More

    ಬಡ ರೈತರ ಪ್ರಗತಿಗೂ ಶ್ರಮಿಸಿ – ಶಾಸಕ ಐಹೊಳೆ ಸಲಹೆ

    ಕಬ್ಬೂರ: ಬಡ ರೈತರಿಗೂ ಸಾಲ ಕೊಡುವ ಮೂಲಕ ಅವರ ಆರ್ಥಿಕ ಪ್ರಗತಿಗೆ ಸಹಕಾರಿ ಸಂಘಗಳು ಮುಂದಾಗಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದ್ದಾರೆ.

    ಗ್ರಾಮದಲ್ಲಿ ಸೋಮವಾರ ಕಲ್ಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಲ್ಲಿಕಾರ್ಜುನ ಮಾಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಲ್ಮೇಶ್ವರ ಸಹಕಾರಿ ಸಂಘ ಹಾಗೂ ಅಕ್ಕ ಮಹಾದೇವಿ ಮಹಿಳಾ ಮಂಡಳದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಮಾದರಿಯಾಗುವಲ್ಲಿ ಕತ್ತಿ ಸಹೋದರರ ಪಾತ್ರ ಮಹತ್ತರವಾಗಿದೆ ಎಂದು ಸ್ಮರಿಸಿದರು.

    ಜಿಪಂ ಸದಸ್ಯ ಪವನ ಕತ್ತಿ ಮಾತನಾಡಿ, ಸಂಘ-ಸಂಸ್ಥೆಗಳನ್ನು ರಾಜಕೀಯದಿಂದ ದೂರವಿಟ್ಟು ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಬೆಳವಣಿಗೆ ಸಾಧ್ಯ ಎಂದರು. ಸುಣಧೋಳಿಯ ಶಿವಾನಂದ ಸ್ವಾಮೀಜಿ ಮಾತನಾಡಿ, ಸಂಘದ ಕೆಲಸ ಮನೆಯ ಕೆಲಸವೆಂದು ಕಾರ್ಯನಿರ್ವಹಿಸಿದರೆ ಮಾತ್ರ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದರು.

    ಶ್ರೀಶೈಲಪೀಠದ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಅಪ್ಪಾಸಾಹೇಬ ಕುಲಗೋಡ, ನೀಲಕಂಠ ಕಪ್ಪಲಗುದ್ದಿ, ಬಿಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ, ಬ್ಯಾಂಕ್ ನಿರೀಕ್ಷಕ ಬಿ.ಎಸ್.ಉತ್ತುರೆ, ಎಂ.ಎಸ್.ಸೋನಾವನೆ ಮತ್ತು ಎ.ಬಿ.ಕಬ್ಬೂರ ಅವರನ್ನು ಸನ್ಮಾನಿಸಲಾಯಿತು.

    ಸುರೇಶ ಬೆಲ್ಲದ, ಮಹಾಲಿಂಗ ಹಂಜಿ, ಎಂ.ಜಿ.ಜಿವನಿ, ಬಸಲಿಂಗ ಕಾಡೇಶಗೋಳ, ವಿಠ್ಠಲ ಮಾಳಿ, ಶಂಕ್ರಯ್ಯ ಮಠದ, ಮಲ್ಲಪ್ಪ ಜಿವನಿ, ನಾಗಪ್ಪ ಮಗದುಮ್ಮ, ಅರ್ಜುನ ಕಿವಡ ಇದ್ದರು. ಡಾ.ಆರ್.ಕೆ.ಬಾಗಿ ಸ್ವಾಗತಿಸಿದರು. ಜಿ.ಬಿ.ಸಂಗಟೆ ಮತ್ತು ಎಂ.ಎಸ್.ಸೋನಾವನೆ ನಿರೂಪಿಸಿದರು. ಸುಜಾತಾ ಗೋಂದಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts