More

    ಶೌಚಗೃಹ ನಿರ್ವಹಣೆಯದ್ದೇ ಸವಾಲು

    ಕಿರಣ ಹೂಗಾರ ಅಕ್ಕಿಆಲೂರ

    ಪಟ್ಟಣದ ಹೊಸ್ ಬಸ್ ನಿಲ್ದಾಣದಲ್ಲಿ ಶೌಚಗೃಹವಿದ್ದರೂ ಇಲ್ಲದಂತಾಗಿದೆ. ನೂತನ ಶೌಚಗೃಹ ನಿರ್ವಣಗೊಂಡು ಆರು ತಿಂಗಳು ಕಳೆದಿವೆ. ಆದರೂ ಸಾರ್ವಜನಿಕರ ಉಪಯೋಗಕ್ಕೆ ನೀಡಲು ಸಾರಿಗೆ ಇಲಾಖೆ ಮೀನಾಮೇಷ ಎಣಿಸುತ್ತಿದೆ.

    ಅಕ್ಕಿಆಲೂರ ಸೇರಿ ಸುತ್ತಲಿನ 50ಕ್ಕೂ ಅಧಿಕ ಗ್ರಾಮಗಳ ಜನರು ಪ್ರಯಾಣಕ್ಕೆ ನಿತ್ಯ ಆಗಮಿಸುವ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ. ಇದಕ್ಕೆ ಕಾರಣ ಸಾರ್ವಜನಿಕ ಶೌಚಗೃಹ ಇಲ್ಲದಿರುವುದು. ಹಾವೇರಿ- ಹಾನಗಲ್ಲ, ಹಾವೇರಿ- ಶಿರಸಿ, ಹಾವೇರಿ- ಶಿವಮೊಗ್ಗ ಸೇರಿ ಅಕ್ಕಿಆಲೂರ ಸುತ್ತಲಿರುವ ಒಳ ಗ್ರಾಮಗಳಿಗೆ ಸಾಗುವ ಸರ್ಕಾರಿ ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರ ಉಪಯೋಗಕ್ಕೆ ಇದ್ದ ಒಂದು ಶೌಚಗೃಹ ಸಂಪೂರ್ಣವಾಗಿ ಶಿಥಿಲಗೊಂಡಿದೆ.

    ಯೋಗ್ಯ ಶೌಚಗೃಹ ಇಲ್ಲದಿರುವುದನ್ನು ಮನಗಂಡು ಸಾರಿಗೆ ಇಲಾಖೆಯು ರಾಜ್ಯ ಸರ್ಕಾರದ ಎಸ್​ಡಿಪಿ ಅನುದಾನದಲ್ಲಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಶೌಚಗೃಹ ನಿರ್ವಿುಸಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಿದೆ. ನಿರ್ವಣಗೊಂಡು 5 ತಿಂಗಳು ಕಳೆದರೂ ಸಾರ್ವಜನಿಕರ ಉಪಯೋಗ್ಯಕ್ಕೆ ದೊರೆಯದಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.

    ನಿಲ್ದಾಣದ ಸುತ್ತ ಮೂತ್ರವಿಸರ್ಜನೆ: ಬಸ್ ನಿಲ್ದಾಣದಲ್ಲಿ ಶೌಚಗೃಹ ಇಲ್ಲದಿರುವುದರಿಂದ ಸಾರ್ವಜನಿಕರು ನಿಲ್ದಾಣದ ಸುತ್ತ ಮೂತ್ರವಿಸರ್ಜನೆಗೆ ತೆರಳುವ ದೃಶ್ಯ ಸಾಮಾನ್ಯವಾಗಿದೆ. ಪರಸ್ಥಳದಿಂದ ಪಟ್ಟಣಕ್ಕೆ ವ್ಯಾಪಾರ, ವಹಿವಾಟಿಗೆ ಬರುವವರ ಯಾತನೆ ಅಷ್ಟಿಷ್ಟಲ್ಲ. ಶಾಲೆ- ಕಾಲೇಜ್​ಗಳಿಗೆ ತೆರಳುವವರ ಪಾಡು ಹೇಳತೀರದು. ಅನಿವಾರ್ಯಕ್ಕೆ ದುರ್ನಾತ ಬೀರುವ ಹಳೆಯ ಶೌಚಗೃಹವನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ.

    ನೂತನವಾಗಿ ನಿರ್ವಿುಸಿರುವ ಶೌಚಗೃಹ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಯಾರೊಬ್ಬರೂ ಮುಂದೆ ಬಾರದಿರುವುದರಿಂದ, ಆರಂಭ ಮಾಡುತ್ತಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಶೌಚಗೃಹ ಸ್ವಚ್ಛತೆ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅಥವಾ ಸ್ಥಳೀಯರಿಗೆ ವಹಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

    ಅಕ್ಕಿಆಲೂರ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ವಿುಸಿರುವ ಶೌಚಗೃಹವನ್ನು ಶೀಘ್ರ ಉದ್ಘಾಟಿಸಬೇಕು. ಸ್ಥಳೀಯ ವ್ಯಾಪಾರಿಗಳು ಮತ್ತು ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ. ಟೆಂಡರ್​ನಲ್ಲಿ ಯಾರೂ ಭಾಗವಹಿಸದಿದ್ದರೆ ಒಪ್ಪಂದದ ಮೇರೆಗೆ ಸ್ಥಳೀಯರಿಗೆ ನೀಡಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಹಿಂದು ಯುವಸೇನೆಯಿಂದ ಪ್ರತಿಭಟನೆ ಮಾಡಲಾಗುವುದು.

    | ಗಿರೀಶ ಕರಿದ್ಯಾವಣ್ಣನವರ, ಹಿಂದು ಯುವಸೇನೆ ಉಪಾಧ್ಯಕ್ಷ ಅಕ್ಕಿಆಲೂರ

    ಸಾರಿಗೆ ಇಲಾಖೆ ನಿಯಮಾವಳಿ ಪ್ರಕಾರ ಬಸ್ ನಿಲ್ದಾಣದಲ್ಲಿ ನಿರ್ವಿುಸಿರುವ ನೂತನ ಶೌಚಗೃಹ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಯಾರೊಬ್ಬರೂ ಭಾಗವಹಿಸುತ್ತಿಲ್ಲ. ಟೆಂಡರ್ ಪ್ರಕ್ರಿಯೆ ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಟೆಂಡರ್ ಆದ ನಂತರವೇ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು.

    | ವಿ.ಎಂ. ಅರ್ಕಾಚಾರಿ, ಹಾನಗಲ್ಲ ಡಿಪೋ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts