಬಹುದಾಗಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎನ್ನುವವರು ಇದನ್ನು
    • ಗಮನಿಸಬೇಕು. ಹಿಂದೆ ಕರೊನಾ ಸಮಯದಲ್ಲಿ ಕೇವಲ ಹಣ ಹೊಡೆಯುವ ದಂಧೆ
    • ಮಾಡಿದವರು ಆಸ್ಪತ್ರೆಗಳಿಗೆ ಇಂತಹ ಸೌಲಭ್ಯಗಳನ್ನು ನೀಡಲು ಏಕೆ ಮುಂದಾಗಲಿಲ್ಲ ಎಂದು
    • ಉತ್ತರಿಸಬೇಕು ಎಂದರು.
      ರಕ್ತನಿಧಿಯಲ್ಲಿರುವ ಸುಮಾರು 13.50 ಲಕ್ಷ ರೂ. ಹಣವನ್ನು ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾ
    • ಸೌಂಡ್ ಸ್ಕಾೃನಿಂಗ್ ಯಂತ್ರ ಖರೀದಿಸಲು ಬಳಸಲಾಗುತ್ತದೆ. ಪುರಸಭೆ ಸದಸ್ಯರಾದ
    • ಭಂಡಾರಿ ಶ್ರೀನಿವಾಸ್, ಮೋಹನ್ ಕುಮಾರ್, ಕಾಂತರಾಜು, ಟಿಎಂಒ ಡಾ.ರವಿಕುಮಾರ್,
    • ಆಸ್ಪತ್ರೆ ಆಡಳಿತಾಧಿಕಾರಿ ಡಾ.ಉಮೇಶ್, ಹಿರಿಯ ಲ್ಯಾಬ್ ಟೆಕ್ನಿಷಿಯನ್ ಸುರೇಶ್ ಹಾಗೂ
    • ಸಿಬ್ಬಂದಿಗಳು ಇದ್ದರು.ಕೆ.ಎಸ್.ಆನಂದ್ ಚಾಲನೆ ನೀಡಿದರು. ಭಂಡಾರಿ ಶ್ರೀನಿವಾಸ್, ಡಾ.ಉಮೇಶ್
    • ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts