More

    ವನ್ಯಸಂಪತ್ತು ಸಂರಕ್ಷಿಸಲು ಸಂಚಾರ ದಳ

    ಎನ್.ಆರ್.ಪುರ: ಅರಣ್ಯ ಉತ್ಪನ್ನ ಕಳ್ಳಸಾಗಣೆ ತಟೆಗಟ್ಟುವುದು ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಸಿಐಡಿ ಪೊಲೀಸ್ ಅರಣ್ಯ ಸಂಚಾರ ಎಸ್‌ಐ ಸುನೀತಾ ತಿಳಿಸಿದರು.

    ಬಸ್ ನಿಲ್ದಾಣದಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ನಾಶ ಜಾಸ್ತಿಯಾಗುತ್ತಿರುವುದರಿಂದ ಕಾಡು ಪ್ರಾಣಿಗಳು ಆಹಾರ ಹಾಗೂ ನೀರಿಗಾಗಿ ನಾಡಿಗೆ ಬರುತ್ತಿವೆ. ಇದರಿಂದ ಮನುಷ್ಯ ಹಾಗೂ ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಹಲವು ಕಡೆ ಪ್ರಾಣಿಗಳನ್ನು ಕೊಲ್ಲುವುದು, ಪ್ರಾಣಿಗಳ ಚರ್ಮ ಮಾರಾಟ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ತಡೆಗಟ್ಟಲು ಚಿಕ್ಕಮಗಳೂರಿನಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರ ದಳದ ಕಚೇರಿ ಪ್ರಾರಂಭಿಸಲಾಗಿದೆ. ಕಚೇರಿ ಮೂಲಕ ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೇವೆ. ಅರಣ್ಯ ನಾಶ, ವನ್ಯಜೀವಿಗಳಿಗೆ ಹಾನಿ ಮಾಡಿದರೆ ಕಚೇರಿಗೆ ತಿಳಿಸಬಹುದು. ದೂರವಾಣಿ ಸಂಖ್ಯೆ 9449896479 ಕರೆ ಮಾಡಿ ತಿಳಿಸಬಹುದು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts