More

    ಮಾಜಿ ಸಿಎಂ ಉಮರ್​ ಅಬ್ದುಲ್ಲಾ ಗೃಹಬಂಧನ: ಜಮ್ಮು ಕಾಶ್ಮೀರ ಆಡಳಿತಕ್ಕೆ ಸುಪ್ರೀಂಕೋರ್ಟ್​ ನೋಟಿಸ್​

    ನವದೆಹಲಿ: ಸಾರ್ವಜನಿಕ ಭದ್ರತಾ ಕಾಯ್ದೆಯಡಿ (ಪಿಎಸ್​ಎ) ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್​ ಅಬ್ದುಲ್ಲಾರನ್ನು ಗೃಹಬಂಧನಲ್ಲಿ ಇರಿಸಿರುವುದು ಸರಿಯೋ ಅಥವಾ ತಪ್ಪೋ ಎಂಬುದನ್ನು ಸುಪ್ರೀಂಕೋರ್ಟ್​ ಪರೀಕ್ಷಿಸಲಿದ್ದು, ಈ ಸಂಬಂಧ ಜಮ್ಮು ಕಾಶ್ಮೀರ ಆಡಳಿತಕ್ಕೆ ನೋಟಿಸ್​ ಹೊರಡಿಸಲಾಗಿದ್ದು, ಮಾರ್ಚ್ 2ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಶುಕ್ರವಾರ ತಿಳಿಸಿದೆ.​

    ಉಮರ್​ ಅಬ್ದುಲ್ಲಾ ಬಂಧನವನ್ನು ಪ್ರಶ್ನಿಸಿ ಅವರ ಸಹೋದರಿ ಸಾರಾ ಅಬ್ದುಲ್ಲಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಅಲ್ಲದೆ, ಆದಷ್ಟು ಬೇಗ ಬಿಡುಗಡೆ ಮಾಡಲು ಸೂಚಿವಂತೆ ಮನವಿ ಮಾಡಿದ್ದರು. ಈ ಸಂಬಂಧ ಬೇಗ ಅರ್ಜಿ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಕಪಿಲ್​ ಸಿಬಲ್​ ಮಾಡಿದ್ದ ಮನವಿಯನ್ನೂ ಸುಪ್ರೀಂಕೋರ್ಟ್​ ತಳ್ಳಿ ಹಾಕಿದ್ದು, ಮಾರ್ಚ್​ 2ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

    ಉಮರ್​ ಅಬ್ದುಲ್ಲಾ ಅವರು ಆದಷ್ಟು ಬೇಗ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಉಳಿದ ಭಾರತೀಯರಂತೆಯೇ ಕಾಶ್ಮೀರಿಗಳು ಸಹ ಹಕ್ಕುಗಳನ್ನು ಹೊಂದುತ್ತಾರೆ ಎಂಬ ಭರವಸೆಯಿಂದ ನಾವು ಇಲ್ಲಿದ್ದೇವೆ. ನಾವು ಆ ದಿನಕ್ಕಾಗಿ ಕಾಯುತ್ತಿದ್ದೇವೆ ಎಂದು ಉಮರ್​ ಅಬ್ದುಲ್ಲಾ ಸಹೋದರಿ ಸಾರಾ ಅಬ್ದುಲ್ಲಾ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ದಿನದಿಂದ ಮಾಜಿ ಸಿಎಂ ಉಮರ್​ ಅಬ್ದುಲ್ಲಾರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಮೂರು ತಿಂಗಳ ಕಾಲ ಯಾವುದೇ ವಿಚಾರಣೆಗೆ ಅನುಮತಿ ನೀಡದೆ ಗೃಹಬಂಧನವನ್ನು ಮತ್ತೆ ವಿಸ್ತರಿಸಲಾಗಿದೆ. ಉಮರ್ ಅಬ್ದುಲ್ಲಾರೊಂದಿಗೆ ಅವರ ತಂದೆ ಹಾಗೂ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿರನ್ನು ಸಹ ಇದೇ ಕಾಯ್ದೆಯಲ್ಲಿ ಬಂಧಿಸಿಡಲಾಗಿದೆ. ಈ ಕಾಯ್ದೆಯನ್ನು ಸಾಮಾನ್ಯವಾಗಿ ಭಯೋತ್ಪಾದಕರು ಮತ್ತು ಕಲ್ಲು ತೂರಾಟ ನಡೆಸುವವರ ಮೇಲೆ ಹೇರಲಾಗುತ್ತದೆ.

    ಇದು ಸ್ವಾತಂತ್ಯದ ವಿಚಾರವಾಗಿದ್ದು, ಕಾಯಲು ಸಾಧ್ಯವಿಲ್ಲ. ಆದಷ್ಟು ಬೇಗ ವಿಚಾರಣೆ ನಡೆಸಿ ಎಂದು ಕಪಿಲ್​ ಸಿಬಲ್​ ಮನವಿ ಮಾಡಿದ್ದರು. ಆದರೆ, ಸುಪ್ರೀಂಕೋರ್ಟ್​ ಇದನ್ನು ನಿರಾಕರಿಸಿ ಮಾರ್ಚ್​ 2ಕ್ಕೆ ಮುಂದೂಡಿದೆ.

    ಫೆ. 5ರಂದು ಜಮ್ಮು ಕಾಶ್ಮೀರ ಆಡಳಿತ ಸಂವಿಧಾನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿಗಳಿಗೆ ಗೃಹಬಂಧನವನ್ನು ವಿಸ್ತರಿಸಿತ್ತು. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts