More

    ನಾನು ಮಾಡಿದ ಒಂದೇ ಒಂದು ಅಪರಾಧ ಯಾವುದೆಂದರೆ… ಬೈಡೆನ್​ ವಿರುದ್ಧ ಟ್ರಂಪ್​ ವಾಗ್ದಾಳಿ

    ನ್ಯೂಯಾರ್ಕ್: ಬಾಯಿ ಮುಚ್ಚಿಕೊಂಡು ಸುಮ್ಮನಿರಲು ನೀಲಿ ತಾರೆಗೆ ಹಣ ನೀಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಹಾಲಿ ಅಧ್ಯಕ್ಷ ಜೋ ಬೈಡೆನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    76 ವರ್ಷದ ಟ್ರಂಪ್​ ಫ್ಲೊರಿಡಾದಲ್ಲಿರುವ ತಮ್ಮ ಮನೆಯಿಂದ ಬೆಂಬಲಿಗರು ಮತ್ತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ದೇಶವು ನರಕಕ್ಕೆ ಹೋಗುತ್ತಿದೆ. ಅಮೆರಿಕದಲ್ಲಿ ಈ ರೀತಿ ನಡೆಯುತ್ತದೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ನಾಶ ಮಾಡಲು ನೋಡುವವರಿಂದ ನಮ್ಮ ದೇಶವನ್ನು ನಿರ್ಭೀತಿಯಿಂದ ರಕ್ಷಿಸಿದ್ದೇ ನಾನು ಮಾಡಿದ ಒಂದೇ ಒಂದು ಅಪರಾಧ ಎಂದರು.

    ನಾವು ಅಮೆರಿಕ ಇತಿಹಾಸದ ಕರಾಳ ಸಮಯದಲ್ಲಿ ಜೀವಿಸುತ್ತಿರುವಾಗ, ಕನಿಷ್ಠ ಈ ಕ್ಷಣಕ್ಕಾದರೂ ನಾನು ಮಹಾನ್ ಉತ್ಸಾಹದಲ್ಲಿದ್ದೇನೆ ಎಂದು ನಾನು ಹೇಳಬಲ್ಲೆ. ನಮ್ಮ ದೇಶವು ನರಕಕ್ಕೆ ಹೋಗುತ್ತಿದೆ. ಗಡಿಗಳನ್ನು ಮುಕ್ತವಾಗಿಸಿದ್ದಕ್ಕೆ ಮತ್ತು ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಂಡ ನಿರ್ಧಾರಗಳಿಂದಾಗಿ ಜಗತ್ತು ಈಗಾಗಲೇ ನಮ್ಮನ್ನು ನೋಡಿ ನಗುತ್ತಿದೆ ಎಂದು ಟ್ರಂಪ್​ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಏಳು ದಿನದಲ್ಲಿ ಬೆಂಗಳೂರಿನಿಂದ ಒಡಿಶಾ; ಸಾವಿರ ಕಿ.ಮೀ ಕ್ರಮಿಸಿದರು ಸಂಬಳ ಸಿಗದ ಕಾರ್ಮಿಕರು!

    ಕ್ರಿಮಿನಲ್ ಪ್ರಕರಣದ ವಿಚಾರಣೆಗಾಗಿ ನ್ಯೂಯಾರ್ಕ್​ನ ಕೋರ್ಟ್​ಗೆ ಮಂಗಳವಾರ ಮಧ್ಯಾಹ್ನ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಜರಾಗುತ್ತಿದ್ದಂತೆಯೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬೆರಳಚ್ಚು ಪಡೆಯುವ, ಭಾವಚಿತ್ರ ತೆಗೆಯುವ ಮತ್ತು ಅಧಿಕೃತವಾಗಿ ಆರೋಪ ಹೊರಿಸುವ ಕಾರ್ಯ ನಡೆಯಬೇಕಿದೆ.

    ಈ ಬೆಳವಣಿಗೆಯಿಂದ ಮುಂದಿನ ವರ್ಷ ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಟ್ರಂಪ್​ಗೆ ಹಿನ್ನಡೆಯಾಗಿದೆ. ಈ ಮಧ್ಯೆ ಕೋರ್ಟ್ ಹೊರಗೆ ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. 76 ವರ್ಷದ ರಿಪಬ್ಲಿಕನ್ ನಾಯಕ ಟ್ರಂಪ್, ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದ ಪ್ರಥಮ ಮಾಜಿ ಅಧ್ಯಕ್ಷರಾಗಿದ್ದಾರೆ. ಅಕ್ರಮ ಸಂಬಂಧದ ವಿಚಾರವನ್ನು ಮುಚ್ಚಿಹಾಕಲು ನೀಲಿ ಚಿತ್ರ ತಾರೆ ಸ್ಟಾರ್ವಿು ಡೇನಿಯಲ್ಸ್​ಗೆ 2016ರಲ್ಲಿ ಹಣ ನೀಡಿದ್ದ ಪ್ರಕರಣದಲ್ಲಿ ಮ್ಯಾನ್​ಹಟನ್ ನ್ಯಾಯಾಲಯ ಕಳೆದ ವಾರ ಟ್ರಂಪ್​ಗೆ ಛೀಮಾರಿ ಹಾಕಿತ್ತು. ಆದರೆ, ಈ ಕೇಸ್​ನಲ್ಲಿ ಅವರ ವಿರುದ್ಧ ನಿರ್ದಿಷ್ಟ ಆರೋಪವನ್ನು ಇನ್ನೂ ಸಲ್ಲಿಸಲಾಗಿಲ್ಲ. ತಾನು ನಿದೋಷಿ ಎಂದು ಟ್ರಂಪ್ ವಾದಿಸಿದ್ದಾರೆ. ಟ್ರಂಪ್ ಬೆಂಬಲಾರ್ಥ ದೇಶದಾದ್ಯಂತ ರ್ಯಾಲಿಗಳು ನಡೆಯುತ್ತಿವೆ. (ಏಜೆನ್ಸೀಸ್​)

    ಖಾಸಗಿ ವಿಡಿಯೋ ಲೀಕ್​ ಮಾಡುವುದಾಗಿ ನಟ ಸುದೀಪ್​ಗೆ ಬೆದರಿಕೆ ಪತ್ರ: ದೂರು ದಾಖಲು

    ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ; ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ನಗದು ವಶ!

    ಏಪ್ರಿಲ್​ 8, 9 ರಂದು ಪ್ರಧಾನಿ ಮೋದಿ ಮೈಸೂರು ಪ್ರವಾಸದ ಸಂಪೂರ್ಣ ಮಾಹಿತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts