More

    ಅಮಿತ್​ ಷಾ ಶಾಹೀನ್​ ಬಾಗ್​ ಪ್ರತಿಭಟನಾಕಾರರನ್ನು ಭೇಟಿಯಾಗಲ್ಲ ಎಂದ ಗೃಹ ಸಚಿವಾಲಯ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಇಂದು ಶಾಹೀನ್​ ಬಾಗ್​ ಪ್ರತಿಭಟನಾಕಾರರನ್ನು ಭೇಟಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇಂತಹ ಯಾವುದೇ ಭೇಟಿ ನಡೆಯುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

    ನಿನ್ನೆ(ಫೆ.15) ಶಾಹೀನ್​ಬಾಗ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಆಸಿಫ್​ ತೂಫಾನಿ ಹೆಸರಿನ ಮಹಿಳೆ ತಾನು ಮತ್ತು ಇನ್ನೊಬ್ಬ ಮಹಿಳೆ ಇಂದು ಅಮಿತ್​ ಷಾರನ್ನು ಭೇಟಿ ಮಾಡುತ್ತಿರುವುದಾಗಿ ಘೋಷಿಸಿದ್ದರು. ಅಮಿತ್​ ಷಾ ಅವರ ಕಚೇರಿ ಮಧ್ಯಾಹ್ನ 2 ಗಂಟೆಗೆ ಭೇಟಿಯ ಸಮಯವನ್ನು ನಿಗದಿ ಮಾಡಿದೆ ಎಂದು ಹೇಳಿದ್ದರು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಗೃಹ ಸಚಿವಾಲಯ ತಿಳಿಸಿದೆ.

    ಭಾನುವಾರದಂದು ಅಮಿತ್​ ಷಾ ಅವರು ಯಾವುದೇ ಪ್ರತಿಭಟನಾಕಾರರನ್ನು ಭೇಟಿ ಮಾಡುತ್ತಿಲ್ಲ ಎಂದು ಗೃಹ ಸಚಿವಾಲಯವು ಸ್ಪಷ್ಟನೆ ನೀಡಿದೆ.

    ಇಂದು ಅಮಿತ್​ ಷಾರನ್ನು ಭೇಟಿ ಮಾಡುತ್ತೇವೆ ಎಂದಿದ್ದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಗೃಹ ಸಚಿವರ ಎದುರು ಇಡುವುದಾಗಿ ತಿಳಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ತಮ್ಮ ಪ್ರಥಮ ಬೇಡಿಕೆ ಎಂದು ಅವರು ಹೇಳಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts