More

    ಬೆಂಗಳೂರು ಕ್ಯಾಬ್​ ಚಾಲಕನ ಸ್ಫೂರ್ತಿಯ ಕತೆಗೆ ನೆಟ್ಟಿಗರು ಫಿದಾ!

    ನವದೆಹಲಿ: ಕೆಲವೊಮ್ಮೆ ನಾವು ಭೇಟಿ ಮಾಡುವ ಅಪರಿಚಿತರು ಕೆಲವೇ ಕ್ಷಣಗಳಲ್ಲಿ ತಮ್ಮ ಮಾತು ಮತ್ತು ಜೀವನ ಶೈಲಿಯಿಂದ ನಮ್ಮ ಮೇಲೆ ಪ್ರಭಾವ ಬೀರುತ್ತಾರೆ. ಅದೇ ರೀತಿ ಟ್ವಿಟರ್​ ಬಳಕೆದಾರ ಸುಮಿತ್​ ಮಘಾನಿ ಎಂಬುವರಿಗೆ ಬೆಂಗಳೂರು ಮೂಲದ ಕ್ಯಾಬ್​ ಚಾಲಕನೊಬ್ಬ ಪ್ರಭಾವ ಬೀರಿದ್ದು, ಆತನ ಕುರಿತು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಬೆಂಗಳೂರು ಅಂದಮೇಲೆ ಪ್ರಮುಖವಾಗಿ ನೆನಪಿಗೆ ಬರುವುದರಲ್ಲಿ ಟ್ರಾಫಿಕ್​ ಜಾಮ್​ ಕೂಡ ಒಂದು.  ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಟ್ರಾಫಿಕ್​ನಲ್ಲಿ ಸಿಲುಕಿದ್ದ ಸಮಯದಲ್ಲಿ ಕ್ಯಾಬ್​ ಚಾಲಕನ ಸ್ಫೂರ್ತಿಯ ಕತೆ ಕೇಳಿ ಸುಮಿತ್​ ಮಘಾನಿ ಅವರು ಫಿದಾ ಆಗಿದ್ದಾರೆ.

    ಇದನ್ನೂ ಓದಿ: ಆರೋಗ್ಯಕರ ಬೆಳವಣಿಗೆ: ಸರ್ಕಾರಿ ವೈದ್ಯಕೀಯ ಕಾಲೇಜು ಸಂಖ್ಯೆ ಹೆಚ್ಚಳ

    ಕ್ಯಾಬ್​ ಚಾಲಕ ತನ್ನ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದು, ಕಳೆದ 17 ವರ್ಷಗಳಿಂದ ಚಾಲನ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಹಗಲು ಮಾತ್ರವಲ್ಲದೆ, ರಾತ್ರಿಯಿಡಿ ದುಡಿಯುವ ಆತನ ಉದ್ದೇಶ ನನ್ನ ಮನಸ್ಸನ್ನು ಗೆದ್ದಿತು ಎಂದು ಮಘಾನಿ ಹೇಳಿಕೊಂಡಿದ್ದಾರೆ.

    ಒಂದು ರಾತ್ರಿ ಕ್ಯಾಬ್​ ಚಾಲಕನಿಗೆ ಕರೆ ಬಂದಿತು. ಆದರೆ, ತುಂಬಾ ದೂರ ಮತ್ತು ರಾತ್ರಿಯಾದ್ದರಿಂದ ಆ ಪಿಕಪ್​ ಅನ್ನು ನಿರ್ಲಕ್ಷಿಸಲು ಯತ್ನಿಸಿದರು. ಆದರೆ ಪದೇಪದೆ ಕರೆ ಬಂದ ಹಿನ್ನೆಲೆಯಲ್ಲಿ ಏನೋ ತುರ್ತು ಪರಿಸ್ಥಿತಿ ಇರಬಹುದು ಅಂತ ಹೋಗಲು ತೀರ್ಮಾನಿಸಿ, ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಯಾವುದೇ ಹಿಂಜರಿಕೆ ಇಲ್ಲದೆ, ತಕ್ಷಣ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿ ವೈದ್ಯರು ಇರಲಿಲ್ಲ. ತಕ್ಷಣ ಮತ್ತೊಂದು ಆಸ್ಪತ್ರೆಗೆ ತೆರಳಿದರು ಮತ್ತು ಯಾವುದೇ ತೊಂದರೆಯಿಲ್ಲದೆ ಮಗು ಜನನವಾಯಿತು ಎಂದು ಮೇಘಾನಿ ಬರೆದುಕೊಂಡಿದ್ದಾರೆ.

    ಪರಿಸ್ಥಿತಿ ತುಂಬಾ ಕಠಿಣವಾದಾಗಲೂ ಕ್ಯಾಬ್​ ಚಾಲಕ ಶಾಂತವಾಗಿರುತ್ತಾನೆ. ಇದಕ್ಕೆ ಕಾರಣ ಸುತ್ತಮುತ್ತಲಿನ ಶಕ್ತಿ ಎಂದು ಆತ ನಂಬಿದ್ದಾನೆ. ಕುಟುಂಬಕ್ಕೆ ಹಗಲು ರಾತ್ರಿ ದುಡಿದು, ಸಮಾಜದಲ್ಲಿ ಕಷ್ಟಕ್ಕೆ ಸ್ಪಂಧಿಸುವುದೇ ಆತನ ಉದ್ದೇಶವಾಗಿದೆ. ತಮ್ಮ ಕುಟುಂಬವನ್ನು ಬೆಂಬಲಿಸಲು ಶ್ರಮಿಸುವವರನ್ನು ಪ್ರಶಂಸಿಸೋಣ ಮತ್ತು ನಮ್ಮ ಸ್ವಂತ ಕೆಲಸದಲ್ಲಿ ಉದ್ದೇಶವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ ಎಂದು ಮೇಘಾನಿ ಕರೆ ನೀಡಿದ್ದಾರೆ.

    ಇದನ್ನೂ ಓದಿ: ಕರೊನಾ ಸೋಂಕು ಪ್ರಕರಣದಲ್ಲಿ ಏರಿಕೆ; ಕೋವಿಡ್ ತಡೆಗೆ ಆರೋಗ್ಯ ಇಲಾಖೆಯಿಂದ ಪಂಚಸೂತ್ರ

    ಕ್ಯಾಬ್ ಚಾಲಕನ ಹೃದಯ ಸ್ಪರ್ಶಿಸುವ ಕಥೆ ಅಂತರ್ಜಾಲದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ಇದು ಪ್ರೇರಣೆಯಲ್ಲದಿದ್ದರೆ, ಮತ್ತೇನು ಎಂದು ನನಗೆ ತಿಳಿದಿಲ್ಲ! ಅವನ ಮೇಲೆ ಹೆಚ್ಚು ಪ್ರೀತಿ ಇದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಬ್ಯೂಟಿಫುಲ್​ ಎಂಬ ಬಣ್ಣಿಸಿದ್ದಾರೆ. (ಏಜೆನ್ಸೀಸ್​)

    ಕೊರತೆಯಾಗದು ಆಹಾರ, ಏರಿಕೆಯಾಗದು ದರ..

    ಅನ್ನ ಪ್ರಸಾದ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts