More

    ಮೈಸೂರು ಜಿಲ್ಲೆಯಲ್ಲಿದ್ದಾರೆ 1,994 ಶತಾಯುಷಿಗಳು

    ಮೈಸೂರು: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 1,994 ಶತಾಯುಷಿ ಮತದಾರರು ಇದ್ದಾರೆ. ವಿಶೇಷ ಎಂದರೆ ಶತಾಯುಷಿಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರು 749 ಜನ ಇದ್ದರೆ, 1,245 ಮಹಿಳೆಯರು ಇದ್ದಾರೆ.
    ಎಚ್.ಡಿ.ಕೋಟೆ ತಾಲೂಕಿನಲ್ಲಿ 161 ಮಹಿಳೆಯರು ಶತಾಯುಷಿಗಳಿದ್ದರೆ ಹುಣಸೂರಿನಲ್ಲಿ 155, ವರುಣದಲ್ಲಿ 139, ತಿ.ನರಸೀಪುರದಲ್ಲಿ 133, ನಂಜನಗೂಡಿನಲ್ಲಿ 124, ಚಾಮುಂಡೇಶ್ವರಿಯಲ್ಲಿ 122, ಕೃಷ್ಣರಾಜನಗರದಲ್ಲಿ 110, ಕೃಷ್ಣರಾಜ ಕ್ಷೇತ್ರದಲ್ಲಿ 90, ಪಿರಿಯಾಪಟ್ಟಣದಲ್ಲಿ 89, ಚಾಮರಾಜ ಕ್ಷೇತ್ರದಲ್ಲಿ 81, ನರಸಿಂಹರಾಜದಲ್ಲಿ 41 ಮಹಿಳಾ ಶತಾಯುಷಿಗಳಿದ್ದಾರೆ.

    ಪುರುಷ ಶತಾಯುಷಿಗಳಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಹೆಚ್ಚು 118 ಜನ ಇದ್ದಾರೆ. ಉಳಿದಂತೆ ಚಾಮರಾಜದಲ್ಲಿ 83, ಎಚ್.ಡಿ.ಕೋಟೆಯಲ್ಲಿ 79, ವರುಣದಲ್ಲಿ 77, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಲಾ 75, ನಂಜನಗೂಡಿನಲ್ಲಿ 67, ತಿ.ನರಸೀಪುರದಲ್ಲಿ 52, ಕೃಷ್ಣರಾಜನಗರದಲ್ಲಿ 46, ಪಿರಿಯಾಪಟ್ಟಣದಲ್ಲಿ 42, ನರಸಿಂಹರಾಜ ಕ್ಷೇತ್ರದಲ್ಲಿ 35 ಶತಾಯಷಿ ಪುರುಷ ಮತದಾರರು ಇದ್ದಾರೆ.

    ಬ್ಯಾಲೆಟ್ ಪೇಪರ್ ಪಡೆಯಲು 41,617 ಜನ ಅರ್ಹರು
    ಚುನಾವಣಾ ಆಯೋಗದ ನೀತಿಯಂತೆ 85 ವರ್ಷ ಮೇಲ್ಪಟ್ಟ 41,617 ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ಅರ್ಹರಾಗಿದ್ದಾರೆ. ಶತಾಯುಷಿಗಳಲ್ಲದೇ 85 ರಿಂದ 99 ವರ್ಷದವರ ಪಟ್ಟಿಯಲ್ಲಿಯೂ ಮಹಿಳೆಯರೇ ದೀರ್ಘಾಯುಷಿಗಳಾಗಿದ್ದಾರೆ. ಬ್ಯಾಲೆಟ್ ಪೇಪರ್ ಪಡೆಯಲು 18,541 ಪುರುಷ ಮತದಾರರು ಇದ್ದರೆ, ಮಹಿಳೆಯರ ಸಂಖ್ಯೆ 23,075 ಮತದಾರರು ಇದ್ದಾರೆ. ಇಬ್ಬರು ತೃತೀಯ ಲಿಂಗಿ ಇದ್ದಾರೆ.
    ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿದ್ದು, ಪುರುಷರ ಸಂಖ್ಯೆ 3,057 ಇದ್ದರೆ, ಮಹಿಳೆಯರ ಸಂಖ್ಯೆ 2,822, ತೃತೀಯ ಲಿಂಗಿ ಒಬ್ಬರು ಇದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 5,880 ಬ್ಯಾಲೆಟ್ ಪೇಪರ್ ಪಡೆಯಲು ಅರ್ಹ ಹಿರಿಯ ನಾಗರಿಕರು ಇದ್ದಾರೆ. ಪಿರಿಯಾಪಟ್ಟಣದಲ್ಲಿ 2664 ಹಿರಿಯ ನಾಗರಿಕರಿದ್ದು, 1003 ಪುರುಷ, 1881 ಮಹಿಳಾ ಮತದಾರರು ಇದ್ದಾರೆ. ಕೃಷ್ಣರಾಜನಗರದಲ್ಲಿ ಒಟ್ಟು 3,551 ಮತದಾರರಲ್ಲಿ 1,346 ಪುರುಷ, 2,205 ಮಹಿಳಾ ಮತದಾರರು ಇದ್ದಾರೆ. ಹುಣಸೂರಿನಲ್ಲಿ ಒಟ್ಟು 3,698 ಮತದಾರಿದ್ದು, 1,492 ಪುರುಷ, 2,206 ಮಹಿಳಾ ಮತದಾರರು ಪಟ್ಟಿಯಲ್ಲಿದ್ದಾರೆ.

    ಎಚ್.ಡಿ.ಕೋಟೆಯಲ್ಲಿ 3,473 ಮತದಾರರಲ್ಲಿ 1,463 ಪುರುಷ, 2,010 ಮಹಿಳಾ ಮತದಾರರು, ನಂಜನಗೂಡಿನಲ್ಲಿ 3,671 ಮತದಾರರಲ್ಲಿ 1,545 ಪುರುಷ, 2,126 ಮಹಿಳಾ ಮತದಾರರು ಇದ್ದಾರೆ. ಚಾಮುಂಡೇಶ್ವರಿಯಲ್ಲಿ 4,409 ಮತದಾರರಲ್ಲಿ 2,004 ಪುರುಷ, 2,405 ಮಹಿಳಾ ಮತದಾರರು ಇದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ 5,880 ಮತದಾರರಲ್ಲಿ 3,057 ಪುರುಷ, 2,822 ಮತದಾರರು ಇದ್ದಾರೆ. ಚಾಮರಾಜ ಕ್ಷೇತ್ರದಲ್ಲಿ 4,708 ಮತದಾರರಲ್ಲಿ 2,391 ಪುರುಷ, 2,317 ಮಹಿಳಾ ಮತದಾರರು ಇದ್ದರೆ, ನರಸಿಂಹರಾಜ ಕ್ಷೇತ್ರದಲ್ಲಿ 2,857 ಮತದಾರರ ಪೈಕಿ 1,468 ಪುರುಷ, 1,389 ಮಹಿಳಾ ಮತದಾರರು ಇದ್ದಾರೆ. ವರುಣ ಕ್ಷೇತ್ರದಲ್ಲಿ 3,565 ಮತದಾರರು ಇದ್ದು, 1,534 ಪುರುಷ, 2,031 ಮಹಿಳಾ ಮತದಾರರು ಇದ್ದಾರೆ. ತಿ.ನರಸೀಪುರ ಕ್ಷೇತ್ರದಲ್ಲಿ 3,141 ಮತದಾರು ಇದ್ದು, 1,238 ಪುರುಷ, 1,903 ಮಹಿಳಾ ಮತದಾರರು ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

    33,887 ಅಂಗವಿಕಲರು

    ಜಿಲ್ಲೆಯಲ್ಲಿ ಒಟ್ಟು 33,887 ಮತದಾರರು ಅಂಗವಿಕಲರಿದ್ದು, 19,759 ಪುರುಷರು, 14,123 ಮಹಿಳಾ ಅಂಗವಿಕಲ ಮತದಾರರು ಇದ್ದಾರೆ. ಒಟ್ಟು ಐವರು ತೃತೀಯ ಲಿಂಗಿ ಅಂಗವಿಕಲ ಮತದಾರರು ಜಿಲ್ಲೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts