More

    ಕಳವಾಗಿದ್ದ ಟ್ರ್ಯಾಕ್ಟರ್ ಟ್ರೇಲರ್​ಗಳನ್ನು ಪತ್ತೆ ಹಚ್ಚಿದ ಪೊಲೀಸರು

    ಮುಂಡರಗಿ: ಪಟ್ಟಣದ ಪೊಲೀಸರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳತನವಾಗಿದ್ದ ಟ್ರ್ಯಾಕ್ಟರ್ ಟ್ರೇಲರ್​ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ರಾತ್ರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸುಂಕದ ಅವರ ಸಮ್ಮುಖದಲ್ಲಿ ಟ್ರಾ್ಯಕ್ಟರ್ ಮಾಲೀಕರಿಗೆ ಟ್ರೇಲರ್​ಗಳನ್ನು ಹಸ್ತಾಂತರಿಸಿದರು.

    ಟ್ರ್ಯಾಕ್ಟರ್ ಟ್ರೇಲರ್​ಗಳ ಕಳ್ಳತನ ನಡೆದಿರುವ ಕುರಿತು ತಾಲೂಕಿನ ವಿವಿಧ ಗ್ರಾಮಗಳ ಹಲವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಮೂರು ಟ್ರ್ಯಾಕ್ಟರ್ ಟ್ರೇಲರ್​ಗಳನ್ನು ಪತ್ತೆ ಮಾಡಿದ್ದು, ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.

    ಎಸ್​ಪಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸುಂಕದ, ಡಿವೈಎಸ್​ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್ಲಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರು ಸುಮಾರು 6 ಲಕ್ಷ ರೂ. ಮೌಲ್ಯದ ಒಟ್ಟು 3 ಟ್ರಾ್ಯಕ್ಟರ್ ಟ್ರೇಲರ್​ಗಳನ್ನು ವಶಪಡಿಸಿಕೊಂಡು ಅವುಗಳನ್ನು ಮೂಲ ಮಾಲೀಕರಿಗೆ ಒಪ್ಪಿಸಿದ್ದಾರೆ. ಟ್ರಾ್ಯಕ್ಟರ್ ಟ್ರೇಲರ್ ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರಿಗೆ ಎಸ್​ಪಿ ಹಾಗೂ ಡಿವೈಎಸ್​ಪಿ ವಿಶೇಷ ಬಹುಮಾನ ಘೊಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts