More

    ಸಾಲಕ್ಕೆ ಜಾಮೀನುದಾರನೂ ಜವಾಬ್ದಾರ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

    ಕೋಲಾರ: ಸಾಲ ಮರುಪಾವತಿ ವಿಳಂಬವಾದರೆ ಜಾಮೀನು ಹಾಕಿದವರೂ ಹೊಣೆಗಾರರಾಗುತ್ತಾರೆ. ಅಂತಹವರಿಗೆ ಬೇರೆ ಬ್ಯಾಂಕ್‌ಗಳಲ್ಲೂ ಸಾಲ ಸಿಗುವುದಿಲ್ಲ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.

    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಂಕ್ ಸಿಬ್ಬಂದಿ ಸಭೆಯಲ್ಲಿ ಬ್ಯಾಂಕಿನ ಸಾಲ ವಸೂಲಾತಿ, ಸಾಲ ವಿತರಣೆ, ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಸಾಲ ಪಡೆಯುವಾಗ ಸಾಲಗಾರರ ಜತೆಗೆ ಜಾಮೀನುದಾರರ ಆಧಾರ್‌ಲಿಂಕ್ ಸಹ ಆಗುವುದರಿಂದ ಮರುಪಾವತಿಸುವಲ್ಲಿ ವಿಫಲನಾದರೆ ಜಾಮೀನುದಾರನ (ಸಿಬಿಲ್ ಮಾರ್ಕ್ಸ್) ಸಾಲ ಮರುಪಾವತಿಯ ವೈಯಕ್ತಿಕ ವ್ಯಕ್ತಿಗತ ವರದಿಯಲ್ಲೂ ಹಿನ್ನಡೆಯಾಗುವುದರಿಂದ ಆತನಿಗೆ ಡಿಸಿಸಿ ಬ್ಯಾಂಕ್ ಅಷ್ಟೇ ಅಲ್ಲ ಬೇರೆಲ್ಲೂ ಸಾಲ ಸಿಗುವುದಿಲ್ಲ ಎಂದರು.
    ಸಾಲಕ್ಕೆ ಜಾಮೀನು ಹಾಕುವಾಗ ಎಚ್ಚರ ವಹಿಸಬೇಕು. ಸಾಲಗಾರನ ಮರುಪಾವತಿ ಬದ್ಧತೆ, ಪ್ರಾವಾಣಿಕತೆ ಗಮನಿಸಿ ಸಹಿ ಹಾಕಬೇಕು. ಇಲ್ಲವಾದಲ್ಲಿ ಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ ಎಂದು ಜಾಮೀನುದಾರರನ್ನು ಎಚ್ಚರಿಸಿದರು.

    ಕೃಷಿಯೇತರ ಸಾಲ ಪಡೆದು ಸಮರ್ಪಕ ಮರುಪಾವತಿ ವಾಡದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಸಾಲಗಾರನಿಗೆ ಜಾಮೀನು ಹಾಕಿರುವವರಿಗೂ ನೋಟಿಸ್ ಕಳುಹಿಸಬೇಕು. ಅವರ ಆಸ್ತಿ ಮುಟ್ಟುಗೋಲಿಗೆ ಮುಂದಾದರೆ ಸಾಲಗಾರನೂ ದಾರಿಗೆ ಬರುತ್ತಾನೆ ಎಂದರು.

    ಸಾಲ ಕೊಡುವುದು ವಾತ್ರ ಜವಾಬ್ದಾರಿಯಲ್ಲ, ವಸೂಲಾತಿಯನ್ನೂ ವಾಡಬೇಕು. ಸಾಲ ನೀಡುವಾಗ ಸ್ಥಳ ತನಿಖೆ ನಡೆಸಿ ಸಾಲಗಾರನ ಮರುಪಾವತಿಯ ಪ್ರಾವಾಣಿಕತೆ ಕುರಿತು ವಾಹಿತಿ ಸಂಗ್ರಹಿಸಿ ನಂತರ ಸಾಲ ನೀಡುತ್ತೀರಿ. ಎಲ್ಲ ಸರಿಯಾಗಿದ್ದರೆ ವಸೂಲಾತಿ ಏಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.

    ಗ್ರಾಹಕರೊಂದಿಗೆ ನಿಮ್ಮ ನಡೆ ಸರಿಯಿದ್ದರೆ ಠೇವಣಿ ಹರಿದು ಬರುತ್ತದೆ. ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸಲು ವಿಲವಾದ ಕೆಲವು ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾಲ ವಿತರಣೆ, ವಸೂಲಾತಿಯಲ್ಲಿ ಡಿಸಿಸಿ ಬ್ಯಾಂಕ್ ಗೌರವ ಉಳಿಸಿಕೊಂಡಿದೆ. ಬ್ಯಾಂಕಿನ ಈ ನತೆಗೆ ಕುತ್ತು ಬಾರದಂತೆ ಕೆಲಸ ವಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸಿಬ್ಬಂದಿಗೆ ಇದು ನಮ್ಮ ಬ್ಯಾಂಕ್ ಎಂಬ ಆತ್ಮಪೂರ್ವಕ ಭಾವನೆ ಮೂಡಬೇಕು ಎಂದು ಹೇಳಿದರು.

    ಬ್ಯಾಂಕ್ ಎಜಿಎಂಗಳಾದ ಎಂ.ಆರ್.ಶಿವಕುವಾರ್, ಖಲೀಮುಲ್ಲಾ, ಬೈರೇಗೌಡ, ಹುಸೇನ್ ದೊಡ್ಡಮನಿ, ಅರುಣ್, ಭಾನುಪ್ರಕಾಶ್, ಬೇಬಿ ಶಾಮಿಲಿ, ತಿಮ್ಮಯ್ಯ, ಬಾಲಾಜಿ ಇತರರು ಇದ್ದರು.

    ಆರೋಗ್ಯಪೂರ್ಣ ಸಾಲನೀತಿ ಮುಖ್ಯ: ಬ್ಯಾಂಕಿಗೆ ಬರುವವರನ್ನು ಸಾಲಕ್ಕಾಗಿ ಅಲೆದಾಡಿಸಬಾರದು. ಆರೋಗ್ಯಪೂರ್ಣ ಸಾಲ ನೀತಿ ಬಹುಮುಖ್ಯ ಎಂಬುದನ್ನು ನೋಡಲ್ ಅಧಿಕಾರಿಗಳು ಸೊಸೈಟಿಗಳ ಸಿಬ್ಬಂದಿಗೆ ಮನವರಿಕೆ ವಾಡಿಕೊಡಿ. ಗ್ರಾಹಕರನ್ನು ಅಲೆದಾಡಿಸದೆ, ಲಂಚಕ್ಕೆ ಬೇಡಿಕೆಯಿಡದೆ ಸಕಾಲಕ್ಕೆ ಸಾಲ ನೀಡಿದರೆ ಮರುಪಾವತಿ ಕುರಿತು ಅವರಿಗೂ ಬದ್ಧತೆ ಇರುತ್ತದೆ. ಗ್ರಾಹಕರಿಗೆ ಗೌರವ ಹಾಳಾಗುವ ಭೀತಿ ಇರುವುದರಿಂದ ಪ್ರಾವಾಣಿಕವಾಗಿ ಸಾಲ ನೀಡಿದರೆ ಅಷ್ಟೇ ಪ್ರಾವಾಣಿಕವಾಗಿ ಮರುಪಾವತಿ ವಾಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಗೋವಿಂದಗೌಡರು ತಿಳಿಸಿದರು.

    ಸಂಬಳಕ್ಕೆ ವಾತ್ರ ಕೆಲಸವೇ?: ಬ್ಯಾಂಕ್ ಸಿಬ್ಬಂದಿ ಸಂಬಳ ಪಡೆಯಲು ಕೆಲಸ ವಾಡುತ್ತಿರುವಂತಿದೆ. ಕರ್ತವ್ಯದಲ್ಲಿ ಬದ್ಧತೆ ಇರಬೇಕು. ವಿವಿಧ ರೀತಿಯ 15 ಕೋಟಿ ರೂ. ಸಾಲ ವಸೂಲಾಗಬೇಕಾಗಿದೆ. ಪ್ರತಿ ಶಾಖೆಯ ನೋಡಲ್ ಅಧಿಕಾರಿಗಳು ಸಾಲ ವಸೂಲಾತಿ ಜತೆಗೆ ಠೇವಣಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸೊಸೈಟಿಗಳ ಸಿಬ್ಬಂದಿ ಹೇಳುವುದನ್ನು ಕೇಳಿ ಅದನ್ನೇ ವರದಿ ಒಪ್ಪಿಸಿದರೆ ಸಾಲದು. ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಭಾನುವಾರದೊಳಗೆ ವಸೂಲಾತಿಗೆ ಕೈಗೊಂಡ ಕ್ರಮಗಳ ಕುರಿತು ಸಮರ್ಪಕ ವಾಹಿತಿ ನೀಡಬೇಕು ಎಂದು ಬ್ಯಾಲಹಳ್ಳಿ ಗೋವಿಂದಗೌಡರು ಸೂಚಿಸಿದರು.

    ಸಾಲ ವಸೂಲಾತಿ, ಠೇವಣಿ ಸಂಗ್ರಹ ಕುರಿತು ಸಿಬ್ಬಂದಿಗೆ ನೀಡಿರುವ ಗುರಿ ತಲುಪಬೇಕು. ಸಾಲ ವಸೂಲಿ ಹಣ ಕಟ್ಟಿ ಠೇವಣಿ ಎಂದು ಕಣ್ಣೊರೆಸುವ, ದಿಕ್ಕು ತಪ್ಪಿಸುವ ಕೆಲಸ ವಾಡಬಾರದು. 5 ರಿಂದ 6 ಕೋಟಿ ರೂ. ಕೃಷಿಯೇತರ ಸಾಲವಿದ್ದು, ಸಾಲಗಾರ, ಜಾಮೀನುದಾರನಿಗೆ ನೋಟಿಸ್ ನೀಡಿ ಸಾಲ ವಸೂಲಿ ವಾಡಬೇಕು. 10 ಲಕ್ಷ ರೂ. ಮೇಲೆ ಸಾಲವಿದ್ದರೆ ಅದು ವಾಣಿಜ್ಯ ಸಾಲವೆಂದು ಪರಿಗಣಿಸಲ್ಪಡುವುದರಿಂದ ಕೋಳಿ ಫಾರಂ ಮತ್ತಿತರ ಟಕಗಳಿಗೆ ಸಾಲ ಪಡೆದವರಿಂದ ಮುಲಾಜಿಲ್ಲದೆ ಸಾಲ ವಸೂಲಿ ವಾಡಿ. ಸಾಲಗಾರರ ಖಾತೆ ಸಮೇತ ವಾಹಿತಿ ನೀಡಬೇಕು.
    | ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts