More

    ವಿಜಯಪುರ ಜಿಲ್ಲೆ ಈ ಬಾರಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ

    ವಿಜಯಪುರ : ದ್ವೀತಿಯ ಪಿಯುಸಿ ಪರೀಕ್ಷೆ -ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ಜಿಲ್ಲೆ ಈ ಬಾರಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದು ಶೇ. 84.69 ರಷ್ಟು -ಫಲಿತಾಂಶ ಪಡೆದುಕೊಂಡಿದೆ. ಕಳೆದ 2022ರಲ್ಲಿ ನಡೆದ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆ 3ನೇ ಸ್ಥಾನ ಪಡೆದುಕೊಂಡು ಶೇ.77.14ರಷ್ಟು -ಫಲಿತಾಂಶ ಪಡೆದುಕೊಂಡಿತ್ತು.

    ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಹಾಗೂ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ರಾಹುಲ್ ರಾಠೋಡ ಎಂಬ ವಿದ್ಯಾರ್ಥಿ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ಇತ 600 ಅಂಕಗಳಿಗೆ 592 ಅಂಕಗಳಿಸಿ ಸಾಧನೆ ಮೆರೆದಿದ್ದಾನೆ. ಬಡತನದಲ್ಲಿ ಬೆಳೆದ ರಾಹುಲ್ ತಂದೆ-ತಾಯಿ ದುಡಿಯಲು ಮಹಾರಾಷ್ಟ್ರಕ್ಕೆ ಗೂಳೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಎಸ್.ಕೆ. ಪಿಯು ಕಾಲೇಜ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾನೆ.

    ಇತನ ತಂದೆ ಮೂತಿಲಾಲ್ ರಾಠೋಡ, ತಾಯಿ ಸವಿತಾ ದಂಪತಿಗೆ ರಾಹುಲ್ ಸೇರಿ ಮೂವರು ಮಕ್ಕಳಿದ್ದಾರೆ. ಮಹಾರಾಷ್ಟçದಲ್ಲಿ ತಗಡಿನ ಶೆಡ್‌ನಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ರಾಹುಲ್ ಸಹ ಕಾಲೇಜ್ ರಜೆ ಇದ್ದಾಗ ತಂದೆ-ತಾಯಿ ಜತೆ ಕೂಲಿ ಕೆಲಸ ಮಾಡುತ್ತಿದ್ದಾನೆ. ಓದಿನಲ್ಲಿ ಶಾಲೆಯಲ್ಲಿ ಮೊದಲಿನಿಂದಲೂ ಟಾಪರ್ ಆಗಿದ್ದಾನೆ. ಮೂಲತ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಯಾಗಿದ್ದು, ದುಡಿಯಲು ವಿಜಯಪುರ ಜಿಲ್ಲೆಯಲ್ಲಿ ವಾಸವಿದ್ದಾರೆ. ನಂತರ ಕೂಲಿ ಸಾಲದಕ್ಕೆ ಮಹಾರಾಷ್ಟ್ರಕ್ಕೆ ದುಡಿಯಲು ತಂದೆ ತಾಯಿ ಇಬ್ಬರು ಹೆಣ್ಣು ಮಕ್ಕಳು ಹೋಗಿದ್ದು, ರಾಹುಲ್ ಮಾತ್ರ ವಿದ್ಯಾಭ್ಯಾಸಕ್ಕಾಗಿ ತಾಳಿಕೋಟೆಯಲ್ಲಿಯೇ ವಸತಿ ನಿಲಯದಲ್ಲಿ ವಾಸವಿದ್ದಾನೆ. ಸದ್ಯ ಪರೀಕ್ಷೆ ಮುಗಿದ ಮೇಲೆ ಇತ ಸಹ ಮಹಾರಾಷ್ಟ್ರಕ್ಕೆ ಹೋಗಿದ್ದಾನೆ.

    ಮುಂದೆ ಕಲಾ ವಿಭಾಗದಲ್ಲಿ ಬಿಎ ಎಲ್‌ಎಲ್‌ಬಿ ಮಾಡುವ ಮಹಾದಾಸೆಯನ್ನು ರಾಹುಲ್ ರಾಠೋಡ ಹೊಂದಿದ್ದಾನೆ. ಪಿಯುಸಿಯಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಕ್ಕೆ ಅವರ ತಂದೆ, ತಾಯಿ ಮಗನಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.

    ವಿಜಯಪುರ ಜಿಲ್ಲೆ – ಬಡತನದಲ್ಲಿ ಅರಳಿದ ಪ್ರತಿಭೆ

    ಜಿಲ್ಲೆಯ ಸಿಂದಗಿಯ ಜ್ಞಾನಭಾರತಿ ಕಾಲೇಜ್‌ನ ಭಾಗಪ್ಪ ಗಂಗಪ್ಪ ಭಾಸ್ಗಿ ಎಂಬ ವಿದ್ಯಾರ್ಥಿ ಕಲಾ ವಿಭಾಗದಲ್ಲಿ 600ಕ್ಕೆ 591 ಅಂಕಗಳಿಸಿ ರಾಜ್ಯಕ್ಕೆ 9ನೇ ಹಾಗೂ ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ. ಮೂಲತ: ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೋಹನ್ ಇಟಗಿ ಗ್ರಾಮದ ಕಡುಬಡತನದಲ್ಲಿ ಜನಿಸಿದ ವಿದ್ಯಾರ್ಥಿ ಭಾಗಪ್ಪ ತಂದೆ ಗಂಗಪ್ಪನಿಗೆ ಮೂವರು ಮಕ್ಕಳು ಅವರಲ್ಲಿ ಬಾಗಪ್ಪ ಕಿರಿಯ ಮಗನಾಗಿದ್ದಾನೆ. ಇತನ ತಂದೆಗೆ ಕೇವಲ ಎರಡು ಎಕರೆ ಜಮೀನಿದ್ದು ಆ ಜಮೀನಿನಲ್ಲಿ ವಿದ್ಯಾರ್ಥಿ ಬಾಗಪ್ಪ ಸಹ ಕೆಲಸ ಮಾಡುತ್ತಾ ದಿನಾಲು ಕಾಲೇಜಿಗೆ ಬಂದು ಕಷ್ಟಪಟ್ಟು ಪರಿಶ್ರಮದಿಂದ ಓದಿ ಈ ಒಂದು -ಫಲಿತಾಂಶ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಕಾಲೇಜ್ ಮಂಡಳಿ ಸಂತಸ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts