More

    ಇತಿಹಾಸ ಸೃಷ್ಟಿಸಬೇಕಾದರೆ ನಾವು ಮೊದಲು ಇತಿಹಾಸ ಅರಿಯಬೇಕು

    ಆಲ್ದೂರು: ರಾಜಕೀಯ, ಅಧಿಕಾರ ಶಾಶ್ವತವಲ್ಲ. ನಮಗೆ ಅಧಿಕಾರ ಸಿಕ್ಕ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಅಂತಹ ಕೆಲಸ ಜನಮಾನಸದಲ್ಲಿ ಉಳಿಯುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
    ಕಾಂಗ್ರೆಸ್ ಆಲ್ದೂರು ಬ್ಲಾಕ್ ಪರಿಶಿಷ್ಟ ಜಾತಿ ಘಟಕ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಇತಿಹಾಸ ಸೃಷ್ಟಿಸಬೇಕಾದರೆ ಇತಿಹಾಸವನ್ನು ಅರಿಯಬೇಕು ಎಂದರು.
    ಈ ಬಾರಿ ನನ್ನ ಸಮಯದಾಯ ಸೇರಿ ಎಲ್ಲ ಸಮುದಾಯದ ಜನತೆ ನನ್ನ ಗೆಲುವಿಗೆ ಶ್ರಮವಹಿಸಿದ್ದಾರೆ. ಕ್ಷೇತ್ರದಲ್ಲಿ ನೀರು, ರಸ್ತೆ, ನಿವೇಶನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು. ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
    ಜಿಲ್ಲಾಧ್ಯಕ್ಷ ಡಾ. ಕೆ.ಅಂಶುಮಂತ್ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಅಂಬೇಡ್ಕರ್ ಆಶಯದಂತೆ ಕಾರ್ಯನಿರ್ವಹಿಸಬೇಕು. ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯು ಬಿಟ್ಟಿ ಭಾಗ್ಯ ಎಂದು ಲೇವಡಿ ಮಾಡುತ್ತಿರುವುದು ಖಂಡನೀಯ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
    ಎಸ್ಸಿ, ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಆಲ್ದೂರು ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಈರಯ್ಯ, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಮುದಾಬಿರ್, ಹೋಬಳಿ ಅಧ್ಯಕ್ಷ ಪೂರ್ಣೇಶ್, ವಸ್ತಾರೆ ಎಸ್ಸಿ ಘಟಕದ ಅಧ್ಯಕ್ಷ ಕೃಷ್ಣಪ್ರಸಾದ್, ಆವತಿ ಹೊಬಳಿ ಅಧ್ಯಕ್ಷ ಸಿದ್ದಾಂತ್, ವಸಂತ್‌ಕುಮಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಬಸವಯ್ಯ, ಯೋಗೇಶ್, ಕೋಟೆಊರು ಲಕ್ಷ್ಮಣ್, ಚಂದುಶೇಖರ್, ವನಮಾಲಾ ಮೃತ್ಯುಂಜಯ, ಸವಿತಾ ರಮೇಶ್, ಜಯಶೀಲಾ ಚಿದಂಬರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts