More

    ಎಸ್‌ಐ ನೇಮಕಾತಿ ಹಗರಣ; ನ್ಯಾ. ಬಿ.ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗದ ಮುಂದೆ ಯಾರೆಲ್ಲ ಹಾಜರಾಗಿದ್ದರು..?

    ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣ ಸಂಬಂಧ ನ್ಯಾಯಮೂರ್ತಿ ಬಿ. ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗ, ತನಿಖಾಧಿಕಾರಿಗಳ ಹೇಳಿಕೆ ದಾಖಲು ಪೂರ್ಣಗೊಳಿಸಿದೆ. ಕೆಲವೇ ದಿನಗಳಲ್ಲಿ ಆರೋಪಿಗಳ ವಾದ ಕೈಗೆತ್ತಿಕೊಳ್ಳಲಿದೆ.

    545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸತ್ಯಾಂಶ ತಿಳಿಯಲು ರಾಜ್ಯ ಸರ್ಕಾರ ನ್ಯಾ.ಬಿ.ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿದೆ. ಪ್ರತಿದಿನ ವಾದ-ಪ್ರತಿವಾದ ಆಲಿಸುತ್ತಿರುವ ಆಯೋಗ, ಹಗರಣದ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಗಳ ಹೇಳಿಕೆಯನ್ನು ಪಡೆದಿದೆ. ಜತೆಗೆ ಆರೋಪಿತರ ಪರ ವಕೀಲರು ಸಹ ತನಿಖಾಧಿಕಾರಿಗಳನ್ನು ಪಾಟಿ ಸವಾಲು ಮಾಡಿದ್ದು, ಅದು ಪೂರ್ಣವಾಗಿದೆ. ಇನ್ನೂ ಕೆಲ ತನಿಖಾಧಿಕಾರಿಗಳ ಹೇಳಿಕೆ ದಾಖಲು ಮಾತ್ರ ಬಾಕಿ ಉಳಿದಿದೆ. ನವೆಂಬರ್ 5ರ ಒಳಗಾಗಿ ಪೂರ್ಣವಾಗಲಿದೆ.

    ಇದಾದ ಮೇಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವ ಅಭ್ಯರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಾದ ಆಲಿಸಲಾಗುತ್ತದೆ. ಈಗಾಗಲೆ ಎಲ್ಲ ಆರೋಪಿಗಳಿಗೂ ನೋಟಿಸ್ ಜಾರಿ ಮಾಡಿದ್ದು, ಆಯೋಗದ ಮುಂದೆ ವಾದ ಮಾಡಲು ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕೆಲ ಆರೋಪಿಗಳು, ವಕೀಲರ ಮೂಲಕ ಹಾಜರಾಗಿದ್ದು, ವಾದ ಆಲಿಸಲು ಆಯೋಗ ಸಿದ್ಧವಿದೆ. ಒಂದು ವೇಳೆ ಗೈರಾದರೇ ಮುಂದಿನ ಹಂತಕ್ಕೆ ತಲುಪಲಿದೆ ಎಂದು ಆಯೋಗ ತಿಳಿಸಿದೆ.

    ಬೆಂಗಳೂರು, ಕಲಬುರಗಿ ಸೇರಿ ವಿವಿಧೆಡೆ ದಾಖಲಾಗಿರುವ ಪ್ರಕರಣಗಳ ಪೈಕಿ 17 ಕೇಸಿನ ತನಿಖೆ ಪೂರ್ಣ ಮಾಡಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದೆ. ಈಗಾಗಲೆ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ ಅಭ್ಯರ್ಥಿಗಳು ಮತ್ತು ಪರೀಕ್ಷಾರ್ಥಿಗಳಿಂದ ಹಣ ಪಡೆದು ವಾಮಮಾರ್ಗದಲ್ಲಿ ಅನುಕೂಲ ಮಾಡಿಕೊಟ್ಟಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸೇರಿ 113 ಮಂದಿಯನ್ನು ಬಂಧಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts