More

    ಚೌತಿಗಷ್ಟೇ ಅಲ್ಲ, ದಸರಾ ಆಚರಣೆಗೂ ಕರೊನಾ ಕಂಟಕ; ಈ ಸಲವೂ ಸರಳವಾಗಿ ಹಬ್ಬ ಆಚರಿಸಲು ನಿರ್ಧಾರ

    ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಮಾತ್ರವಲ್ಲದೆ ದಸರಾ ಸಂಭ್ರಮಕ್ಕೂ ಕರೊನಾ ಕಂಟಕ ಎದುರಾಗಿದ್ದು, ಕಳೆದ ವರ್ಷದಂತೆ ಈ ಸಲವೂ ಸರಳವಾಗಿಯೇ ದಸರಾ ಹಬ್ಬದ ಆಚರಣೆ ಆಗಲಿದೆ. ದಸರೆಗೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ.

    ಕರೊನಾ ಎರಡನೆ ಅಲೆ ಇನ್ನೂ ಹೋಗಿಲ್ಲ. ಮೂರನೆಯ ಅಲೆಯ ಭೀತಿಯೂ ಇದೆ. ಹೀಗಾಗಿ ಈ ಸಲದ ದಸರೆಯನ್ನು ಸರಳವಾಗಿ ಆಚರಿಸಲಾಗುವುದು. ಸಾಂಪ್ರದಾಯಿಕ ವಿಧಿ-ವಿಧಾನಕ್ಕೆ ಸೀಮಿತವಾಗಿ ಸರಳವಾಗಿ ದಸರಾ ಆಚರಿಸುವ ಬಗ್ಗೆ ಪೂರ್ವಭಾವಿಯಾಗಿ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ಕಳೆದ ಬಾರಿಯೂ ಕೊರೊನಾ ಭೀತಿ ಹಿನ್ನೆಲೆ ಸರಳ ದಸರಾ ಆಚರಿಸಲಾಗಿತ್ತು.‌ ಈ ಬಾರಿಯೂ ಅದೇ ಮಾದರಿಯ ಆಚರಣೆಗೆ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕಳೆದ ಬಾರಿ ಹೊರಡಿಸಿದ ಮಾರ್ಗಸೂಚಿಯನ್ವಯ ಚಾಮುಂಡಿ ಬೆಟ್ಟದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದರ ಸಂಖ್ಯೆ ಹೆಚ್ಚು ಮಾಡುವ ಬಗ್ಗೆ ಚರ್ಚೆ. ಜಂಬೂ ಸವಾರಿಯಲ್ಲಿ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.‌ ಈ ಬಾರಿ ಇನ್ನಷ್ಟು ಸರಳೀಕರಿಸುವ ಕುರಿತು ಚರ್ಚೆ ನಡೆಸಲಾಗಿದೆ. ಹಾಗೆಯೇ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆ ನೀಡುವಂತೆಯೂ ಸಭೆಯಲ್ಲಿ ನಿರ್ಣಯಿಸಲಾಗಿದೆ.

    ಅಕ್ಟೋಬರ್ 7ರ ಬೆಳಗ್ಗೆ 8.15ಕ್ಕೆ ದಸರಾ ಉದ್ಘಾಟನೆ ಆಗಲಿದ್ದು, ಉದ್ಘಾಟಕರನ್ನು ಆಹ್ವಾನಿಸುವ ಅಧಿಕಾರ ಸಿಎಂ ಅವರಿಗೆ ಸಭೆ ವಹಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಅರಮನೆ ಆವರಣದಲ್ಲಿ ಜಂಬೂ ಸವಾರಿ, ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ನಾಡಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಈ ಬಾರಿಯೂ ಇರಲಿದೆ. ಉದ್ಘಾಟನೆ, ಜಂಬೂ ಸವಾರಿ, ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನರ ಪ್ರಮಾಣ ಸೆಪ್ಟೆಂಬರ್ 15ಕ್ಕೆ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್ ತಿಳಿಸಿದ್ದಾರೆ.

    ಸಭೆಯಲ್ಲಿ ಸಂಸದರಾದ ಸುಮಲತಾ, ಪ್ರತಾಪ್​ ಸಿಂಹ, ಸಚಿವರಾದ ಸುನೀಲ್​ಕುಮಾರ್, ಎಸ್​.ಟಿ.ಸೋಮಶೇಖರ್, ಬೈರತಿ ಬಸವರಾಜ, ಜಿಲ್ಲಾಧಿಕಾರಿ, ಎಸ್​ಪಿ ಜತೆಗೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

    ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts