More

    ನಿವೇಶನಗಳಿಗೆ ಮೂಲಸೌಕರ್ಯಗಳಿಲ್ಲ

    ಭವ್ಯಶ್ರೀ ಚನ್ನಬಸವಣ್ಣ ತಿ.ನರಸೀಪುರ

    ಮೂವತ್ತು ವರ್ಷಗಳ ಹಿಂದೆ ಬಡ ಜನರಿಗೆ ಆಶ್ರಯ ಯೋಜನೆ ಅಡಿ ವಿತರಣೆ ಆಗಿರುವ ಬಂಗಾರಪ್ಪ ಬಡಾವಣೆಯ ನಿವೇಶನಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

    ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಡ ಜನರಿಗೆ ವಸತಿ ಯೋಜನೆ ಅಡಿ ಈಗಿನ ವರುಣ ವಿಧಾನಸಭಾ ಕ್ಷೇತ್ರದ ಹೆಳವರಹುಂಡಿ ಈಶ್ವರಗೌಡನಹಳ್ಳಿ ಮಧ್ಯಭಾಗದಲ್ಲಿರುವ ಸರ್ವೇ ನಂಬರ್ 462ರಲ್ಲಿ ಎರಡು ಹಂತದಲ್ಲಿ 20 ಎಕರೆ ಜಾಗದಲ್ಲಿ 683 ನಿವೇಶನಗಳನ್ನು ಮಂಜೂರು ಮಾಡಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಮೂರು ದಶಕಗಳು ಕಳೆದರೂ ಇಲ್ಲಿಗೆ ಮೂಲ ಸೌಕರ್ಯ ಕಲ್ಪಿಸದೆ ಯಾವುದೇ ಮನೆಗಳು ನಿರ್ಮಾಣವಾಗಿಲ್ಲ.

    ಆಲಗೂಡು ಗ್ರಾಮ ಪಂಚಾಯಿತಿ ಪರಿಮಿತಿಯಲ್ಲಿದ್ದಾಗ ಬಡಾವಣೆಗೆ ಮೂಲಸೌಕರ್ಯಗಳು ದೊರಕದೆ ಹಕ್ಕುದಾರರು ಮನೆ ನಿರ್ಮಿಸಿಕೊಂಡಿರಲಿಲ್ಲ. ಕೆಲವರು ಸಣ್ಣದಾಗಿ ಮನೆ ನಿರ್ಮಿಸಿಕೊಂಡಿದ್ದರೂ ಕೂಡ ಮೂಲ ಸೌಕರ್ಯಗಳಿಲ್ಲದೆ ಪಟ್ಟಣಕ್ಕೆ ವಾಪಸ್ಸಾಗಿದ್ದರು. ಈಗ ಆಲಗೂಡು ಪಟ್ಟಣ ಪಂಚಾಯಿತಿಯೊಂದಿಗೆ ವಿಲೀನಗೊಂಡಿದ್ದು, ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಈಗ ಹಕ್ಕುದಾರರು ವಸತಿ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

    ಈ ಹಿಂದೆ ಯತೀಂದ್ರ ಸಿದ್ದರಾಮಯ್ಯ ಅವರು ಶಾಸಕರಾಗಿದ್ದ ಸಂದರ್ಭ ಮೂಲ ಸೌಕರ್ಯ ಕಲ್ಪಿಸುವಂತೆ ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದ್ದರು. ನಮ್ಮ ಸರ್ಕಾರ ಆಡಳಿತದಲ್ಲಿ ಇಲ್ಲದಿರುವುದರಿಂದ ಅಭಿವೃದ್ಧಿ ಕೆಲಸ ತಡವಾಗಬಹುದು ಎಂದು ಹೇಳಿದ್ದರು. ಆದರೆ, ಈ ಬಾರಿ ಕ್ಷೇತ್ರದವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು, ವಸತಿ ಯೋಜನೆಯ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಅವರ ಗಮನಕ್ಕೆ ತರಲಾಗಿದ್ದು, ಈಗಲಾದರೂ ಬಡಾವಣೆಗೆ ಮೂಲ ಸೌಕರ್ಯ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ ಎಂದು ನಿವಾಸಿಗಳು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts