More

    ಸ್ಕೂಲ್ ಇಲ್ದಿದ್ರೂ ಆಕ್ಟಿವಿಟಿ ಉಂಟು!

    ಶಾಲೆ ಬಾಗಿಲು ಹಾಕಿದ್ದರೇನಂತೆ, ಮನೆ ಬಾಗಿಲಿಗೇ ಬಂದು ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಮಿಂದೇಳಿಸುತ್ತಿದೆ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್. ಮಕ್ಕಳು ಚಿತ್ರಕಲೆ, ನೃತ್ಯ, ಹಾಡು, ಕ್ರಾಫ್ಟ್, ಕಸೂತಿ, ವಿನೋದ ಗಣಿತ, ಮೋಜಿನ ವಿಜ್ಞಾನ, ಕಸದಿಂದ ರಸ ಮುಂತಾದ ಚಟುವಟಿಕೆಗಳನ್ನು ಕಲಿಯುತ್ತಿದ್ದಾರೆ.

    ಜಯಂತ ಕೆ.ಎಸ್., ಧಾರವಾಡ

    ರಾಜ್ಯದಲ್ಲಿ ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದು, ಮಕ್ಕಳು ಆನ್​ಲೈನ್​ನಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಹಲವು ಮಕ್ಕಳು ಆನ್​ಲೈನ್ ಶಿಕ್ಷಣ ಪಡೆಯಲು ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಯ್ತು. ಅಂತಹ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಬಡ ಕುಟುಂಬಗಳ ಮಕ್ಕಳ ಭವಿಷ್ಯ ರೂಪಿಸಲು ಮುಂದಾದ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್ ಸಂಸ್ಥೆಯು ಸಮುದಾಯ ಕಲಿಕಾ ಕೇಂದ್ರ ಸ್ಥಾಪಿಸಿ ಮಕ್ಕಳಲ್ಲಿನ ಕಲಿಕಾಮಟ್ಟ, ಕೌಶಲ್ಯ ವೃದ್ಧಿಸುವ ಕಾಯಕದಲ್ಲಿ ನಿರತವಾಗಿದೆ. ಮೊದಲು ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲೆಗಳ ಮಕ್ಕಳು, ಪಾಲಕರು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರನ್ನು ಸಂರ್ಪಸಿ ಸಮೀಕ್ಷೆ ನಡೆಸಲಾಯಿತು. ಅಂಡ್ರಾಯ್್ಡ ಮೊಬೈಲ್ ಇಲ್ಲದ ಕಾರಣ ಮತ್ತು ನೆಟ್​ವರ್ಕ್ ಸಮಸ್ಯೆಯಿಂದಾಗಿ ತಾವು ಆನ್​ಲೈನ್ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಗ್ರಾಮೀಣ ಭಾಗದ ಶೇ. 57ರಷ್ಟು ವಿದ್ಯಾರ್ಥಿಗಳು ಹೇಳಿದ್ದರು. ಅಷ್ಟೇ ಅಲ್ಲ, ಶಾಲೆ ಇಲ್ಲದ ಕಾರಣ ಶೇ.22ರಷ್ಟು ಮಕ್ಕಳು ದುಶ್ಚಟಗಳತ್ತ ವಾಲುತ್ತಿದ್ದಾರೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಆ ಸಮಸ್ಯೆ ನಿವಾರಿಸಲು ಹುಟ್ಟಿಕೊಂಡದ್ದೇ ಸಮುದಾಯ ಕಲಿಕಾ ಕೇಂದ್ರ.

    ಕರೊನಾ ಬರದಿರಲು ಮುಂಜಾಗ್ರತೆ: ಕಲಿಕಾ ಕೇಂದ್ರದಲ್ಲಿ 8ರಿಂದ 16 ವರ್ಷದೊಳಗಿನ ಮಕ್ಕಳಿಗಷ್ಟೇ ಅವಕಾಶ. ಸಮುದಾಯ ಭವನ, ದೇವಸ್ಥಾನ, ಮನೆಗಳ ಮೇಲ್ಛಾವಣಿಗಳಲ್ಲಿ ಈ ಕೇಂದ್ರಗಳು ನಡೆಯುತ್ತಿದ್ದು, ಎಲ್ಲ ಮಕ್ಕಳಿಗೂ ಮಾಸ್ಕ್ ಕಡ್ಡಾಯ. ದೈಹಿಕ ಅಂತರ ಕಾಯ್ದುಕೊಳ್ಳುವುದು, ಸೋಪಿನಿಂದ ಕೈ ತೊಳೆದುಕೊಳ್ಳುವುದು, ಮಕ್ಕಳ ಟೆಂಪ್ರೇಚರ್ ಪರೀಕ್ಷಿಸಿ ಪ್ರವೇಶ ನೀಡುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಏನೆಲ್ಲ ಕಲಿಸ್ತಾರೆ?

    ಸಮುದಾಯ ಕೇಂದ್ರಗಳಲ್ಲಿ ಚಿತ್ರಕಲೆ, ನೃತ್ಯ, ಹಾಡು, ಪೇಪರ್ ಕ್ರಾಫ್ಟ್, ಕಸೂತಿ, ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದ ಆಟಗಳು, ಸ್ವಗ್ರಾಮದ ಐತಿಹಾಸಿಕ ಹಿನ್ನೆಲೆ ವಿವರಿಸುವುದು, ಕಥೆ ಹೇಳುವುದು, ಕವನ ರಚನೆ, ಬೀಜದ ಉಂಡೆ ತಯಾರಿಕೆ, ವಿನೋದ ಗಣಿತ, ಮೋಜಿನ ವಿಜ್ಞಾನ, ಕಸದಿಂದ ರಸ… ಇತ್ಯಾದಿ ಚಟುವಟಿಕೆಯನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಮಕ್ಕಳ ಆಸಕ್ತಿಗೆ ಪೂರಕ ಚಟುವಟಿಕೆಗಳು ನಡೆಯುತ್ತಿದ್ದು, ಮಕ್ಕಳು ಖುಷಿಯಿಂದಲೇ ನಿತ್ಯ ಹಾಜರಾಗುತ್ತಿದ್ದಾರೆ. ಈ ಚಟುವಟಿಕೆಗಳ ಮುಂದುವರಿದ ಭಾಗವಾಗಿ 3ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವರ್ಕ್ ಬುಕ್ ನೀಡಲಾಗಿದೆ. ಡ್ರಾಯಿಂಗ್ ಶೀಟ್, ಪೆನ್ಸಿಲ್, ಸ್ಕೆಚ್​ಪೆನ್, ಕತ್ತರಿ, ಕ್ರೇಯಾನ್ಸ್, ಫೆವಿಕಾಲ್, ಅಕ್ರಿಲಿಕ್ ಪೇಂಟ್ ಬಾಕ್ಸ್, ಸ್ಕಿಪ್ಪಿಂಗ್ ರೋಪ್, ವೈಟ್ ಬೋರ್ಡ್, ಎಂಬ್ರಾಯಿಡರಿ ಪರಿಕರ, ಚೆಸ್ ಬೋರ್ಡ್ ಮುಂತಾದ ಸಾಮಗ್ರಿಯನ್ನು ಈ ಕೇಂದ್ರಗಳ ಮಕ್ಕಳಿಗೆ ಸಂಸ್ಥೆ ಉಚಿತವಾಗಿ ನೀಡಿದೆ.

    ಕಳೆದ ಮಾರ್ಚ್​ನಿಂದ ಕೋವಿಡ್ ಕಾರಣಕ್ಕೆ ಶಾಲೆಗಳು ಸರಿಯಾಗಿ ನಡೆಯಲೇ ಇಲ್ಲ. ಕಲಿಕಾ ಕೇಂದ್ರವನ್ನು ನಾವಿರುವಲ್ಲೇ ಆರಂಭಿಸಿ, ನಮ್ಮ ಶೈಕ್ಷಣಿಕ ಬದುಕಿಗೆ ಈ ಸಂಸ್ಥೆಯವರು ನೆರವಾಗುತ್ತಿದ್ದಾರೆ.

    | ಚಿನ್ಮಯಿ ಲಿಗಾಡೆ ಕೆಜಿಬಿವಿ ಶಾಲೆ ವಿದ್ಯಾರ್ಥಿನಿ, ಅಳ್ನಾವರ

    ನಾವಂತೂ ಅಕ್ಷರ ಕಲಿತಿಲ್ಲ, ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಷ್ಟ ಪಡುತ್ತಿದ್ದೇವೆ. ಕರೊನಾ ಕಾಲದಲ್ಲಿ ಮಕ್ಕಳ ಓದು ಹೇಗಪ್ಪಾ ಎಂದು ಚಿಂತೆ ಶುರುವಾಗಿತ್ತು. ಅಂತಹ ಸಮಯದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್ ಸಂಸ್ಥೆಯವರು ಕಲಿಕಾ ಕೇಂದ್ರ ಆರಂಭಿಸಿ ನಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಕ್ಕಳಿಗೆ ಪಠ್ಯ ವಿಷಯದ ಜತೆೆಗೆ ಹಲವು ಕೌಶಲ್ಯಗಳನ್ನೂ ಕಲಿಸುತ್ತಿದ್ದಾರೆ.

    | ಲಕ್ಷಿ್ಮೕ ಮಲ್ಲನಗೌಡ ಪಾಟೀಲ, ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts