More

    ರೈಲು ನಿಲುಗಡೆಯಿಂದ ಜನರಿಗೆ ಅನುಕೂಲ- ಬನ್ನಿಕೊಪ್ಪದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ

    ಕುಕನೂರು: ಬನ್ನಿಕೊಪ್ಪ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಿಂದ ಈ ಭಾಗದ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ಬನ್ನಿಕೊಪ್ಪ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ್ದ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ ರೈಲಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ರೈಲು ಭಾನಾಪುರ ರೈಲ್ವೆ ಸ್ಟೇಷನ್‌ನಲ್ಲಿ ಮಾತ್ರ ನಿಲುಗಡೆಯಾಗುತ್ತಿತ್ತು. ಇದೀಗ ಬನ್ನಿಕೊಪ್ಪದಲ್ಲೂ ಸ್ಟಾಪ್ ಇದೆ. ಇದರಿಂದ ಕುಕನೂರು, ಮಂಡಲಗೇರಿ, ಇಟಗಿ, ಮನ್ನಾಪುರ, ಮಾಳೆಕೊಪ್ಪ, ಬಿನ್ನಾಳ, ಚಿಕೇನಕೊಪ್ಪ, ಸಿದ್ನೇಕೊಪ್ಪ, ನಿಂಗಾಪುರ, ಬನ್ನಿಕೊಪ್ಪ, ಕವಲೂರು ಸೇರಿದಂತೆ ವಿವಿಧ ಗ್ರಾಮಗಳ ಜನರು ಹುಬ್ಬಳ್ಳಿ, ಗದಗ, ಕೊಪ್ಪಳಕ್ಕೆ ಪ್ರಯಾಣ ಬೆಳೆಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗಲು, ಜನರು ಕೆಲಸ, ಆಸ್ಪತ್ರೆ, ವ್ಯಾಪಾರ-ವಹಿವಾಟು ನಡೆಸಲು ನಗರ ಪ್ರದೇಶಕ್ಕೆ ತೆರಳಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳು ಸಹ ಬನ್ನಿಕೊಪ್ಪದಲ್ಲಿ ನಿಲುಗಡೆಗೆ ಕ್ರಮ ವಹಿಸಲಾಗುವುದು ಎಂದರು.

    ಗದಗ-ವಾಡಿ ರೈಲ್ವೆ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದರಿಂದ ಕಾಮಗಾರಿ ಚುರುಕು ಪಡೆದು ಸದ್ಯ ಲಿಂಗನಬಂಡಿವರೆಗೂ ರೈಲು ಸಂಚರಿಸುವಷ್ಟು ಕೆಲಸ ಮುಗಿದಿದೆ. ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 350 ಕೋಟಿ ರೂ., ರಾಜ್ಯ ಸರ್ಕಾರ 250 ಕೋಟಿ ರೂ. ನೀಡಿದೆ ಎಂದು ಸಂಸದರು ತಿಳಿಸಿದರು.

    ಪ್ರಮುಖರಾದ ಶಿವಕುಮಾರ ಗುಳಗಣ್ಣವರ್, ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪುರಮಠ, ವೆಂಕಟರಡ್ಡಿ ಯರಾಶಿ, ಸೋಮಪ್ಪ ಆಲೂರು, ಚನ್ನಪ್ಪ ಮೆಣಸಿನಕಾಯಿ, ಮುದಕಪ್ಪ ದೇವರ, ಪ್ರಭುರಾಜ ಹಳ್ಳಿ, ಶರಣಪ್ಪಗೌಡ ತೆಗ್ಗಿನಮನಿ, ಭಾಸ್ಕರ್ ಭಾವಿಕಟ್ಟಿ, ನಾಗರಾಜ ಹಳ್ಳಿಕೇರಿ, ಶಂಕ್ರಪ್ಪ ವೈ.ಜಿ., ವೀರಪ್ಪ ಗೊಂದಿ, ಹಿರಿಯರಾದ ಅಮರೇಶ ಹಿರೇಮನಿ, ಮಂಜುನಾಥ ನಾಡಗೌಡರ್, ಮಲ್ಲಿಕಾರ್ಜುನ ಚೌದ್ರಿ, ನಾಗರಾಜ ವೆಂಕಟಾಪುರ, ಜಗನ್ನಾಥ ಗಡ್ಡದ್, ಸಿದ್ದಣ್ಣ ಜಿವಣ್ಣವರ್, ವೀರಪ್ಪ ಗೊಂದಿ, ರಮೇಶ ತಳವಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts