More

    ದೇಶ, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಕಾಂಗ್ರೆಸ್ ಧ್ಯೇಯ

    ಗದಗ/ನರೇಗಲ್ಲ: ದೇಶದ ಅಭಿವೃದ್ಧಿ ಹಾಗೂ ಹಾವೇರಿ- ಗದಗ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಕೈಬಲಪಡಿಸಬೇಕು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
    ರೋಣ ಪಟ್ಟಣದಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಜನರು ತೋರಿಸುತ್ತಿರುವ ಬೆಂಬಲ ಹಾಗೂ ಪ್ರೀತಿಗೆ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲ ನೋಡಿದರೆ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಿದೆ. ದೇಶದಲ್ಲಿ ಬಿಜೆಪಿ ಅಧಿಕಾರದಿಂದ ಜನರು ಬೇಸತ್ತಿದ್ದಾರೆ. ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಜನರೆ ಉತ್ತರ ನೀಡುತ್ತಾರೆ. ಅವರ ಸುಳ್ಳುಗಾರಿಕೆಗೆ ಈ ಬಾರಿ ಮರುಳಾಗದೆ ಕಾಂಗ್ರೆಸ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.
    ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಬಡ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಈ ಯೋಜನೆಗಳನ್ನು ಜನರು ಮೆಚ್ಚುತ್ತಿದ್ದಾರೆ. ಬಿಜೆಪಿಗೆ ಈಗಾಗಲೇ ಸೋಲಿನ ಭೀತಿ ಕಾಡುತ್ತಿದೆ. ಅದರಿಂದ ನಮ್ಮ ಯೋಜನೆಗಳ ಬಗ್ಗೆ ಟೀಕೆಗಳನ್ನು ನಡೆಸುತ್ತಿದ್ದಾರೆ ಎಂದರು.
    ನುಡಿದಂತೆ ನಡೆದ ರಾಜ್ಯ ಸರ್ಕಾರ: ನಂತರ ನರೇಗಲ್ಲ ಪಟ್ಟಣದಲ್ಲಿಯೂ ಆನಂದಸ್ವಾಮಿ ಗಡ್ಡದೇವರಮಠ ಶನಿವಾರ ಸಂಜೆ ರೋಡ್ ಶೋ ನಡೆಸಿ ಮತಯಾಚಿಸಿದರು. ಕೊಂತಿಮಲ್ಲಪ್ಪನ ದೇವಸ್ಥಾನದಿಂದ ಪ್ರಾರಂಭವಾದ ರೋಶ್ ಶೋ, ಗ್ರಾಮದೇವತಾ ದೇವಸ್ಥಾನ, ಗಜಾನನ ದೇವಸ್ಥಾನ, ಈರಣ್ಣನ ಪಾದಗಟ್ಟಿ, ದರ್ಗಾ, ಮಾರೆಮ್ಮನ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್ ಮೂಲಕ ಬಸ್ ನಿಲ್ದಾಣದ ಹತ್ತಿರ ಬಂದು ತಲುಪಿತು. ಈ ವೇಳೆ ಮಾತನಾಡಿದ ಆನಂದಸ್ವಾಮಿ ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾಂಟಿಗಳನ್ನು ವರ್ಷದ ಒಳಗಾಗಿ ಕಾಂಗ್ರೆಸ್ ಈಡೇರಿಸಿ ನುಡಿದಂತೆ ನಡೆದಿದೆ. ಹಸಿವುಮುಕ್ತ ಕರ್ನಾಟಕ ಮಾಡುವ ಉದ್ದೇಶ, ಬಡತನ ನಿರ್ಮೂಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಆದ್ಯತೆ ನೀಡುತ್ತಿದ್ದಾರೆ. ಐದು ಗ್ಯಾರಂಟಿಗಳು ರಾಜ್ಯದ ಎಲ್ಲ ಜನರಿಗೆ ನೀಡಲಾಗುತ್ತಿದೆ. ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತಿದ್ದು, ಮಹಿಳೆಯರಿಗೆ ಬಹಳ ಅನುಕೂಲವಾಗಿದೆ ಎಂದರು.
    ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಿದ್ದಣ್ಣ ಬಂಡಿ, ಡಾ. ಕೆ.ಬಿ. ಧನ್ನೂರ, ಎಸ್.ಎ. ಪಾಟೀಲ, ಎಚ್.ಎಸ್. ಸೋಂಪುರ, ವಿ.ಬಿ. ಸೋಮನಕಟ್ಟಿಮಠ, ವಿ.ಬಿ. ಗುಡಿಸಾಗರ, ವೀರಣ್ಣ ಶೆಟ್ಟರ, ಬಸವರಾಜ ನವಲಗುಂದ ಎಂ.ಎಸ್. ಧಡೇಸೂರಮಠ, ಶರಣಪ್ಪ ಬೆಟಗೇರಿ, ಶೇಖಪ್ಪ ಜುಟ್ಲ, ನಿಂಗನಗೌಡ ಲಕ್ಕನಗೌಡ್ರ, ಶರಣಪ್ಪ ಗಂಗರಗೊಂಡ, ಮಲ್ಲಿಕಾರ್ಜುನ ಪಾಟೀಲ, ಗುರುರಾಜ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಕಳಕನಗೌಡ ಪೊಲೀಸ್ ಪಾಟೀಲ, ಶೇಖಪ್ಪ ಕೆಂಗಾರ, ಮೈಲಾರಪ್ಪ ಚಳ್ಳಮರದ, ಅಲ್ಲಾಭಕ್ಷಿ ನದಾಫ, ಹನುಮಂತ ಅಬ್ಬಿಗೇರಿ, ನಿಂಗಪ್ಪ ಹೊನ್ನಾಪೂರ, ನಜೀರ ಹದ್ಲಿ, ಎ.ಆರ್. ಮಲ್ಲನಗೌಡ್ರ, ಬಸವರಾಜ ಅಬ್ಬಿಗೇರಿ, ಹನುಮಂತ ದ್ವಾಸಲ, ಅಂದಪ್ಪ ಬಿಚ್ಚೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts