More

    ಟೊಮ್ಯಾಟೊ ಪ್ರಿಯರಿಗೆ ಶಾಕ್‌! ಗಗನಕ್ಕೇರಿತು ಬೆಲೆ…

    ನವದೆಹಲಿ: ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಟೊಮ್ಯಾಟೊ ಬೆಲೆ ಬಹುತೇಕ ನಗರಗಳಲ್ಲಿ 60 ರಿಂದ 70 ರೂಪಾಯಿಗೆ ದಿಢೀರನೆ ಏರಿಕೆಯಾಗಿದೆ. ಕೆ.ಜಿಯೊಂದಕ್ಕೆ 10-15 ರೂಪಾಯಿಗೆ ಸಿಗುತ್ತಿದ್ದ ಟೊಮ್ಯಾಟೊ ಬೆಲೆ ಛಂಗನೆ ಜಿಗಿದಿದೆ.

    ಟೊಮ್ಯಾಟೊ ಬೆಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಇದು ಮಾರುಕಟ್ಟೆಗೆ ಬರುವ ಮೊದಲೇ ಹಾಳಾಗುತ್ತಿರುವುದು ಇದಕ್ಕೆ ಕಾರಣ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

    ಗುರುಗ್ರಾಮ, ಗ್ಯಾಂಗ್ ಟಾಕ್, ಸಿಲಿಗುರಿ, ರಾಯ್ ಪುರ್ ಗಳಲ್ಲಿ 70 ರೂಪಾಯಿಗಳಿಗೆ ಏರಿಕೆಯಾಗಿದ್ದು, ಗೋರಖ್‌ಪುರ, ಕೋಟಾ ಮತ್ತು ದಿಮಪುರ್‌ಗಳಲ್ಲಿ ಕೆ.ಜಿಗೆ 80ರೂಪಾಯಿ ಆಗಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊಂಚ ಬೆಲೆ ಕಡಿಮೆ ಇದ್ದು, 46-50 ರೂಪಾಯಿ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಕೆ.ಜಿಗೆ 37 ರೂಪಾಯಿಯಿದ್ದರೆ ಚೆನ್ನೈಯಲ್ಲಿ 40 ರೂಪಾಯಿ ಹೆಚ್ಚಾಗಿದೆ.

    ಸಾಮಾನ್ಯವಾಗಿ ಜುಲೈಯಿಂದ ಸೆಪ್ಟೆಂಬರ್‌ವರೆಗೆ ಇದರ ಬೆಲೆ ತೀವ್ರ ಮಳೆಯಿರುವಾಗ ಹೆಚ್ಚಾಗುತ್ತದೆ. ಈಗಲೂ ಅನೇಕ ಕಡೆಗಳಲ್ಲಿ ಈ ಬೆಳೆಯ ಪ್ರಮಾಣ ಕಡಿಮೆಯಾಗಿರುವ ಜತೆಗೆ, ಕೊಳೆತು ಹೋಗುವುದೂ ಹೆಚ್ಚಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ಈ ಬಾರಿಯೂ ಬೆಲೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ ಸಚಿವರು. ಮಾರುಕಟ್ಟೆಗೆ ಪೂರೈಕೆ ಹೆಚ್ಚಾದಾಗ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.

    ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts