More

    ಪತಂಜಲಿ ಪರಿವಾರದ ತಾಯಿಬೇರು ಬಾಬಾ ರಾಮದೇವ

    ಹುಬ್ಬಳ್ಳಿ: ಹರಿದ್ವಾರದ ಪತಂಜಲಿ ಯೋಗ ಸಮಿತಿಯ ಬೆಳ್ಳಿ ಹಬ್ಬ ಹಾಗೂ ಅಗ್ನಿ ಹೋತ್ರ ಕಾರ್ಯಕ್ರಮವನ್ನು ನಗರದ ಪತಂಜಲಿ ಕಚೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

    ನೇತೃತ್ವ ವಹಿಸಿದ್ದ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಮಾತನಾಡಿ, ಯೋಗವನ್ನು ಪ್ರಸಾರ ಮಾಡುವಲ್ಲಿ ಪತಂಜಲಿ ಸಂಸ್ಥೆಯ ಪಾತ್ರ ಮಹತ್ತರವಾಗಿದೆ. ಬಾಬಾ ರಾಮದೇವ ಅವರು ಪತಂಜಲಿ ಪರಿವಾರದ ತಾಯಿಬೇರು. 1995ರ ಜನವರಿ 5ರಂದು ಸೈಕಲ್ ಮೇಲೆ ಪ್ರಾರಂಭವಾದ ಯೋಗ ಯಾತ್ರೆ ಇಂದು ವಿಶ್ವಮಟ್ಟದಲ್ಲಿ ಬೆಳೆದಿದೆ. ಒಂದು ಲಕ್ಷಕ್ಕೂ ಹೆಚ್ಚು ನಿರಂತರ ಯೋಗ ಕೇಂದ್ರ, 5 ಲಕ್ಷಕ್ಕೂ ಹೆಚ್ಚು ಯೋಗ ಶಿಕ್ಷಕರು, 5 ಸಾವಿರ ಪತಂಜಲಿ ಚಿಕಿತ್ಸಾಲಯ, 2500 ಆಯುರ್ವೆದ ವೈದ್ಯರು ಇದ್ದಾರೆ. ಅಗ್ನಿ ಹೋತ್ರ ನೆರವೇರಿಸುವ ಮೂಲಕ ಕರೊನಾದಿಂದ ಮುಚ್ಚಿದ್ದ ಯೋಗ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದರು.

    ಕಿಸಾನ್ ಸೇವಾ ಸಮಿತಿ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗರ ಮಾತನಾಡಿ, ಬಾಬಾ ರಾಮದೇವ ಅವರ ಮಾರ್ಗದರ್ಶನದಲ್ಲಿ ಭವರಲಾಲ್ ಆರ್ಯ ಅವರು ರಾಜ್ಯಾದ್ಯಂತ ಯೋಗ ಯಾತ್ರೆ ನಡೆಸಿ ಜನರು ‘ರೋಗಮುಕ್ತ ಯೋಗಯುಕ್ತ’ ಜೀವನ ನಡೆಸಲು ಕಾರಣರಾಗಿದ್ದಾರೆ ಎಂದರು.

    ಇದೇ ಸಂದರ್ಭದಲ್ಲಿ ಆನ್​ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೆರಿಕ, ಬಹರಿನ್, ದುಬೈನಂಥ ರಾಷ್ಟ್ರಗಳಲ್ಲಿರುವ ಕನ್ನಡಿಗರು ತಮ್ಮ ಮನೆಯಲ್ಲಿ ಅಗ್ನಿಹೋತ್ರ ನೆರವೇರಿಸಿದರು.

    ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಕರ್ನಾಟಕ ಪ್ರಾಂತೀಯ ಪ್ರಭಾರಿಗಳಾದ ಆರತಿ ಕಾನಗೋ, ಸುಜಾತ ಮರ್ಲಾ, ಸಹ ಪ್ರಾಂತ ಪ್ರಭಾರಿಗಳಾದ ಬಾಲಚಂದ್ರ ಶರ್ವ, ಡಾ. ಜ್ಞಾನೇಶ್ವರ ನಾಯಕ, ಯುವ ಭಾರತ ರಾಜ್ಯ ಪ್ರಭಾರಿ ಕಿರಣಕುಮಾರ, ಎಂ.ಡಿ. ಪಾಟೀಲ, ಕ್ಯಾಪ್ಟನ್ ರಾಜೇಂದ್ರ ಸಿಂಗ್, ಶರಣೇಗೌಡ, ಬಸವರಾಜ, ಶರಣಪ್ಪ ಜಿ., ಪೂರ್ಣಿಮಾ ಹರವಿ, ಬಸವರಾಜ ಹರವಿ, ರತ್ನಾ ಬೆನ್ನಿ ಇತರರು ಇದ್ದರು.

    ಹೆಸರು ನೋಂದಾಯಿಸಿ

    ಆನ್​ಲೈನ್ ಯೋಗ ತರಗತಿಗಳು ನಡೆಯುತ್ತಿವೆ. ಹೆಸರು ನೋಂದಾಯಿಸಲು ಮೊ.ಸಂ. 9008100880/99/96ಗೆ ಸಂರ್ಪಸಬಹುದು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts