More

    ರಾಜ್ಯದ ಜನರಿಗೆ ಕೊರೊನಾ ಜತೆ ಡೆಂಘೆ ಭೀತಿ

    ಬೆಂಗಳೂರು: ವಾರ್ಷಾರಂಭದಲ್ಲೇ ಆವರಿಸಿರುವ ಕರೊನಾ ವೈರಸ್ ಭೀತಿಯೊಂದಿಗೆ ಈಗ ಡೆಂಘೆ, ಎಚ್1 ಎನ್1, ಚಿಕೂನ್​ಗುನ್ಯಾ ಸೋಂಕು ಹೆಚ್ಚುತ್ತಿದ್ದು, ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಈಗಾಗಲೇ 131 ಕರೊನಾ ವೈರಸ್ ಶಂಕಿತರ ರಕ್ತದ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 129 ಮಂದಿಯಲ್ಲಿ ಸೋಂಕು ದೃಢಪಟ್ಟಿಲ್ಲ. ಆದಾಗಿಯೂ ನಿತ್ಯ ಸೋಂಕಿತ ದೇಶಗಳಿಂದ ನೂರಾರು ಮಂದಿ ರಾಜ್ಯಕ್ಕೆ ಬರುತ್ತಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಇದರ ನಡುವೆ ಕಳೆದ 43 ದಿನಗಳಲ್ಲಿ 662 ಡೆಂಘ, 233 ಚಿಕೂನ್​ಗುನ್ಯಾ, 133 ಎಚ್1 ಎನ್1 ಪ್ರಕರಣಗಳು ವರದಿಯಾಗಿವೆ.

    3,792 ಡೆಂಘೆ ಶಂಕಿತರಲ್ಲಿ 2,542 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, 662 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 170 ಪ್ರಕರಣ ವರದಿಯಾಗಿದ್ದು, ಕೊಪ್ಪಳ 79, ಚಿತ್ರದುರ್ಗ 58, ಗದಗ 43, ದಾವಣಗೆರೆ 42 ಪ್ರಕರಣ ಸೇರಿ ಹಲವು ಜಿಲ್ಲೆಗಳಲ್ಲಿ ಡೆಂಘ ವ್ಯಾಪಿಸಿದೆ. ಚಿತ್ರದುರ್ಗದಲ್ಲಿ 30, ಶಿವಮೊಗ್ಗ ಮತ್ತು ಯಾದಗಿರಿಯಲ್ಲಿ 23 ಸೇರಿ ರಾಜ್ಯದಲ್ಲಿ 233 ಮಂದಿ ಚಿಕೂನ್​ಗುನ್ಯಾದಿಂದ ನರಳುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 69, ಉಡುಪಿ 32 ಸೇರಿ 133 ಮಂದಿಯಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದೆ.

    ರೋಗ ಲಕ್ಷಣಗಳು:

    ಕರೊನಾ ವೈರಸ್: ವಿಪರೀತ ಜ್ವರ, ಎದೆ ನೋವಿನಿಂದ ಕೂಡಿದ ಉಸಿರಾಟ ತೊಂದರೆ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ, ನ್ಯುಮೋನಿಯ.

    ಡೆಂಘೆ: ಜ್ವರ, ತಲೆನೋವು, ಮೂಗು ಸೋರುವಿಕೆ, ಗಂಟಲು ನೋವು, ವಾಂತಿ, ಮೈ-ಕೈ ನೋವು, ಅತಿಸಾರ, ಗಂಭೀರ ಹಂತದಲ್ಲಿ ಕರುಳಿನಲ್ಲಿ ರಕ್ತಸ್ರಾವ ಹಾಗೂ ಮೈಮೇಲೆ ಕೆಂಪು ಬರೆಗಳು ಕಾಣಿಸಿಕೊಳ್ಳುತ್ತವೆ.

    ಚಿಕೂನ್​ಗುನ್ಯಾ: ವಿಪರೀತ ಮೈ-ಕೈ ನೋವು, ತಲೆಸಿಡಿತ, ಮಂಡಿ, ಮೊಣಕೈ, ಮುಂಗೈಗಳಲ್ಲಿ ತೀವ್ರ ನೋವು.

    ಎಚ್1ಎನ್1: ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಕಣ್ಣು ಕೆಂಪಾಗುವುದು, ತೀವ್ರ ಮೈ-ಕೈ ನೋವು, ತಲೆನೋವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts