More

    ರೋಗಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

    ಕಳಸ: ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ಈಚಲಹೊಳೆ ಗಿರಿಜನ ಕಾಲನಿಗೆ ಸೂಕ್ತ ರಸ್ತೆ ಇಲ್ಲದ ಕಾರಣ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತುತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಬುಧವಾರ ಶೇಷಮ್ಮ ತೀವ್ರ ಅಸ್ವಸ್ಥರಾಗಿದ್ದರು. ಗ್ರಾಮಸ್ಥರು ಜೋಳಿಗೆಯಲ್ಲಿ ಶೇಷಮ್ಮ ಅವರನ್ನು ಹೊತ್ತುಕೊಂಡು ಬಂದು ಕಳಸ ಆಸ್ಪತ್ರೆಗೆ ಸೇರಿಸಿದರು. ಕಳಕೋಡಿನಿಂದ ಈಚಲಹೊಳೆಗೆ ಮೂರು ಕಿ.ಮೀ ದೂರವಿದೆ. ಈಚಲಹೊಳೆ ಕಾಲನಿಯಲ್ಲಿ ಸುಮಾರು 10 ಗಿರಿಜನ ಕುಟುಂಬಗಳಿವೆ. ಕಾಲನಿಗೆ ರಸ್ತೆಯಿಲ್ಲ. ಗಿರಿಜನರು ರೋಗಿಗಳನ್ನು ಜೋಳಿಗೆಯಲ್ಲೇ ಹೊತ್ತುಕೊಂಡು ಕಳಕೋಡುವರೆಗೆ ತರಬೇಕಿದೆ.
    ಕಳೆದ ವರ್ಷವೂ ಇಲ್ಲಿ ಅನಾರೋಗ್ಯಗೊಂಡಿದ್ದ ಮಹಿಳೆಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದರು.
    ಕಳಕೋಡಿನಿಂದ ಈಚಲಹೊಳೆಗೆ ರಸ್ತೆ ನಿರ್ಮಿಸಬೇಕು ಎಂದು ಗಿರಿಜನರು ಬೇಡಿಕೆ ಇಡುತ್ತಲೇ ಇದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವೆ ಪ್ರಸ್ತಾಪಿತ ರಸ್ತೆಯ ಅರ್ಧ ಕಿ.ಮೀ. ಹಾದು ಹೋಗುವುದರಿಂದ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದೆ ಎಂಬುದು ಗ್ರಾಮಸ್ಥರ ಆರೋಪ.
    ನ್ಯಾಷನಲ್ ಪಾರ್ಕ್ ಹೆಸರಲ್ಲಿ ನಮಗೆ ಅರಣ್ಯ ಇಲಾಖೆ ಕಿರುಕುಳ ಕೊಡುತ್ತಿದೆ. ನಮಗೆ ಯಾವ ಮೂಲ ಸೌಕರ್ಯವೂ ಸಿಕ್ಕಿಲ್ಲ. ಈ ಹಿಂದಿನ ಶಾಸಕರಿಗೆ ಮನವಿ ಕೊಟ್ಟಿದ್ದೆವು. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಈಗಿನ ಶಾಸಕರು ನಮ್ಮ ಸ್ಥಿತಿ ನೋಡಿ ರಸ್ತೆ ಮಾಡಿಕೊಡಬೇಕು ಎಂದು ಸ್ಥಳೀಯ ರಮೇಶ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts