More

    ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರೆಂಟಿ, ವಾರೆಂಟಿಯೂ ಇರಲ್ಲ: ಪ್ರಹ್ಲಾದ್ ಜೋಶಿ

    ಹೊಸಪೇಟೆ: ದಶಕಗಳ ಹಿಂದೆ ಘೊಷಿಸಿದ್ದ ಜನ ಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಜಾರಿಗೆ ತಂದಿದ್ದರೆ, ಇಂದು ಕಾಂಗ್ರೆಸ್ ನಾಯಕರು ಗ್ಯಾರೆಂಟಿ, ವಾರೆಂಟಿ ಕಾರ್ಡ್ ನೀಡುವ ಅಗತ್ಯವೇ ಇರುತ್ತಿರಲಿಲ್ಲ. ಮುಂಬರುವ  ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ, ವಾರೆಂಟಿ ಯಾವುದೂ ಇರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
    ವಿಜಯನಗರ ಜಿಲ್ಲಾಡಳಿತ, ಜಿ.ಪಂ. ಸಹಯೋಗದಲ್ಲಿ ನಗರದ ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
    ಪ್ರತೀ ಚುನಾವಣೆಯಲ್ಲಿ ಗರೀಬಿ ಹಟಾವೋ, ರೋಟಿ, ಕಪಡಾ ಮಖಾನ್ , ಕಾಂಗ್ರೆಸ್ ಕೆ ಹಾಥ್, ಗರೀಬೋಂಕೆ ಸಾಥ್ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅದನ್ನು ಈಡೇರಿಸಿಲ್ಲ. ಹೀಗಾಗಿ ಜನರೇ ಕಾಂಗ್ರೆಸ್ ಹಟಾವೋ ಮಾಡಿದರು. ಈಗ ೨೦೦ ಯುನಿಟ್ ಉಚಿತ ವಿದ್ಯುತ್, ಜನರಿಗೆ ಮಾಸಿಕ ೨೦೦೦ ರೂ. ಸಹಾಯ ಧನದ ಆಸೆ ತೋರಿಸುವ ಗ್ಯಾರೆಂಟಿ ಕಾರ್ಡ್ ಹಿಡಿದು ಮನೆ ಮನೆಗೆ ಅಲೆಯುತ್ತಿದ್ದಾರೆ. ಕಾಂಗ್ರೆಸ್  ಘೋಷಿಸಿದ್ದ ಯೋಜನೆಗಳು ಜಾರಿಯಾಗಿದ್ದರೆ, ಇಂದು ಬಡತನ ಮುಕ್ತ ಭಾರತವಾಗುತ್ತಿತ್ತು ಎಂದು ಕಾಂಗ್ರೆಸ್ ಯೋಜನೆಗಳ ವೈಫಲ್ಯವನ್ನು ಎಳೆಎಳೆಯಾಗಿ ಪ್ರಸ್ತಾಪಿಸಿ ತಿರುಗೇಟು ನೀಡಿದರು.
    ದೆಹಲಿಯಲ್ಲಿ ಘೋಷಣೆ ಮಾಡಿದ ಯೋಜನೆಯ ಅನುದಾನ ಬಹುತೇಕ ಸೋರಿಕೆಯಾಗಿ ಶೇ.೧೫ ರಷ್ಟು ಮಾತ್ರ ಹಳ್ಳಿಗೆ ತಲುಪುತ್ತಿತ್ತು ಎಂದು ಸ್ವತಃ ಮಾಜಿ ಪ್ರಧಾನಿ ರಾಜೀವಗಾಂಧಿ ಅಸಹಾಯಕತೆ ತೋಡಿಕೊಂಡಿದ್ದರು. ಆದರೆ, ಆ ಪರಿಸ್ಥಿತಿ ಈಗಿಲ್ಲ. ಕೇಂದ್ರದಿಂದ ಪ್ರಧಾನಿ ಮೋದಿ ಬಿಡುಗಡೆ ಮಾಡಿದ ಅನುದಾನ ಶೇ.೧೦೦ ರಷ್ಟು ಸಂಬಂಧಿಸಿದ ಫಲಾನುಭವಿಗೆ ತಲುಪುತ್ತಿದೆ. ಫಲಾನುಭವಿಗಳ ನೇರವಾಗಿ ಬ್ಯಾಂಕ್ ಖಾತೆಗೆ ಜಮಾಆಗುತ್ತಿದೆ.  ಒಂದು ರೂಪಾಯಿ ಕೂಡಾ ವ್ಯತ್ಯಾಸ ಆಗುವುದಿಲ್ಲ.  ಡಿಬಿಟಿ ಮಾಡಿದ್ದರಿಂದ ಮಧ್ಯವರ್ತಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ ಎಂದರು.
    ಪ್ರಧಾನಿ ಮೋದಿ ಅವರು ಬಡ ಕುಟುಂಬದಿಂದ ಬಂದವರು. ಅವರ ತಾಯಿ ಮತ್ತೊಬ್ಬರ ಮನೆಗಳಲ್ಲಿ ಕಸ, ಮುಸುರೆ ತಿಕ್ಕಿ ಮಕ್ಕಳ ಸಾಕಿದ್ದಾರೆ. ಅಂತರ ಪರಿಶ್ರಮದ ಕುಟುಂಬದ ಮೋದಿಗೆ ಸದಾ ಬಡವರ ಕಾಳಜಿ. ಬೇಟಿ ಬಚಾವೋ, ಬೇಟಿ ಪಡಾವೋ ಮೂಲಕ ದೇಶದಲ್ಲಿ ಹೆಣ್ಣು ಭ್ರೂಹತ್ಯೆಯನ್ನು ಸಂಪೂರ್ಣ ನಿವಾರಿಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಿದ್ದಾರೆ. ಅದರಂತೆ ರಾಜ್ಯ ಸರ್ಕಾರವೂ ಎಲ್ಲ ವರ್ಗದ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳು ಅರ್ಹರಿಗೆ ತಲುಪಿದ್ದು, ಯೋಜನೆಗಳು ಯಶಸ್ವಿಗೊಂಡಿವೆ ಎಂಬುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜನ ಸ್ಥೋಮವೇ ಸಾಕ್ಷಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಸಾಧಿಸಿ, ಅಧಿಕಾರಕ್ಕೆ ಬಳಲಿದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ವೇದಿಕೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಂಸದ ವೈ.ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಅಶೋಕ ಜೀರೆ, ಜಿಲ್ಲಾಧಿಕಾರಿ ಟಿ.ವೆಂಕಟೇಶ ಮತ್ತಿತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts