More

    ಇತ್ತ ಹುಲಿ ಸೆರೆಗಾಗಿ ಶೋಧ, ಅತ್ತ ಮತ್ತೊಂದು ಮೇಕೆ ಬಲಿ

    ನಂಜನಗೂಡು: ತಾಲೂಕಿನ ಮಹದೇವನಗರದ ರೈತನ ಮೇಲೆ ದಾಳಿ ನಡೆಸಿ, ಹಸುವನ್ನು ಬಲಿ ಪಡೆದಿದ್ದ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದ್ದು, ಆನೆ ಮೂಲಕ ಕೂಂಬಿಂಗ್ ನಡೆಸಿ ಹುಲಿ ಸೆರೆಗಾಗಿ ತೀವ್ರ ಶೋಧ ನಡೆಸುತ್ತಿರುವ ಬೆನ್ನಲ್ಲೇ ಹಾದನೂರು ಒಡೆಯನ ಪುರ ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಹುಲಿ ಬಲಿ ಪಡೆದಿದೆ.

    ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಹಸುವನ್ನು ಬಲಿ ಪಡೆದಿತ್ತು. ಶುಕ್ರವಾರ ಸಹ ಹಾದನೂರು ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ.

    ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಲ್ಲದೆ ತಾಲೂಕಿನ ಹಾದನೂರು ಒಡೆಯನ ಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದ 6 ರಿಂದ 7 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ವಿಶೇಷ ಹುಲಿ ರಕ್ಷಣಾ ಪಡೆ ಮತ್ತು ಅರಣ್ಯಾಧಿಕಾರಿಗಳ ತಂಡ ತೀವ್ರ ಹುಡುಕಾಟ ನಡೆಸಿತು. ಅಲ್ಲದೆ ಹುಲಿ ಪತ್ತೆಗಾಗಿ 10 ಕಡೆ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಹುಲಿಯ ಚಲನ ವಲದ ಮೇಲೆ ನಿಗಾವಹಿಸಿದ್ದಾರೆ. ರಾಮಾಪುರ ಆನೆ ಶಿಬಿರದಿಂದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚಣೆಗಾಗಿ ಧರ್ಮ ಹಾಗೂ ಪಾರ್ಥ ಎಂಬ 2 ಸಾಕಾನೆಗಳನ್ನು ಬಳಸಿಕೊಂಡು ಹುಲಿ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ವಲಯ ಅರಣ್ಯಾಧಿಕಾರಿ ನಾರಾಯಣರಾವ್ ಮಾತನಾಡಿ, ಹುಲಿ ಪತ್ತೆಗಾಗಿ ಮುಂದಿನ 3 ದಿನಗಳ ಕಾಲ ಸಾಕಾನೆಗಳಾದ ಪಾರ್ಥ, ಮತ್ತು ಧರ್ಮ ಆನೆಗಳ ಮೂಲಕ ಶೋಧ ಮುಂದುರಿಸಲಿದ್ದೇವೆ. ಶುಕ್ರವಾರ ಹಾದನೂರು ಒಡೆಯನಪುರ ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ. ಮೇಕೆ ಬಲಿಪಡೆದಿರುವುದು ಅದೇ ಹುಲಿಯೇ ಅಥವಾ ಮತ್ತೊಂದು ಹುಲಿ ಇರಬಹುದೇ ಎಂಬುದರ ಬಗ್ಗೆ ಖಚಿತವಾಗಿಲ.್ಲ ಆದ್ದರಿಂದ ಕ್ಯಾಮರಾ ಅಳವಡಿಸಲಾಗಿದ್ದು ಅದರ ಚಲನ ವಲನ ಬಗ್ಗೆ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts